ಮೋಟೆಬೆನ್ನೂರು ಪಾದಗಟ್ಟಿ ನಿರ್ಮಾಣಕ್ಕೆ ಭೂಮಿ ಪೂಜೆ

| Published : Nov 21 2025, 02:15 AM IST

ಮೋಟೆಬೆನ್ನೂರು ಪಾದಗಟ್ಟಿ ನಿರ್ಮಾಣಕ್ಕೆ ಭೂಮಿ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಕೋರ್ಟ್ ಮೆಟ್ಟಿಲೇರಿದ್ದ ಮೋಟೆಬೆನ್ನೂರ ಗ್ರಾಮದ ಕುರುಬಗೇರಿ ದುರ್ಗಾದೇವಿ ಪಾದಗಟ್ಟಿ ಜಾಗದ ವಿವಾದ ಇದೀಗ ಮುಕ್ತಾಯಗೊಂಡು ಹಿರಿಯರ ಮಧ್ಯಸ್ಥಿಕೆಯಲ್ಲಿ ಪಾದಗಟ್ಟಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿತು.

ಬ್ಯಾಡಗಿ: ಕೋರ್ಟ್ ಮೆಟ್ಟಿಲೇರಿದ್ದ ಮೋಟೆಬೆನ್ನೂರ ಗ್ರಾಮದ ಕುರುಬಗೇರಿ ದುರ್ಗಾದೇವಿ ಪಾದಗಟ್ಟಿ ಜಾಗದ ವಿವಾದ ಇದೀಗ ಮುಕ್ತಾಯಗೊಂಡು ಹಿರಿಯರ ಮಧ್ಯಸ್ಥಿಕೆಯಲ್ಲಿ ಪಾದಗಟ್ಟಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿತು. ಪಾದಗಟ್ಟಿ ನಿರ್ಮಾಣ ಸಮಿತಿ ಹಾಗೂ ಬಸವರಾಜ ಬ್ಯಾಡಗಿ ಮತ್ತು ಪರಮೇಶ ಬ್ಯಾಡಗಿ ಈರ್ವರ ನಡುವೆ ಪಾದಗಟ್ಟಿ ಜಾಗದ ವಿಷಯ ಕೋರ್ಟ್ ಮೆಟ್ಟಿಲೇರಿತ್ತು ಆದರೆ ಪಾದಗಟ್ಟಿ ನಿರ್ಮಾಣ ಸಮಿತಿಯ ವಿರುದ್ಧ ಕೋರ್ಟ್ ಆದೇಶಿಸಿ ಜಾಗವು ಬಸವರಾಜ ಬ್ಯಾಡಗಿ ಮತ್ತು ಪರಮೇಶ ಬ್ಯಾಡಗಿ ಇವರಿಗೆ ಸೇರಿದ್ದು ಎಂಬುದಾಗಿ ಆದೇಶಿಸಿತ್ತು. ಹಿರಿಯರ ಮಧ್ಯಸ್ಥಿಕೆಯಲ್ಲಿ ಮನವೊಲಿಕೆ:

ಕೋರ್ಟ್ ಆದೇಶ ಬಸವರಾಜ ಬ್ಯಾಡಗಿ ಮತ್ತು ಪರಮೇಶ ಬ್ಯಾಡಗಿ ಇವರ ಪರವಾಗಿ ಬಂದಿದ್ದರೂ ಸಹ ಈರ್ವರು ಸಹ ಪಾದಗಟ್ಟಿ ನಿರ್ಮಾಣಕ್ಕೆ ಜಾಗವನ್ನು ಮೊದಲು ಕೇಳಿದ್ದಿದೆ, ಕೋರ್ಟ್‌ ನಮ್ಮ ಪರವಾಗಿದ್ದರೂ ಸಹ ಗ್ರಾಮದ ಹಿರಿಯರ ಸಲಹೆ ಮೇರೆಗೆ ಹಾಗೂ ಆತ್ಮ ಸಂತೋಷದಿಂದ ಪಾದಗಟ್ಟಿ ನಿರ್ಮಾಣಕ್ಕೆ ಜಾಗವನ್ನು ಬಿಟ್ಟು ಕೊಟ್ಟಿದ್ದಾರೆ.

ಭೂಮಿಪೂಜೆ ಸುಗಮ: ಜಾಗದ ಮಾಲೀಕರ ಸಕಾರಾತ್ಮಕ ನಿರ್ಧಾರದಿಂದ ಕಳೆದ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪಾದಗಟ್ಟಿ ನಿರ್ಮಾಣ ಭೂಮಿಪೂಜೆ ಕಾರ್ಯವು ಸುಗಮವಾಗಿ ನೆರವೇರಿತು. ಈ ಸಂದರ್ಭದಲ್ಲಿ ಶಿವಬಸಣ್ಣ ಕುಳೇನೂರ, ನಾಗರಾಜ ಆನವೇರಿ, ಶಿವಪುತ್ರಪ್ಪ ಅಗಡಿ, ನಿಂಗಪ್ಪ ಕರಿಸಿದ್ದಣ್ಣನವರ, ಸಣ್ಣಫಕ್ಕೀರಪ್ಪ ಬಟ್ಟಲಕಟ್ಟಿ, ಮಾಲತೇಶ ಕುರಿಯವರ, ಶಿವಪ್ಪ ಕರಿಸಿದ್ದಣ್ಣನವರ, ಮಂಜಣ್ಣ ಎಲಿ ಹಾಗೂ ಇನ್ನಿತರರಿದ್ದರು.