ಭೀಮಾ ಕೊರೆಗಾಂವ್ ಕದನ ದಲಿತರಿಗೆ ಮಾದರಿಯಾಗಬೇಕು: ಜಯನ್ ಮಲ್ಪೆ

| Published : Jan 01 2025, 12:00 AM IST

ಭೀಮಾ ಕೊರೆಗಾಂವ್ ಕದನ ದಲಿತರಿಗೆ ಮಾದರಿಯಾಗಬೇಕು: ಜಯನ್ ಮಲ್ಪೆ
Share this Article
  • FB
  • TW
  • Linkdin
  • Email

ಸಾರಾಂಶ

ಭೀಮಾ ಕೊರೆಗಾಂವ್ ಕದನ ಕೇವಲ ಬ್ರಾಹ್ಮಣ ರಾಜನ ಸೋಲಿಸಿದ ಗೆಲುವಾಗಿರದೇ ಶತಮಾನಗಳ ಅಸ್ಪೃಶ್ಯತಾಚರಣೆಯ, ಚಾತುರ್ವರ್ಣ ಧರ್ಮದ ಹಾಗೂ ಮೇಲ್ಜಾತಿ ಮೇಲರಿಮೆ ದರ್ಪದ ವಿರುದ್ಧದ ಗೆಲುವಾಗಿದ್ದು, ದಲಿತರು ಸಂಭ್ರಮಿಸುವ ದಿನವಾಗಿದೆ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಕೊರೆಗಾಂವ್‌ನಲ್ಲಿ ಪೇಶ್ವೆ ಸೈನ್ಯದ ವಿರುದ್ಧ ದಲಿತ ಮಹಾರ್ ಸೈನಿಕರು ಯುದ್ಧ ಹೂಡಿ ದಿಗ್ವಿಜಯ ಸಾಧಿಸಿದ ಕದನ ಪ್ರಸ್ತುತ ದಲಿತರಿಗೆ ಹೋರಾಟಕ್ಕೆ ಮಾದರಿಯಾಗಬೇಕಾಗಿದೆ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.ಅವರು ಮಂಗಳವಾರ ಮಲ್ಪೆಯಲ್ಲಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ಆಯೋಜಿಸಿದ ಭೀಮಾ ಕೊರೆಗಾಂವ್ ವಿಜಯೋತ್ಸವಕ್ಕೆ ಹೊರಟ ನಾಯಕರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭೀಮಾ ಕೊರೆಗಾಂವ್ ಕದನ ಕೇವಲ ಬ್ರಾಹ್ಮಣ ರಾಜನ ಸೋಲಿಸಿದ ಗೆಲುವಾಗಿರದೇ ಶತಮಾನಗಳ ಅಸ್ಪೃಶ್ಯತಾಚರಣೆಯ, ಚಾತುರ್ವರ್ಣ ಧರ್ಮದ ಹಾಗೂ ಮೇಲ್ಜಾತಿ ಮೇಲರಿಮೆ ದರ್ಪದ ವಿರುದ್ಧದ ಗೆಲುವಾಗಿದ್ದು, ದಲಿತರು ಸಂಭ್ರಮಿಸುವ ದಿನವಾಗಿದೆ ಎಂದರು.ಹಿರಿಯ ದಲಿತ ನಾಯಕ ದಯಾಕರ್ ಮಲ್ಪೆ ಮಾತನಾಡಿ, ಕೊರೆಗಾಂವ್ ಯುದ್ಧದ ನೆನಪಿಗೆ ಬ್ರಿಟೀಷ್ ಸರ್ಕಾರ ಭೀಮ ಕೊರೆಗಾಂವ್ ಸ್ತಂಭವನ್ನು ನಿರ್ಮಿಸಿದೆ. ಇದು ಮಹಾರಾಷ್ಟ್ರದಲ್ಲಿ ಇನ್ನೂರು ವರ್ಷಗಳ ಹಿಂದೆ ನಡೆದಿದ್ದ ಇತಿಹಾಸವಾಗಿದ್ದು, ಇಂದು ದಲಿತರಿಗೆ ಶೌರ್ಯ ದಿನದ ಪ್ರೇರಣೆಯಾಗಿದೆ ಎಂದು ಹೇಳಿದರು.ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಮಾತನಾಡಿ, ದಲಿತರ ಪ್ರತಿರೋಧದ ಕಾರ್ಯಕ್ರಮವನ್ನು ನಿಷೇಧಿಸಲು ಪ್ರಯತ್ನಿಸುತ್ತಿರುವ ಮನುವಾದಿಗಳಿಗೆ ಕೊರೆಗಾಂವ್ ಇತಿಹಾಸ ಮುಂದಿಟ್ಟು ಹೋರಾಡಬೇಕು ಎಂದರು.ಕಾರ್ಯಕ್ರವದಲ್ಲಿ ಅಂಬೇಡ್ಕರ್ ಯುವಸೇನೆಯ ಸ್ಥಾಪಕ ಅಧ್ಯಕ್ಷ ಹರೀಶ್ ಸಾಲ್ಯಾನ್, ದೀಪಕ್ ಕೊಡವೂರು, ಸಂತೋಷ್ ಕಪ್ಪೆಟ್ಟು, ರವಿ ಲಕ್ಷ್ಮೀನಗರ, ಈಶ್ವರ ಬಿ. ಲಂಬಾಣಿ, ವಿನಯ ಬಲರಾಮನಗರ, ಗುಣವಂತ ತೊಟ್ಟಂ, ಸುಧೀರ್ ಲಂಬಾಣಿ ಮುಂತಾದವರು ಉಪಸ್ಥಿತರಿದ್ದರು. ಭಗವಾನ್ ನೆರ್ಗಿ ಸ್ವಾಗತಿಸಿದರು ಪ್ರಸಾದ್ ಮಲ್ಪೆ ವಂದಿಸಿದರು.