ಸಾರಾಂಶ
ಹೊಸಕೋಟೆ: ಭರತನಾಟ್ಯ ಪುರಾತನ ದೈವ ಕಲೆಯಾಗಿದ್ದು, ಮಕ್ಕಳಲ್ಲಿ ಮಾನಸಿಕ - ದೈಹಿಕ ಸಾಮರ್ಥ್ಯ ಹಾಗೂ ನಿಪುಣತೆ ವೃದ್ಧಿಸುತ್ತದೆ ಎಂದು ಮಾಜಿ ಸಂಸದ ಬಚ್ಚೇಗೌಡರ ಪತ್ನಿ ಉಮಾ ಬಚ್ಚೇಗೌಡ ತಿಳಿಸಿದರು. ನಗರದ ಶ್ರೀನವಚೇತನ ನೃತ್ಯಕಲಾ ಅಕಾಡೆಮಿ ಹಾಗೂ ವಿ.ಕೆ.ಆರ್ ನಾಟ್ಯಕಲಾ ಅಕಾಡೆಮಿಯ ಭವ್ಯಶ್ರೀ ಹಾಗೂ ಎ.ಲಾಸ್ಯ ಭರತನಾಟ್ಯ ರಂಗ ಪ್ರವೇಶ ಕಾರ‍್ಯಕ್ರಮದಲ್ಲಿ ಅವರು ಮಾತಾಡಿದರು. ಅಕಾಡೆಮಿ ಗೌರವಾಧ್ಯಕ್ಷ ಡಿ.ಎಸ್.ರಾಜ್‌ಕುಮಾರ್ ಮಾತನಾಡಿ, ೨೦೦೮ರಲ್ಲಿ ಹೊಸಕೋಟೆ ವಿವೇಕಾನಂದ ಶಾಲೆಯಲ್ಲಿ ಭರತನಾಟ್ಯ ತರಗತಿಗಳನ್ನು ಶುರು ಮಾಡಲಾಯಿತು. ಇಂದು ತಾಲೂಕಿನ ಸಾವಿರಾರು ಮಕ್ಕಳು ಈ ಅಕಾಡೆಮಿಯಲ್ಲಿ ವಿದ್ವಾನ್ ಕೋಲಾರ ರಮೇಶ್ ಅವರ ಸಾರಥ್ಯದಲ್ಲಿ ಕಲಿತು ದೇಶ ವಿದೇಶಗಳಲ್ಲಿ ಅತ್ಯುತ್ತಮ ಪ್ರದರ್ಶನಗಳನ್ನು ನೀಡಿದ್ದಾರೆ ಎಂದರು. ವಿದ್ವಾನ್ ಕೋಲಾರ ರಮೇಶ್, ನಾಗರಾಜ ಸ್ವಾಮಿ, ಖ್ಯಾತ ನೃತ್ಯಕಲಾವಿದೆ ಸುವರ್ಣ ವೆಂಕಟೇಶ್, ಸಾಹಿತಿ ಪ್ರೊ.ಚಂದ್ರಶೇಖರ ನಂಗಲಿ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ದೇಶಕ ನಂಜುಂಡೇಗೌಡ, ಡಾ.ಆಲೂರು ಭಾಸ್ಕರ್, ನವಚೇತನ ಅಕಾಡೆಮಿ ಅಧ್ಯಕ್ಷ ಬಚ್ಚಣ್ಣ, ಉಪಾಧ್ಯಕ್ಷ ನಾಗರಾಜ್ ಗುಪ್ತಾ ಇತರರಿದ್ದರು.ಫೋಟೋ: 12 ಹೆಚ್‌ಎಸ್‌ಕೆ 1
ಹೊಸಕೋಟೆಯ ಶ್ರೀ ನವಚೇತನ ನೃತ್ಯಕಲಾ ಅಕಾಡೆಮಿಯ ವಿದ್ವಾನ್ ಕೋಲಾರ ರಮೇಶ್ ಸಾರಥ್ಯದಲ್ಲಿ ಭವ್ಯಶ್ರೀ ಹಾಗೂ ಎ.ಲಾಸ್ಯ ಭರತನಾಟ್ಯ ರಂಗ ಪ್ರವೇಶ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಬಚ್ಚೇಗೌಡರ ಪತ್ನಿ ಉಮಾ ಬಚ್ಚೇಗೌಡ ಮತ್ತಿತರರು ಪಾಲ್ಗೊಂಡಿದ್ದರು.