ಸಾರಾಂಶ
ಹಿಂದು ಮುಸ್ಲಿಂ ಭಾವೈಕ್ಯತೆಯ ಮೊಹರಂ ಹಬ್ಬವನ್ನು ಕಲಾದಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಲಾಯಿತು. ಬಜಾರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಅಲಾಯಿ ದೇವರುಗಳನ್ನು ಗ್ರಾಮದಲ್ಲಿ ಸುತ್ತು ಹಾಕಿಸಿ ಪೂಜೆ ಸಲ್ಲಿಸಿದರು. ಹೊಸೂರು ಚೌಕ ಬಳಿ ಭಕ್ತರು ಅಲಾಯಿ ದೇವರಿಗೆ ಸಕ್ರಿ ಊದು ಕೊಟ್ಟು ಭಕ್ತಿ ಸಮರ್ಪಿಸಿದರು.
ಕನ್ನಡಪ್ರಭ ವಾರ್ತೆ ಕಲಾದಗಿ
ಹಿಂದು ಮುಸ್ಲಿಂ ಭಾವೈಕ್ಯತೆಯ ಮೊಹರಂ ಹಬ್ಬವನ್ನು ಕಲಾದಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಲಾಯಿತು.ಬಜಾರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಅಲಾಯಿ ದೇವರುಗಳನ್ನು ಗ್ರಾಮದಲ್ಲಿ ಸುತ್ತು ಹಾಕಿಸಿ ಪೂಜೆ ಸಲ್ಲಿಸಿದರು. ಹೊಸೂರು ಚೌಕ ಬಳಿ ಭಕ್ತರು ಅಲಾಯಿ ದೇವರಿಗೆ ಸಕ್ರಿ ಊದು ಕೊಟ್ಟು ಭಕ್ತಿ ಸಮರ್ಪಿಸಿದರು.
ಅಂಕಲಗಿ, ಗೋವಿಂದಕೊಪ್ಪ, ಚಿಕ್ಕಸೌಂಶಿ, ಹಿರೇಶೆಲ್ಲಿಕೇರಿ, ಉದಗಟ್ಟಿ, ಜುನ್ನೂರಿನಲ್ಲಿ ಒಂದೆರಡು ಮುಸ್ಲಿಂ ಮನೆತನವಿದ್ದು ಅಲ್ಲಿಯೂ ಅಲಾಯಿ ದೇವರನ್ನು ಕೂಡಿಸುವ ಕೆಲಸದಿಂದ ಹಿಡಿದು ದೇವರುಗಳ ವಿಸರ್ಜನೆ ವರೆಗೆ ಮುಸ್ಲಿಮರ ಜೊತೆ ಹಿಂದು ಬಾಂಧವರು ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ ಆದರ್ಶದ ಮೊಹರಂ ಹಬ್ಬ ಆಚರಿಸಿದರು.ಸಣ್ಣ ಸಣ್ಣ ಮಕ್ಕಳು, ಬಾಲಕರು ಯುವಕರು ಮೊಹರಂ ಹಬ್ಬದಲ್ಲಿ ದೇವರುಗಳ ಲಾಡಿ ಧರಿಸಿ ಮನೆ ಮನೆ ತೆರಳಿ ಫಕೀರ ಜೋಳಿಗೆ ಭಿಕ್ಷೆ ಪಡೆದು ಭಕ್ತಿ ಭಾವ ಮೆರೆದರು. ಇನ್ನು ಕೆಲವು ಕುಟುಂಬದವರು ಕೊರಳಲ್ಲಿ ಲಾಡಿಯನ್ನು ಧರಿಸದೇ ಅಲಾಯಿ ದೇವರುಗಳ ಕೊರಳಿಗೆ ಹಾಕಿಸಿ ಹಬ್ಬ ಸಂಪ್ರದಾಯ ಪಾಲಿಸಿದರು. ಅಲಾಬ ದೇವರ ಗುಡಿಯ ಮುಂದೆ ಯುವಕರು ವಯಸ್ಕರು ಕಿಚ್ಚು ಹಾದು ವರ್ಷದ ಬೇಡಿಕೊಂಡ ಹರಕೆ ಸಲ್ಲಿಸಿದರು. ಗ್ರಾಮದಲ್ಲಿನ ಹಿಂದು ಮುಸ್ಲಿಮರೆಲ್ಲರೂ ಒಂದುಗೂಡಿ ಕಲಾದಗಿ ಬಜಾರದಲ್ಲಿನ ಹಾಗೂ ಊರುಗಳಲ್ಲಿ ಪ್ರತಿಷ್ಠಾಪಿಸಿದ ಅಲಾಯಿ ದೇವರುಗಳಿಗೆ, ಉದಗಟ್ಟಿ ಶಾರದಾಳದಲ್ಲಿ ಅಲಾಯಿ ದೇವರುಗಳು ಪೂಜೆ ಸಲ್ಲಿಸಿ ಘಟಪ್ರಭಾ ನದಿಯಲ್ಲಿ ವಿಸರ್ಜಿಸಿದರು.