ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಅಧ್ಯಕ್ಷ ಭಾಸ್ಕರ ಪೆರುವಾಯಿ

| Published : Feb 06 2025, 12:19 AM IST

ಸಾರಾಂಶ

ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮುಂದಿನ ೫ ವರ್ಷಗಳ ಅವಧಿಯ ನೂತನ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಭಾಸ್ಕರ ಎಂ. ಪೆರುವಾಯಿ ಮತ್ತು ಉಪಾಧ್ಯಕ್ಷರಾಗಿ ದಾಮೋದರ್ ಕುಲಾಲ್ ಪುನರಾಯ್ಕೆಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮುಂದಿನ ೫ ವರ್ಷಗಳ ಅವಧಿಯ ನೂತನ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಭಾಸ್ಕರ ಎಂ. ಪೆರುವಾಯಿ ಮತ್ತು ಉಪಾಧ್ಯಕ್ಷರಾಗಿ ದಾಮೋದರ್ ಕುಲಾಲ್ ಪುನರಾಯ್ಕೆಗೊಂಡಿದ್ದಾರೆ.

ಸೋಮವಾರ ನೂತನ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಅಭಿನಂದನೆ ಹಾಗೂ ಸಂಘದ ಕಚೇರಿಯ ಮೇಲಂತಸ್ತಿನಲ್ಲಿ ನೂತನವಾಗಿ ನಿರ್ಮಿಸಲಾದ ಸಭಾಂಗಣದ ಉದ್ಘಾಟನೆ ನಡೆಯಿತು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ದಿನೇಶ್ ಪಿ.ವಿ. ನೂತನ ಸಭಾಂಗಣವನ್ನು ಉದ್ಘಾಟಿಸಿ ಶುಭಹಾರೈಸಿದರು.

ಪುತ್ತೂರು ಕುಲಾಲ ಸಂಘ ಅಧ್ಯಕ್ಷ ಶೇಷಪ್ಪ ಕುಲಾಲ್, ಹಿರಿಯ ನ್ಯಾಯವಾದಿ ಉದಯರವಿ ಕುಂಬ್ಲಾಜೆ ಶುಭ ಹಾರೈಸಿದರು. ಕುಲಾಲ ಸಂಘದ ಕಾರ್ಯದರ್ಶಿ ರವಿ ಪಿ. ಕುಲಾಲ್, ಮಾಣಿ ಕುಲಾಲ ಸಂಘದ ಅಧ್ಯಕ್ಷ ಮೋಹನ್ ಕುಲಾಲ್, ವಿಟ್ಲ ಸಂಘ ಅಧ್ಯಕ್ಷ ಬಾಬು ಬಿ.ಕೆ., ಬೆಳ್ಳಾರೆ ಸಂಘ ಅಧ್ಯಕ್ಷ ರಾಮಣ್ಣ ಮೂಲ್ಯ, ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ನಿರ್ದೇಶಕರಾದ ನಾಗೇಶ್ ಕುಲಾಲ್, ಪದ್ಮ ಕುಮಾರ್ ಎಚ್., ಬಿ.ಎಸ್. ಕುಲಾಲ್, ಸೇಸಪ್ಪ ಕುಲಾಲ್, ಗಣೇಶ್ ಪಿ., ಪ್ರಶಾಂತ್ ಬಂಜನ್, ರಂಜಿತ, ರೇಖಾ ದಿನೇಶ, ಪೂವಪ್ಪ ಕಡಂಬಾರ್ ವೇದಿಕೆಯಲ್ಲಿದ್ದರು.

ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜನಾರ್ದನ ಮೂಲ್ಯ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕುಲಾಲ್ ಸಂಘದ ರವಿ ಕೈತ್ತಡ್ಕ, ತೇಜ ಕುಮಾರ್, ಮಾಜಿ ಪುರಸಭೆ ಅಧ್ಯಕ್ಷ ಗಣೇಶ್ ರಾವ್, ಕೊಂಬೆಟ್ಟು ಸರ್ಕಾರಿ ಪ್ರೌಢ ಶಾಲೆಯ ಉಪಪ್ರಾಂಶುಪಾಲ ವಸಂತ ಮೂಲ್ಯ, ಉದ್ಯಮಿ ಸಂತೋಷ್ ರೈ ನಳಿಲು ಮತ್ತಿತರರು ಹಾಜರಿದ್ದರು.