ಮನುಷ್ಯನ ಘನತೆಗಾಗಿ ನಡೆದ ಮೊಟ್ಟಮೊದಲ ಯುದ್ಧವೇ ಕೋರೆಗಾವ್ ಯುದ್ಧ.
ಕನ್ನಡಪ್ರಭ ವಾರ್ತೆ ರಾವಂದೂರುಭೀಮಾ ಕೋರೆಗಾವ್ ಸ್ವಾಭಿಮಾನದ ಯುದ್ಧ ಎಂದು ಅಂಬೇಡ್ಕರ್ ಅಭಿಮಾನಿ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಕೆ. ಕಾಂತರಾಜು ತಿಳಿಸಿದರು.ಗ್ರಾಮದ ಮಾತೃಭೂಮಿ ಕಲ್ಯಾಣ ಮಂಟಪದಲ್ಲಿ ನಡೆದ ಭೀಮ ಕೋರೆಗಾವ್ ವಿಜಯೋತ್ಸವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಚರಿತ್ರೆಯಲ್ಲಿ ಅನೇಕ ಯುದ್ಧಗಳು ನಡೆದಿವೆ. ಆ ಯುದ್ಧಗಳೆಲ್ಲ ದ್ವೇಷ, ಅಸೂಹೆ, ಸ್ವಾರ್ಥದ ಹಿನ್ನೆಲೆಯವು. ಆದರೆ ಮನುಷ್ಯನ ಘನತೆಗಾಗಿ ನಡೆದ ಮೊಟ್ಟಮೊದಲ ಯುದ್ಧವೇ ಕೋರೆಗಾವ್ ಯುದ್ಧ. ಬ್ರಿಟಿಷರಿಗೂ ಮತ್ತು ಮಹಾರಾಷ್ಟçದ ಮರಾಠ ನಡುವೆ ಘಟಿಸಿದ ೩ನೇ ಆಂಗ್ಲೋ-ಮರಾಠ ಕದನವಿದು. ಎರಡು ಸಾವಿರ ವರ್ಷಗಳ ಕಾಲ ಘಾಡ ಕತ್ತಲಲ್ಲಿ ಜೀವಿಸುತ್ತಿದ್ದ ಶೋಷಿತ ಸಮುದಾಯಕ್ಕೆ ಶಿಕ್ಷಣ, ಉದ್ಯೋಗಗಳನ್ನು ಪಡೆದು ಹೊಸ ಲೋಕಕ್ಕೆ ಕಾಲಿರಿಸಲು ಕಾರಣವಾದದ್ದು ಇದೇ ಯುದ್ಧ ಎಂದರು.ಭೀಮ ಆರ್ಮಿ ಗಿರೀಶ್ ಹಾಗೂ ಮೈಸೂರು ಜಿಲ್ಲಾಧ್ಯಕ್ಷ ಮಂಜು, ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ಶಿವರಾಜು ಆರ್. ಹೊಸಳ್ಳಿ. ಉಪಾಧ್ಯಕ್ಷ ಕುಚಲಯ್ಯ ಎಂ. ಶೆಟ್ಟಳ್ಳಿ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಸ್. ಮಹದೇವ್, ತಾಲೂಕು ಪ್ರಧಾನ ಕಾರ್ಯದರ್ಶಿ ಗುರುಮೂರ್ತಿ, ಜಿಲ್ಲಾ ಸಮಿತಿ ಸದಸ್ಯರಾದ ಸುಭಾಷ್, ರಘು, ಪ್ರದೀಪ್ ಇದ್ದರು.--------------