ಭಟ್ಕಳ ಗುರು ವಿದ್ಯಾಧಿರಾಜ ಪಿಯು ಕಾಲೇಜಿಗೆ ಶೇ.98 ಫಲಿತಾಂಶ

| Published : Apr 09 2025, 12:35 AM IST

ಸಾರಾಂಶ

ಪರೀಕ್ಷೆ ಕುಳಿತ 88 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದರೆ, 152 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಭಟ್ಕಳ: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಪಟ್ಟಣದ ಶ್ರೀಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜು ಉತ್ತಮ ಸಾಧನೆ ಮಾಡಿದ್ದು, ಪರೀಕ್ಷೆ ಹಾಜರಾದ 275 ವಿದ್ಯಾರ್ಥಿಗಳಲ್ಲಿ 271 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರ ಮೂಲಕ ಶೇ.98.55 ಫಲಿತಾಂಶ ದಾಖಲಿಸಿದೆ.ಪರೀಕ್ಷೆ ಕುಳಿತ 88 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದರೆ, 152 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 194 ವಿದ್ಯಾರ್ಥಿಗಳಲ್ಲಿ 193 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಾಂಚನಾ ಆರ್.ಬಿ. ಶೇ.97.83 ನೊಂದಿಗೆ ಪ್ರಥಮ, ಗಣೇಶ ನಾಯಕ ಶೇ.97.33 ನೊಂದಿಗೆ ದ್ವಿತೀಯ ಮತ್ತು ಮಾನಸಾ ವಿ ನಾಯ್ಕ ಹಾಗೂ ನವ್ಯಶ್ರೀ ನಾಯ್ಕ ಶೇ.97.17 ನೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 60 ವಿದ್ಯಾರ್ಥಿಗಳಲ್ಲಿ 58 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ತಿಲಕ ಹೆಬ್ಬಾರ ಶೇ.97.33 ನೊಂದಿಗೆ ಪ್ರಥಮ, ಅಕ್ಷತಾ ಹೆಗಡೆ ಶೇ.97.17 ನೊಂದಿಗೆ ದ್ವಿತೀಯ ಮತ್ತು ಶ್ರೀಶಾ ಜಿ.ಕೆ. ಶೇ.96.33 ನೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 21 ವಿದ್ಯಾರ್ಥಿಗಳಲ್ಲಿ 20 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ದಿವ್ಯಾ ನಾಯ್ಕ ಶೇ.92.67 ನೊಂದಿಗೆ ಪ್ರಥಮ, ಪವಿತ್ರಾ ನಾಯ್ಕ ಶೇ.87 ನೊಂದಿಗೆ ದ್ವಿತೀಯ ಮತ್ತು ಮಾನಸಾ ನಾಯ್ಕ ಶೇ.84.66 ನೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ವಿದ್ಯಾರ್ಥಿಗಳಾದ ಕಾಂಚನಾ ಆರ್. ಬಿ ವ್ಯವಹಾರ ಅಧ್ಯಯನ ಮತ್ತು ಸಂಖ್ಯಾಶಾಸ್ತ್ರದಲ್ಲಿ, ಮಾನಸಾ ನಾಯ್ಕ, ಶ್ರಾವ್ಯ ಆಚಾರ್ಯ, ಪ್ರಿಯಾ ನಾಯ್ಕ, ನವ್ಯ ದೇಶಭಂಡಾರಿ, ಸಿಂಚನಾ ನಾಯ್ಕ ವ್ಯವಹಾರ ಅಧ್ಯಯನದಲ್ಲಿ, ನವ್ಯಶ್ರೀ ನಾಯ್ಕ, ಹರ್ಷಿತಾ ದೇವಾಡಿಗ ಸಂಖ್ಯಾಶಾಸ್ತ್ರದಲ್ಲಿ, ಅಕ್ಷತಾ ಹೆಗಡೆ ಗಣಿತದಲ್ಲಿ, ಶ್ರೀಶಾ ಜಿ ಕೆ ಗಣಕಶಾಸ್ತ್ರ ಹಾಗೂ ತಿಲಕ ಹೆಬ್ಬಾರ ಗಣಿತ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ 100ಕ್ಕೆ 100 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.