ವೇಮನ ಪ್ರತಿಮೆ ನಿರ್ಮಾಣಕ್ಕೆ ಭೂಮಿ ಪೂಜೆ

| Published : May 16 2025, 01:57 AM IST

ಸಾರಾಂಶ

ಮಹಾಯೋಗಿ ವೇಮನ ಪ್ರತಿಮೆ ಅನಾವರಣ, ಪ್ಲಾಟ್ ಫಾರಂ ನಿರ್ಮಾಣ ಕಾಮಗಾರಿ ಪ್ರಾರಂಭಕ್ಕೆ ಗುರುವಾರ ತಾಲೂಕಿನ ಲಿಂಗದಹಳ್ಳಿ ಸರ್ಕಲ್‌ನಲ್ಲಿ ಗಣ್ಯರಿಂದ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿಸಲಾಯಿತು.

ಕನ್ನಡಪ್ರಭವಾರ್ತೆ ಪಾವಗಡ

ಮಹಾಯೋಗಿ ವೇಮನ ಪ್ರತಿಮೆ ಅನಾವರಣ, ಪ್ಲಾಟ್ ಫಾರಂ ನಿರ್ಮಾಣ ಕಾಮಗಾರಿ ಪ್ರಾರಂಭಕ್ಕೆ ಗುರುವಾರ ತಾಲೂಕಿನ ಲಿಂಗದಹಳ್ಳಿ ಸರ್ಕಲ್‌ನಲ್ಲಿ ಗಣ್ಯರಿಂದ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿಸಲಾಯಿತು. ಈ ವೇಳೆ ತಾಲೂಕು ರೆಡ್ಡಿ ಜನ ಸಂಘದ ಅಧ್ಯಕ್ಷರಾದ ಬೆಳ್ಳಿಬಟ್ಟಲು ಚಂದ್ರಶೇಖರರೆಡ್ಡಿ ಮಾತನಾಡಿ, ಸಾರ್ವಜನಿಕ ಒತ್ತಾಸೆ ಮೇರೆಗೆ, ಗ್ರಾಪಂನಿಂದ ಅನುಮೋದನೆ ಪಡೆದಿದ್ದು, 2018ರಲ್ಲಿ ರಾಮಲಿಂಗರೆಡ್ಡಿ ಅವರು ಗೃಹ ಸಚಿವರಾಗಿದ್ದ ವೇಳೆ ತಾಲೂಕಿನ ಲಿಂಗದಹಳ್ಳಿ ಗ್ರಾಮಕ್ಕೆ ಆಗಮಿಸಿ ಲಿಂಗದಹಳ್ಳಿ ಹಾಗೂ ಸಾಸಲಕುಂಟೆ ಮಾರ್ಗದ ರಸ್ತೆಗೆ ಯೋಗಿ ವೇಮನ ರಸ್ತೆ ಹಾಗೂ ಲಿಂಗದಹಳ್ಳಿ ಸರ್ಕಲ್‌ಗೆ ಯೋಗಿ ವೇಮನ ವೃತ್ತ ಎಂದು ಅಧಿಕೃತ ಹೆಸರು ನಾಮಕರಣಗೊಳಿಸಿದ್ದರು. ಇದೇ ಲಿಂಗದಹಳ್ಳಿ ವೃತ್ತದಲ್ಲಿ ಸುಮಾರು 5ಲಕ್ಷ ವೆಚ್ಚದಲ್ಲಿ ಶ್ರೀ ಯೋಗಿ ವೇಮನ ಪ್ರತಿಮೆ ಅನಾವರಣಕ್ಕೆ ಪ್ಲಾಟ್‌ ಫಾರಂ ನಿರ್ಮಾಣದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಗಿದೆ.

ಈಗಾಗಲೇ ಯೋಗಿ ವೇಮನ ಪ್ರತಿಮೆ ನಿರ್ಮಾಣದ ಕಾರ್ಯ ನಡೆಯುತ್ತಿದ್ದು ಕಾಮಗಾರಿ ಪೂರ್ಣಗೊಂಡ ಬಳಿಕ ಸ್ವಾಮೀಜಿ ಹಾಗೂ ಶಾಸಕ, ಸಚಿವ ಇತರೆ ಗಣ್ಯರ ಸಮ್ಮುಖದಲ್ಲಿ ಲಿಂಗದಹಳ್ಳಿಯ ಯೋಗಿ ವೇಮನ ಪ್ರತಿಮೆ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದೇವೆ. ಸಹಕಾರ ನೀಡಿದ ತಾಲೂಕಿನ ಎಲ್ಲ ರೆಡ್ಡಿ ಸಮುದಾಯದ ನಾಗರಿಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಹಿರಿಯ ಮುಖಂಡ ವಿ.ಎನ್‌.ಗೋಪಾಲರೆಡ್ಡಿ ಮಾತನಾಡಿದರು. ಇದೇ ವೇಳೆ ತಾಲೂಕು ರೆಡ್ಡಿ ಜನ ಸಂಘದ ಹಿರಿಯ ಮುಖಂಡರಾದ ಶ್ರಿನಿವಾಸರೆಡ್ಡಿ, ನರಸರೆಡ್ಡಿ, ಸಣ್ಣರಾಮರೆಡ್ಡಿ, ಎಲ್‌.ಎನ್‌,ಸಣ್ಣಾರೆಡ್ಡಿ, ಶ್ರೀರಾಮರೆಡ್ಡಿ, ಮದ್ದನ್‌ರೆಡ್ಡಿ, ಟಿ.ಚಿದಾನಂದರೆಡ್ಡಿ, ವೇಣುಗೋಪಾಲರೆಡ್ಡಿ, ಈರಪ್ಪರೆಡ್ಡಿ, ನಾರಾಯಣರೆಡ್ಡಿ, ರಾಮಾಂಜಿನರೆಡ್ಡಿ ಇತರರಿದ್ದರು.