ಬಿಕ್ಕೋಡಿನ ಶಾಲೆಯ ಬಳಿ ಭೀಮ ವಾಕಿಂಗ್‌

| Published : Nov 14 2024, 12:54 AM IST

ಸಾರಾಂಶ

ಬೇಲೂರು ತಾಲೂಕಿನ ಬಿಕ್ಕೋಡು ಕೋಡಿ ಮಠದ ಶಾಲೆಯ ಬಳಿ "ಭೀಮ " ಎಂಬ ಹೆಸರಿನ ಒಂಟಿ ಕಾಡಾನೆ ಮಂಗಳವಾರ ಮಧ್ಯಾಹ್ನ ಕಾಣಿಸಿಕೊಂಡು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಂಗಳವಾರ ಬಿಕ್ಕೋಡಿನಲ್ಲಿ ವಾರದ ಸಂತೆ ನಡೆಯುವುದರಿಂದ ಕಾಡಾನೆಯ ಸಂಚಾರದ ಬಗ್ಗೆ ಸುದ್ದಿ ತಿಳಿದ ಸುತ್ತಮುತ್ತ ಗ್ರಾಮಗಳ ನಿವಾಸಿಗಳು ಆತಂಕದಿಂದ ಸಂತೆಗೆ ತೆರಳಿ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದರು. ಈ ವೇಳೆ ಆನೆ ಬಂದಿದೆ ಎಂಬ ಸುದ್ದಿ ತಿಳಿದು ಜನ ಹೆದರಿದ್ದಾರೆ. ಭೀಮ ಆನೆಯ ಗಂಭೀರ ನಡಿಗೆಯ ದೃಶ್ಯವನ್ನು ಕೆಲವರು ಮೊಬೈಲ್‌ನಲ್ಲಿ ಸೆರೆ ಹಿಡಿದರು.

ಕನ್ನಡಪ್ರಭ ವಾರ್ತೆ ಬೇಲೂರು

ತಾಲೂಕಿನ ಬಿಕ್ಕೋಡು ಕೋಡಿ ಮಠದ ಶಾಲೆಯ ಬಳಿ "ಭೀಮ " ಎಂಬ ಹೆಸರಿನ ಒಂಟಿ ಕಾಡಾನೆ ಮಂಗಳವಾರ ಮಧ್ಯಾಹ್ನ ಕಾಣಿಸಿಕೊಂಡು ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಒಂಟಿ ಕಾಡಾನೆಯೊಂದು ಹಗಲಿನಲ್ಲಿ ಕಾಣಿಸಿಕೊಂಡ ಪರಿಣಾಮ ಶಿಕ್ಷಕರು, ವಿದ್ಯಾರ್ಥಿಗಳು ಕೆಲಕಾಲ ಆತಂಕಕ್ಕೆ ಒಳಗಾದ ಘಟನೆ ತಾಲೂಕು ಬಿಕ್ಕೋಡಿ ಕೆಸಗೋಡು ರಸ್ತೆಯಲ್ಲಿರುವ ಶ್ರೀ ಕೋಡಿಮಠದ ಶಾಲೆಯ ಬಳಿ ನಡೆದಿದೆ. ಅರಣ್ಯ ಕಾರ‍್ಯಪಡೆ ಸಿಬ್ಬಂದಿ ಬಿಕ್ಕೋಡಿನ ಸುತ್ತಮುತ್ತ ಭೀಮ ಹೆಸರಿನ ಒಂಟಿ ಕಾಡಾನೆ ಸಂಚಾರ ಮಾಡುತ್ತಿದ್ದು ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಎಂದು ವಾಟ್ಸಾಪ್ ಗುಂಪಿನಲ್ಲಿ ಮಾಹಿತಿ ಹಾಕಿದ್ದರು.

ಮಂಗಳವಾರ ಬಿಕ್ಕೋಡಿನಲ್ಲಿ ವಾರದ ಸಂತೆ ನಡೆಯುವುದರಿಂದ ಕಾಡಾನೆಯ ಸಂಚಾರದ ಬಗ್ಗೆ ಸುದ್ದಿ ತಿಳಿದ ಸುತ್ತಮುತ್ತ ಗ್ರಾಮಗಳ ನಿವಾಸಿಗಳು ಆತಂಕದಿಂದ ಸಂತೆಗೆ ತೆರಳಿ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದರು. ಈ ವೇಳೆ ಆನೆ ಬಂದಿದೆ ಎಂಬ ಸುದ್ದಿ ತಿಳಿದು ಜನ ಹೆದರಿದ್ದಾರೆ. ಭೀಮ ಆನೆಯ ಗಂಭೀರ ನಡಿಗೆಯ ದೃಶ್ಯವನ್ನು ಕೆಲವರು ಮೊಬೈಲ್‌ನಲ್ಲಿ ಸೆರೆ ಹಿಡಿದರು. ಇನ್ನೂ ಕೆಲ ವಿದ್ಯಾರ್ಥಿಗಳು, ಶಿಕ್ಷಕರು ಶಾಲೆ ಮೇಲೆ ತೆರಳಿ ಭೀಮ ಎಂಬ ದೈತ್ಯ ಆನೆಯನ್ನು ನೋಡಿ ಅಚ್ಚರಿಪಟ್ಟರು. ರಾತ್ರಿ ವೇಳೆ ಕಾಣಸಿಕೊಳ್ಳುತ್ತಿದ್ದ ಕಾಡಾನೆಗಳ ಹಿಂಡು ಈಗ ಹಗಲಿನಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.