ದೇವಾಲಯ ಪುನರ್ ನಿರ್ಮಾಣಕ್ಕೆ ಭೂಮಿ ಪೂಜೆ

| Published : Sep 15 2024, 01:55 AM IST

ಸಾರಾಂಶ

ದೇವಸ್ಥಾನದ ಪುನರ್‌ ನಿರ್ಮಾಣ ಹಾಗೂ ಪ್ರತಿಷ್ಠಾಪನೆ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.

ಸಿದ್ದಾಪುರ: ಗುಹ್ಯ ಗ್ರಾಮದ ಗೂಡುಗದ್ದೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಪುನರ್ ನಿರ್ಮಾಣ ಹಾಗೂ ಪುನರ್ ಪ್ರತಿಷ್ಠಾಪನೆ ಕಾರ್ಯಕ್ಕೆ ಶುಕ್ರವಾರ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.

ಈ ಸಂದರ್ಭ ಆಡಳಿತ ಮಂಡಳಿ ಪ್ರಮುಖರು ಊರಿನವರಾದ ಟಿ. ಪಿ. ರಾಮಪ್ಪ, ಕೆ. ಜಿ. ಸುದನ್ ವಿನೋದ್, ರಾಮೇಂದ್ರ, ಮಣಿ, ಆನಂದ, ಮದು, ಸೂರಿ, ರುಬೇಶ್, ಜಯ ಪ್ರಕಾಶ್, ಸುದೀಶ್, ಅಪ್ಪು, ಅಜಿ, ಸರಸು, ಸುನೀತಾ, ಸರಿತಾ ಸೇರಿದಂತೆ ಊರಿನವರು ಇದ್ದರು.

----------------------------

ಅ.17ರಂದು ತಲಕಾವೇರಿ ತೀರ್ಥೋದ್ಭವ

ಕನ್ನಡಪ್ರಭ ವಾರ್ತೆ ಮಡಿಕೇರಿ

ಕನ್ನಡ ನಾಡಿನ ಜೀವನದಿ ಕಾವೇರಿ ತವರು ತಲಕಾವೇರಿಯಲ್ಲಿ ಅ.17ರಂದು ಬೆಳಗ್ಗೆ 7.40 ನಿಮಿಷಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಆಗಲಿದೆ.

ಸೆ. 26ರಂದು ಗುರುವಾರ ಬೆಳಗ್ಗೆ 8.35ಕ್ಕೆ ಸಲ್ಲುವ ತುಲಾ ಲಗ್ನದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವುದು, ಅ.4ರಂದು ಬೆಳಗ್ಗೆ 10.21 ನಿಮಿಷಕ್ಕೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ಆಜ್ಞಾ ಮುಹೂರ್ತ, 14ರಂದು ಸೋಮವಾರ ಬೆಳಗ್ಗೆ 11.35ಕ್ಕೆ ಸಲ್ಲುವ ಧನು ಲಗ್ನದಲ್ಲಿ ಅಕ್ಷಯ ಪಾತ್ರೆ ಇರಿಸುವುದು, ಅಂದು ಸಂಜೆ 4.15 ನಿಮಿಷಕ್ಕೆ ಸಲ್ಲುವ ಕುಂಭ ಲಗ್ನದಲ್ಲಿ ಕಾಣಿಕೆ ಡಬ್ಬಿ ಇಡಲಾಗುತ್ತದೆ ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.