ಕಳೆದ 20 ವರ್ಷಗಳಿಂದ ಈ ಭಾಗದಲ್ಲಿ ಈ ದೇವಾಲಯವನ್ನು ಚಿಕ್ಕದಾಗಿ ನಿರ್ಮಿಸಿದ ನಂತರ ಅದನ್ನು ಭಕ್ತರ ಕೋರಿಕೆ ಮೆರೆಗೆ ಇನ್ನಷ್ಟು ಉನ್ನತ ಮಟ್ಟದಲ್ಲಿ ಜನರ ಆಶಯದಂತೆ ನಿರ್ಮಿಸಲು ಮುಂದಾಗಿದ್ದಾರೆ. ಸ್ಥಳೀಯ ಶಾಸಕರ ಸಹಕಾರದ ಜೊತೆ ಭಕ್ತರ ನೆರವು ಸಹಕಾರ ಅಗತ್ಯವಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿಯ ಶ್ರೀಮಹಾಕಾಳಿ ದೇವಾಲಯದ ಬಳಿ ಮೂರು ಕೋಟಿ ರು. ವೆಚ್ಚದಲ್ಲಿ ನೂತನ ದೇವಾಲಯದ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.ದೇವಾಲದ ಸಂಸ್ಥಾಪಕ ಹಾಗೂ ಮುಖ್ಯ ಅರ್ಚಕ ಗುರುದೇವ್ ಸ್ವಾಮೀಜಿ ನೇತೃತ್ವದಲ್ಲಿ ಭೂಮಿ ಪೂಜಾ ಕೈಂಕರ್ಯ ನೆರೆವೇರಿಸಿ ಶಂಕುಸ್ಥಾಪನೆ ಅಡಿಗಲ್ಲು ಹಾಕಲಾಯಿತು. ತಾಲೂಕಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಲ್.ದಿನೇಶ್ ಮಾತನಾಡಿ, ಈ ಭಾಗದಲ್ಲಿ ಮಹಾಕಾಳಿ ದೇವಾಲಯವನ್ನು ಉನ್ನತ ಮಟ್ಟದಲ್ಲಿ ನಿರ್ಮಿಸುತ್ತಿರುವುದು ಖುಷಿ ತಂದಿದೆ. ಇದರ ಜೊತೆ ಕಾಲ ಭೈರವೇಶ್ವರ ಸ್ವಾಮಿ ದೇವಾಲಯನ್ನು ನಿರ್ಮಾಣಕ್ಕೆ ಕೈ ಹಾಕಿದ್ದಾರೆ ಎಂದರು.
ಕಳೆದ 20 ವರ್ಷಗಳಿಂದ ಈ ಭಾಗದಲ್ಲಿ ಈ ದೇವಾಲಯವನ್ನು ಚಿಕ್ಕದಾಗಿ ನಿರ್ಮಿಸಿದ ನಂತರ ಅದನ್ನು ಭಕ್ತರ ಕೋರಿಕೆ ಮೆರೆಗೆ ಇನ್ನಷ್ಟು ಉನ್ನತ ಮಟ್ಟದಲ್ಲಿ ಜನರ ಆಶಯದಂತೆ ನಿರ್ಮಿಸಲು ಮುಂದಾಗಿದ್ದಾರೆ. ಸ್ಥಳೀಯ ಶಾಸಕರ ಸಹಕಾರದ ಜೊತೆ ಭಕ್ತರ ನೆರವು ಸಹಕಾರ ಅಗತ್ಯವಿದ್ದು, ಎಲ್ಲರ ಸಹಕಾರದೊಂದಿಗೆ ಜೊತೆ ನನ್ನ ನಾನು ನೆರವು ನೀಡುವುದಾಗಿ ಭರವಸೆ ನೀಡಿದರು.ಈ ವೇಳೆ ಫೀ ಕಾರ್ಡ್ ಬ್ಯಾಂಕ್ ನಿರ್ದೇಶಕ ಮಹದೇವು, ಬೆಂಗಳೂರಿನ ಪದ್ಮ, ವಾಗೀಶ್ ದಾಸ್, ಸತೀಶ್ ದಾಸ್, ಹೊಸಹಳ್ಳಿ ಬೋರೇಗೌಡ,ಮಹಿಳಾ ಕಾಂಗ್ರೇಸ್ ಪ್ರದಾನ ಕಾರ್ಯದರ್ಶಿ ಡಾ. ರಾಣಿ ಪ್ರಭಾ, ಮಹೋಲ್ ಬಾಯಿ ಪಟೇಲ್, ಆಶಾ, ಎಚ್. ಬಿ. ಮಂಜೇಗೌಡ ಹಾಗೂ ಪತ್ರಕರ್ತರ ಸಂಘದ ಅಧ್ಯಕ್ಷ ರವೀಶ್ ಸೇರಿದಂತೆ ಇತರ ಸುತ್ತಮುತ್ತಲಿನ ಗ್ರಾಮಸ್ಥರು ಭಕ್ತರು ಉಪಸ್ಥಿತರಿದ್ದರು.ವಿಜೃಂಭಣೆಯಿಂದ ನಡೆದ ಶ್ರೀರಾಮನವಮಿ: ಭಕ್ತರಿಗೆ ಮಜ್ಜಿಗೆ, ಪಾನಕ ವಿತರಣೆ
ಮಂಡ್ಯ:ತಾಲೂಕಿನ ಹೊಳಲು ಗ್ರಾಮದ ಎಚ್.ಎಂ.ನಾಯಕ, ಶ್ರೀಪಿರಿಯಾಪಟ್ಟಲದಮ್ಮ ದೇವಸ್ಥಾನ ಹಾಗೂ ಜಂಗಿ ಮೋಹಲ್ ಸರ್ಕಲ್‌ನ ಶ್ರೀಸಿದ್ದಪ್ಪಾಜಿ ದೇವಸ್ಥಾನದಲ್ಲಿ ಶ್ರೀರಾಮ ಭಕ್ತ ಮಂಡಳಿ ಗೆಳೆಯರ ಬಳಗದಿಂದ ಮೇಲುಕೋಟೆ ಶ್ರೀವೈರಮುಡಿ ಬ್ರಹ್ಮೋತ್ಸವ ಪ್ರಯುಕ್ತ ಶ್ರೀರಾಮನವಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ಶ್ರೀರಾಮ ದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭಕ್ತಾದಿಗಳಿಗೆ ಮಜ್ಜಿಗೆ ಪಾನಕ, ಕೋಸಂಬರಿ, ಹಾಗೂ ಸಿಹಿ ತಿಂಡಿಯನ್ನು ವಿತರಿಸಲಾಯಿತು. ಈ ವೇಳೆ ಶ್ರೀ ವೈರಮುಡಿ ಬ್ರಹ್ಮೋತ್ಸವಕ್ಕೆ ವಾಹನದಲ್ಲಿ ಸಂಚರಿಸುವ ಪ್ರವಾಸಿಗರಿಗೆ ಪಾನಕ ಮಜ್ಜಿಗೆ ವಿತರಿಸಿದರು.ಶ್ರೀ ರಾಮ ಭಕ್ತ ಮಂಡಳಿ ಗೆಳೆಯರ ಬಳಗದ ಸದಸ್ಯರಾದ ಕಾರ್ತಿಕ್, ಪವನ್, ರೇವಂತ್ , ಭರತ್, ನವೀನ್ ,ಸಂಜು, ಶಿವು,ನಿಂಗರಾಜ್, ಮಾಹಿತಿ ಹಾಗೂ ಗ್ರಾಮಸ್ಥರು ಶ್ರೀ ರಾಮ ಸೇವಾ ಸಮಿತಿ ಸದಸ್ಯರುಗಳು ಸೇರಿದಂತೆ ಮತ್ತಿತರು ಹಾಜರಿದ್ದರು.