ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ಇಲ್ಲಿನ ಶೈಲಾಪುರ ಮುಖ್ಯರಸ್ತೆ ಹಾಗೂ ಮಂಗಳವಾಡ ಲಿಂಗದಹಳ್ಳಿ, ಸಾಸಲಕುಂಟೆ ಸೇರಿ ಒಟ್ಟು ₹21 ಕೋಟಿ ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಯ ಪ್ರಗತಿಗೆ ಅನುದಾನ ಬಿಡುಗಡೆಗೊಳಿಸಿರುವುದಾಗಿ ಶಾಸಕ ಎಚ್.ವಿ.ವೆಂಕಟೇಶ್ ತಿಳಿಸಿದರು.ತಾಲೂಕಿನ ಮಂಗಳವಾಡ ಗ್ರಾಮದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿ ಗುದ್ದಲಿ ಪೂಜೆ ನೆರೆವೇರಿಸಿ ಮಾತನಾಡಿದರು.
ತಾಲೂಕಿನ ಪ್ರಗತಿಗೆ ವಿಶೇಷ ಒತ್ತು ನೀಡಿ ರಸ್ತೆ ಸಮುದಾಯ ಭವನ ಹಾಗೂ ಶಾಲಾ ಕಾಲೇಜಿನ ಕೊಠಡಿಗಳ ಪ್ರಗತಿಗೆ ಸರ್ಕಾರದ ವಿವಿಧ ಯೋಜನೆಯ ಅನುದಾನ ವಿನಿಯೋಗಿಸಿ ಗುದ್ದಲಿಪೂಜೆ ಕಾರ್ಯಕ್ರಮ ನೆರೆವೇರಿಸಲಾಗಿದೆ. ಇನ್ನೂ ಗಡಿ ಗ್ರಾಮಗಳ ಪ್ರಗತಿಗೆ ವಿಶೇಷ ಒತ್ತು ನೀಡಲಾಗಿದೆ. ₹90 ಕೋಟಿ ವೆಚ್ಚದ ಕಾಮಗಾರಿಗಳಿಗೆ ಕ್ರೀಯಾಯೋಜನೆ ಸಿದ್ದಪಡಿಸಿ ಜಿಪಂಗೆ ಕಳುಹಿಸಲಾಗಿದೆ ಎಂದರು.ಸಿಎಂ ಸಿದ್ದಾರಮಯ್ಯ ತಾಲೂಕು ಪ್ರಗತಿ ಹಿನ್ನಲೆಯಲ್ಲಿ ಇನ್ನೂ ಹೆಚ್ಚಿನ ಅನುದಾನ ಕಲ್ಪಿಸುವ ಭರವಸೆ ನೀಡಿದ್ದಾರೆ. ನುಡಿದಂತೆ ನಡೆಯಲು ಬದ್ದರಿದ್ದು, ನನ್ನ ಅಧಿಕಾರದ ಅವಧಿಯಲ್ಲಿ ನಾನು ನೀಡಿದ ಭರವಸೆಯಂತೆ ಗ್ರಾಮೀಣ ಪ್ರಗತಿಗೆ ಹೆಚ್ಚು ಅನುದಾನ ನೀಡಲಿದ್ದೇನೆ. ರಾಜ್ಯ ಸರ್ಕಾರ ಜಾರಿಗೆ ತಂದ ಗ್ಯಾರಂಟಿಗಳು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ, ವಿಪಕ್ಷಗಳ ಮಾತಿಗೆ ಕಿವಿಗೊಡಬೇಡಿ ಎಂದರು.
ಮಂಗಳವಾಡ ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಈಗಾಗಲೇ ಅನುದಾನ ಕಲ್ಪಿಸಲಾಗಿದೆ.15 ದಿನಗಳ ಬಳಿಕ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಜಿಪಂನ ವಿವಿಧ ಯೋಜನೆಯಲ್ಲಿ ₹40 ಕೋಟಿ ವೆಚ್ಚದ ಕಾಮಗಾರಿಗಳ ಪ್ರಗತಿಗೆ ಗುದ್ದಲಿ ಪೂಜೆ ಹಾಗೂ ಸಮುದಾಯ ಭವನಗಳ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಹೇಳಿದರು. ಪಾವಗಡ ಹಾಗೂ ಲಿಂಗದಹಳ್ಳಿ ಮುಖ್ಯ ರಸ್ತೆಗೆ ₹10 ಕೋಟಿ, ಪಾವಗಡ ಅರಸೀಕೆರೆ ಮುಖ್ಯ ರಸ್ತೆಗೆ ₹10 ಕೋಟಿ ಹಾಗೂ ₹1.80 ಕೋಟಿ ವೆಚ್ಚದಲ್ಲಿ ತಾಲೂಕಿನ ಲಿಂಗದಹಳ್ಳಿ- ಸಾಸಲಕುಂಟೆ ಮಾರ್ಗದ 7 ಮೀಟರ್ ಅಗಲದ ಮುಖ್ಯರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ಮಾಡಲಾಯಿತು.ಕೆಪಿಸಿಸಿ ಸದಸ್ಯರಾದ ಕೆ.ಎಸ್.ಪಾಪಣ್ಣ, ಶಂಕರ್ ರೆಡ್ಡಿ, ಕರೆಕ್ಯಾತನಹಳ್ಳಿ ಮಂಜುನಾಥ್, ಪ್ರಕಾಶ್, ಚಂದ್ರಶೇಖರರೆಡ್ಡಿ, ಲೋಕೋಪಯೋಗಿ ಎಇಇ ಅನಿಲ್ ಕುಮಾರ್, ಮದನ್ ರೆಡ್ಡಿ, ಎಪಿಎಂಸಿಯ ಮಾರಣ್ಣ, ತೆಂಗಿನಕಾಯಿ ರವಿ, ಎಂ.ಎಲ್.ಗೋಪಿ, ಹನುಮೇಶ್, ಕರಿಯಣ್ಣ, ಚಿಟ್ಟಿ, ಶ್ರೀರಾಮರೆಡ್ಡಿ, ಕರಿಯಪ್ಪರೆಡ್ಡಿ, ದನುಂಜಯ ,ಪರುಷರಾಮರೆಡ್ಡಿ, ಗವಿರೆಡ್ಡಿ ಸುದರ್ಶನ್ ರೆಡ್ಡಿ, ತಿಪ್ಪನಾಯಕ, ಚಿನ್ನಮ್ಮನಹಳ್ಳಿ ಶ್ರೀರಾಮ್, ಕ್ಯಾತಗಾನಹಳ್ಳಿ ಜಯರಾಮ್, ಈರಣ್ಣ, ಶ್ರೀನಿವಾಸ್ ರೆಡ್ಡಿ, ನಾಗೇಂದ್ರ ನಾಯಕ ಇದ್ದರು.