ಕೆ.ಎಂ.ದೊಡ್ಡಿಯಲ್ಲಿ ಭೀಮಾ ಕೋರೆಂಗಾವ್ ವಿಜಯೋತ್ಸವ ಆಚರಣೆ

| Published : Jan 02 2025, 12:33 AM IST

ಸಾರಾಂಶ

ಶಿಕ್ಷಣ ಮೂಲ ಸೌಕರ್ಯ ಕಲ್ಪಿಸಿ ಸೇನೆಯಲ್ಲಿ ಅವಕಾಶ ಕಲ್ಪಿಸಿ ಸ್ವಾಭಿಮಾನ ಮತ್ತು ಶೌರ್ಯ ಕಲ್ಪಿಸಲು ಒಪ್ಪಿದ್ದರಿಂದ ಭೀಮಾ ನದಿ ದಡದಲ್ಲಿ ಪೇಶ್ವೆಯವರ ಸೇನೆ ಹಾಗೂ ಇಂಗ್ಲಿಷ್ ಸೈನಿಕರ ಮಧ್ಯೆ ನಡೆದ ಯುದ್ಧದಲ್ಲಿ 24 ಗಂಟೆಯಲ್ಲಿ 5 ಸಾವಿರ ಪೇಶ್ವೆಗಳ ಸೈನಿಕರನ್ನು ಐನೂರು ಮಹರ್ ಸೈನಿಕರು ಕೊಂದು ಶೌರ್ಯ ಮೆರೆದಿದ್ದಾರೆ.

ಕನ್ನಡಪ್ರಭವಾರ್ತೆ ಕೆ.ಎಂ.ದೊಡ್ಡಿ

ದಲಿತ ಸಂಘಟನೆಗಳ ಒಕ್ಕೂಟದಿಂದ ಭೀಮಾ ಕೋರೆಂಗಾವ್ ವಿಜಯೋತ್ಸವವನ್ನು ಆಚರಿಸಲಾಯಿತು.

ದಲಿತ ಸಂಘಟನೆಗಳ ಒಕ್ಕೂಟದ ಮುಖಂಡ ಮಣಿಗೆರೆ ಕೆ.ಕಬ್ಬಾಳಯ್ಯ ಮಾತನಾಡಿ, ಎಸ್ಟಿ ಹಿಂದುಳಿದ ಮತ್ತು ಶೋಷಿತರ ಶೌರ್ಯದ ಸಂಕೇತವೇ ಕೋರೆಗಾಂವ್ ಯುದ್ಧವಾಗಿದೆ. ಮೇಲ್ವರ್ಗದವರು ಮಾತ್ರ ಆಡಳಿತ ಹಾಗೂ ಯುದ್ಧ ಮಾಡಲು ಯೋಗ್ಯರು. ಕೆಳ ವರ್ಗದವರು ಮೇಲ್ವರ್ಗದವರ ಸೇವೆ ಮಾಡಲು ಮಾತ್ರ ಕೆಳ ವರ್ಗದವರ ಕರ್ತವ್ಯ ಎಂಬ ರೀತಿಯಲ್ಲಿ ಪೇಶ್ವೆಗಳ ಆಡಳಿತ ಮಹಾರ್ ಜನಾಂಗವನ್ನು ನಡೆಸಿಕೊಳ್ಳುತ್ತಿತ್ತು. ಅದರ ವಿರುದ್ಧ ಸಿಡಿದೆದ್ದ ಪರಿಣಾಮ ಕೋರೆಂಗಾವ್ ವಿಜಯೋತ್ಸವ ಆಚರಿಸುತಿದ್ದೇವೆ ಎಂದರು.

ಶಿಕ್ಷಣ ಮೂಲ ಸೌಕರ್ಯ ಕಲ್ಪಿಸಿ ಸೇನೆಯಲ್ಲಿ ಅವಕಾಶ ಕಲ್ಪಿಸಿ ಸ್ವಾಭಿಮಾನ ಮತ್ತು ಶೌರ್ಯ ಕಲ್ಪಿಸಲು ಒಪ್ಪಿದ್ದರಿಂದ ಭೀಮಾ ನದಿ ದಡದಲ್ಲಿ ಪೇಶ್ವೆಯವರ ಸೇನೆ ಹಾಗೂ ಇಂಗ್ಲಿಷ್ ಸೈನಿಕರ ಮಧ್ಯೆ ನಡೆದ ಯುದ್ಧದಲ್ಲಿ 24 ಗಂಟೆಯಲ್ಲಿ 5 ಸಾವಿರ ಪೇಶ್ವೆಗಳ ಸೈನಿಕರನ್ನು ಐನೂರು ಮಹರ್ ಸೈನಿಕರು ಕೊಂದು ಶೌರ್ಯ ಮೆರೆದಿದ್ದಾರೆ ಎಂದು ವಿವರಿಸಿದರು.

ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಕರಡಕೆರೆ ಯೋಗೇಶ್ ಮಾತನಾಡಿ, ಪೇಶ್ವೆಗಳ ಸೈನಿಕರನ್ನು ಐನೂರು ಮಹರ್ ಸೈನಿಕರು ಕೊಂದು ಹುತಾತ್ಮರಾದ ನೆನಪಿನ ವಿಜಯಸ್ತಂಬ ಮಹಾರಾಷ್ಟ್ರದಲ್ಲಿದೆ. ಮಹಾರ್ ಸೈನಿಕರ ಇತಿಹಾಸ ತಿಳಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಪ್ರತಿ ವರ್ಷ ಜನವರಿ ಒಂದರಂದು ಅವರು ಬದುಕಿದ್ದಾಗ ವಿಜಯ ಸ್ತಂಬಕ್ಕೆ ಗೌರವ ಸಲ್ಲಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಕೋರಂಗಾವ್ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದರು.

ಈ ವೇಳೆ ಮುಖಂಡರಾದ ಕರಡಕೆರೆ ಯೋಗೇಶ್, ವಂಸಂತಮ್ಮ ವೆಂಕಟಾಚಲಯ್ಯ, ಚಿದಂಬರಮೂರ್ತಿ, ಮರಿಸ್ವಾಮಿ, ಶಿವಣ್ಣ, ಗುಡಿಗೆರೆ ಬಸವರಾಜು, ಶಿವಲಿಂಗಯ್ಯ, ಜಾಣಪ್ಪ, ವಸಂತಮ್ಮ ಸಿ.ಎ.ಕೆರೆ ಮೂರ್ತಿ, ಕಾಡುಕೊತನಳ್ಳಿ ಅಪ್ಪು, ಸಿದ್ದರಾಜು ಸೇರಿದಂತೆ ಮತ್ತಿತರಿದ್ದರು.