ಸಾರಾಂಶ
ಯುಗಾದಿ ಪ್ರತಿಪದೇ ದಿನದಂದು ಗರುಡ ಗಂಭಕ್ಕೆ ನಿರ್ಮಿಸಲಾಗಿದ್ದ ಧ್ವಜವನ್ನು ವಿಸರ್ಜಿಸಲಾಯಿತು. ಇದಕ್ಕಿಂತ ಪೂರ್ವದಲ್ಲಿ ಭಕ್ತರು ಪಲ್ಲಕ್ಕಿಯೊಂದಿಗೆ ಭೋಗಾಪುರೇಶ ಉತ್ಸವ ಮೂರ್ತಿಯೊಂದಿಗೆ ತೆರಳಿ ನೂರಾರು ಭಕ್ತರು ಮಡಿ ಸ್ನಾನ ಮಾಡಿ ಪೂಜೆ ಸಲ್ಲಿಸಿದರು.
ಗಂಗಾವತಿ:
ನವಲಿ ಐತಿಹಾಸಿಕ ಪ್ರಸಿದ್ಧ ಭೋಗಾಪುರೇಶ ಸ್ವಾಮಿಯ ಜಾತ್ರೆ ಮೂರನೇ ದಿನವಾದ ಸೋಮವಾರ ಓಕಳಿ ಕೊಂಡ(ಅವಭೃತ ಸ್ನಾನ) ಜರುಗಿತು. ಉತ್ಸವ ಮೂರ್ತಿಯ ಅರ್ಚಕರು ಸೇರಿದಂತೆ ಆದಾಪುರ, ಗಂಗಾವತಿ, ಸಿಂಧನೂನು ಅಲ್ಲದೆ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಉಪ್ಪಾರ ಸಮಾಜದ ಭಕ್ತರು ಓಕುಳಿ ಕೊಂಡ ಕಾರ್ಯಕ್ರಮ ನೆರವೇರಿಸಿದರು.ಯುಗಾದಿ ಪ್ರತಿಪದೇ ದಿನದಂದು ಗರುಡ ಗಂಭಕ್ಕೆ ನಿರ್ಮಿಸಲಾಗಿದ್ದ ಧ್ವಜವನ್ನು ವಿಸರ್ಜಿಸಲಾಯಿತು. ಇದಕ್ಕಿಂತ ಪೂರ್ವದಲ್ಲಿ ಭಕ್ತರು ಪಲ್ಲಕ್ಕಿಯೊಂದಿಗೆ ಭೋಗಾಪುರೇಶ ಉತ್ಸವ ಮೂರ್ತಿಯೊಂದಿಗೆ ತೆರಳಿ ನೂರಾರು ಭಕ್ತರು ಮಡಿ ಸ್ನಾನ ಮಾಡಿ ಪೂಜೆ ಸಲ್ಲಿಸಿದರು. ದೇಗುಲದ ಸುತ್ತಲು ಪ್ರದಕ್ಷಣೆ ಹಾಕಿದ ನಂತರ ಕೊಂಡದಲ್ಲಿ ಕೆಂಪು ಬಣ್ಣದ ಮಿಶ್ರಿತ ನೀರನ್ನು ಭರ್ತಿ ಮಾಡಿ ನಂತರ ಗಂಗೆ ಪೂಜೆ ನೆರವೇರಿಸಿದರು.ಮೆರವಣಿಗೆ:
ನವಲಿ ಭೋಗಾಪುರೇಶ ಸ್ವಾಮಿಯ ಓಕಳಿ ಕೊಂಡ ಕಾರ್ಯಕ್ರಮಕ್ಕೆ ಬೇಕಾಗಿರುವ ಎಲ್ಲ ಸಾಮಗ್ರಿಗಳನ್ನು ಆದಾಪುರ ಗ್ರಾಮದ ಉಪ್ಪಾರ ಸಮಾಜದ ಭಕ್ತರು ಮೆರವಣಿಗೆ ಮೂಲಕ ದೇಗುಲಕ್ಕೆ ತಂದರು. ಕುದರಿ ಕುಣಿತ ಗಮನ ಸೆಳೆಯಿತು. ಮೆರವಣಿಗೆಯಲ್ಲಿ ನೂತನ ಛತ್ರಿ ಹಾಗೂ ಕೊಂಡಕ್ಕೆ ಬೇಕಾಗಿರುವ ವಸ್ತುಗಳನ್ನು ತರಲಾಯಿತು.ಭಕ್ತಿ ಸಮರ್ಪಿಸಿದ ಭಕ್ತರು:
ದೇವಸ್ಥಾನದ ಮುಂಭಾಗದಲ್ಲಿರುವ ಓಕಳಿ ಕೊಂಡದಲ್ಲಿ ಮೊದಲಿಗೆ ಉತ್ಸವ ಮೂರ್ತಿಯ ಅರ್ಚಕರು ಕೊಂಡಕ್ಕೆ ಪೂಜೆ ಸಲ್ಲಿಸಿದರು. ನಂತರ ನೂರಾರು ಭಕ್ತರು ಅದರಲ್ಲಿ ಜಿಗಿದು ಭಕ್ತಿ ಸಮರ್ಪಿಸಿದರು. ಬಳಿಕ ಬಣ್ಣದ ನೀರನ್ನು ಪ್ರೋಕ್ಷಣೆ ಮಾಡಿಕೊಂಡರು.