ಕುಶಾಲನಗರ: ಭೂಮಿ ಪೂಜೆ ಕಾರ್ಯಕ್ರಮ ಸಂಪನ್ನ

| Published : May 16 2025, 02:10 AM IST

ಸಾರಾಂಶ

ಕುಶಾಲನಗರ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಮತ್ತು ನವೀಕರಣ ಕಾರ್ಯದ ಅಂಗವಾಗಿ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ ಕುಶಾಲನಗರ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಮತ್ತು ನವೀಕರಣ ಕಾರ್ಯದ ಅಂಗವಾಗಿ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿಸಲಾಯಿತು. ಬೆಳಗ್ಗೆ ಶಾಂತಿ ಹೋಮ ನಂತರ ಅಭಿಜಿತ್ ಲಗ್ನದಲ್ಲಿ ಪೂಜೆ ನಡೆಯಿತು. ಶ್ರೀ ರಾಘವೇಂದ್ರ ಭಟ್, ಗಿರೀಶ್ ಭಟ್, ಕೃಷ್ಣಮೂರ್ತಿ ಭಟ್ ಮತ್ತಿತರ ಅರ್ಚಕರ ನೇತೃತ್ವದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಶ್ರೀ ಗಣಪತಿ ಮತ್ತು ಶ್ರೀಮದ್ ಮಹಾಲಕ್ಷ್ಮಿ ದೇವರ ವಿಗ್ರಹ ಪ್ರತಿಷ್ಠಾಪನೆಗೆ ಪೂಜೆ ನಡೆಸಲಾಯಿತು. ಸುಮಾರು 1.5 ಕೋಟಿ ರು. ವೆಚ್ಚದಲ್ಲಿ ದೇವಾಲಯದ ಜೀರ್ಣೋದ್ಧಾರ ಮತ್ತು ನವೀಕರಣ ಕಾಮಗಾರಿ ನಡೆಯಲಿದೆ ಎಂದು ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ರಸ್ತೆ ಅಧ್ಯಕ್ಷರಾದ ಬಿ ಪಿ ಗಣಪತಿ ತಿಳಿಸಿದರು.ಈ ಸಂದರ್ಭದಲ್ಲಿ ಕಿರಣ್ ಜಿ ಗೌರಯ್ಯ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ ಪಿ ಶಶಿಧರ್, ದೇವಾಲಯ ಟ್ರಸ್ಟ್ ಮತ್ತು ಜೀರ್ಣೋದ್ಧಾರ ಸಮಿತಿಯ ಪ್ರಮುಖರಾದ ಕೆ ಆರ್ ಸುಬ್ರಮಣಿ, ಮಹೇಶ್ ನಾಲ್ವಡೆ, ವಿ ಎಸ್ ಆನಂದಕುಮಾರ್, ಚಂದ್ರು, ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ, ಮುಖ್ಯ ಅಧಿಕಾರಿ ಗಿರೀಶ್, ಸದಸ್ಯರಾದ ಜಯವರ್ಧನ್, ಕುಶಾಲನಗರ ಗಣಪತಿ ದೇವಾಲಯ ಅರ್ಚಕರಾದ ನಾಗೇಂದ್ರ ಬಾಬು, ಕುಶಾಲನಗರದ ವಿವಿಧ ದೇವಾಲಯಗಳ ಆಡಳಿತ ಮಂಡಳಿ ಅಧ್ಯಕ್ಷರು, ಪ್ರತಿನಿಧಿಗಳು ಭಕ್ತಾದಿಗಳು ಇದ್ದರು.