ಸಾರಾಂಶ
ನಾಗಶೆಟ್ಟಿಕೊಪ್ಪದ ಮಾರುತಿ ದೇವಸ್ಥಾನಕ್ಕೆ ಆಗಮಿಸಿ ಅಲ್ಲಿ ಜನಜಾಗೃತಿ ಸಭೆ ನಡೆಸಲಾಯಿತು. ರಥಯಾತ್ರೆಯುದ್ದಕ್ಕೂ ನೂರಾರು ಮಹಿಳೆಯರು ಕುಂಭ, ಆರತಿಯೊಂದಿಗೆ ಪಾಲ್ಗೊಂಡಿದ್ದರು
ಹುಬ್ಬಳ್ಳಿ: ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದ ಫಕೀರೇಶ್ವರ ಮಠದ ಫಕೀರ ಸಿದ್ಧರಾಮ ಶ್ರೀಗಳ ಅಮೃತ ಮಹೋತ್ಸವದ ಅಂಗವಾಗಿ ನಗರದಲ್ಲಿ ನಡೆಯುತ್ತಿರುವ 9ನೇ ದಿನದ ಭಾವೈಕ್ಯತಾ ರಥಯಾತ್ರೆ ಹಾಗೂ ಜನಜಾಗೃತಿ ಸಭೆ ಗುರುವಾರ ಅದ್ಧೂರಿಯಾಗಿ ನೆರವೇರಿತು.
ಇಲ್ಲಿನ ಕೇಶ್ವಾಪುರದ ಮಾರುತಿ ಹಾಗೂ ಬಸವಣ್ಣ ದೇವಸ್ಥಾನದಿಂದ ರಥಯಾತ್ರೆ ಆರಂಭವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಾಗಶೆಟ್ಟಿಕೊಪ್ಪದ ಮಾರುತಿ ದೇವಸ್ಥಾನಕ್ಕೆ ಆಗಮಿಸಿ ಅಲ್ಲಿ ಜನಜಾಗೃತಿ ಸಭೆ ನಡೆಸಲಾಯಿತು. ರಥಯಾತ್ರೆಯುದ್ದಕ್ಕೂ ನೂರಾರು ಮಹಿಳೆಯರು ಕುಂಭ, ಆರತಿಯೊಂದಿಗೆ ಪಾಲ್ಗೊಂಡಿದ್ದರು.ಕುಕನೂರಿನ ಚನ್ನಮಲ್ಲಯ್ಯ ಶ್ರೀಗಳು, ಬೀಳಗಿಯ ಸಂಗನಬಸವ ದೇವರು, ಮಲ್ಲಿಕಾರ್ಜುನ ಸಾವಕಾರ, ಶಿಲ್ಪಾ ಶೆಟ್ಡರ, ಬಸಯ್ಯ ಹಿರೇಮಠ, ಮಲೇಶಪ್ಪ ಹೆಬಸೂರ, ಮೇನಕಾ ಹುರಳಿ, ಶಂಕರ ಸುಂಕದ, ಹನಮಂತಪ್ಪ ಅವಣ್ಣನವರ, ಸಿದ್ದಯ್ಯ ಹಿರೇಮಠ, ಹನುಮಂತಪ್ಪ ದೊಡ್ಡಮನಿ, ಸದಾಶಿವ ಚೌಶೆಟ್ಟಿ, ವಿಜಯಲಕ್ಷ್ಮೀ ಸೇರಿದಂತೆ ಹಲವರಿದ್ದರು.