3.7 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಬಾಲಕೃಷ್ಣ ಅವರಿಂದ ಭೂಮಿಪೂಜೆ

| Published : Jan 18 2024, 02:02 AM IST

3.7 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಬಾಲಕೃಷ್ಣ ಅವರಿಂದ ಭೂಮಿಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಪುರಸಭೆ ವ್ಯಾಪ್ತಿಯ ೩.೭ಕೋಟಿ ವೆಚ್ಚದಲ್ಲಿ ವಿವಿಧ ವಾರ್ಡ್‌ಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ. ಎನ್. ಬಾಲಕೃಷ್ಣ ಭೂಮಿ ಪೂಜೆ ನೆರವೇರಿಸಿದರು. ನಗರದ ಎರಡನೇ ವಾರ್ಡಿನ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ೨೩ಲಕ್ಷ.ರು ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಪ್ರತಿದಿನ ರೈಲ್ವೆ ನಿಲ್ದಾಣಕ್ಕೆ ಪ್ರಯಾಣಿಕರು ತೆರಳಲು ಮಾರ್ಗವಾಗಿದ್ದು ರಸ್ತೆಗಳು ಗುಂಡಿಬಿದ್ದಿರುವ ಹಿನ್ನಲೆಯಲ್ಲಿ ಓಡಾಟಕ್ಕೆ ತೊಂದರೆಯಾಗಬಾರದೆಂಬ ಸಲುವಾಗಿ ೨೩ ಲಕ್ಷದ ವೆಚ್ಚದಲ್ಲಿ ಮರು ಡಾಬರೀಕರಣ ಮಾಡಲು ಈ ದಿನ ಭೂಮಿ ಪೂಜೆಯನ್ನು ನೆರವೇರಿಸಲಾಗಿದೆ

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪುರಸಭೆ ವ್ಯಾಪ್ತಿಯ ೩.೭ಕೋಟಿ ವೆಚ್ಚದಲ್ಲಿ ವಿವಿಧ ವಾರ್ಡ್‌ಗಳ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸಿ. ಎನ್. ಬಾಲಕೃಷ್ಣ ಭೂಮಿ ಪೂಜೆ ನೆರವೇರಿಸಿದರು. ನಗರದ ಎರಡನೇ ವಾರ್ಡಿನ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ೨೩ಲಕ್ಷ.ರು ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಪ್ರತಿದಿನ ರೈಲ್ವೆ ನಿಲ್ದಾಣಕ್ಕೆ ಪ್ರಯಾಣಿಕರು ತೆರಳಲು ಮಾರ್ಗವಾಗಿದ್ದು ರಸ್ತೆಗಳು ಗುಂಡಿಬಿದ್ದಿರುವ ಹಿನ್ನಲೆಯಲ್ಲಿ ಓಡಾಟಕ್ಕೆ ತೊಂದರೆಯಾಗಬಾರದೆಂಬ ಸಲುವಾಗಿ ೨೩ ಲಕ್ಷದ ವೆಚ್ಚದಲ್ಲಿ ಮರು ಡಾಬರೀಕರಣ ಮಾಡಲು ಈ ದಿನ ಭೂಮಿ ಪೂಜೆಯನ್ನು ನೆರವೇರಿಸಲಾಗಿದೆ. ಪಟ್ಟಣದ ಅಭಿವೃದ್ಧಿಗೆ ಪುರಸಭೆ ಜೊತೆಗೂಡಿ ಸಾಕಷ್ಟು ರಸ್ತೆ, ಚರಂಡಿ, ಪಾರ್ಕ್ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದ್ದು ನಗರದಲ್ಲಿರುವ ವಿವಿಧ ವಾರ್ಡುಗಳಿಗೆ ೧೫ ನೇ ಹಣಕಾಸಿನ ಅನುದಾನದಲ್ಲಿ ಮೂರು ಕೋಟಿ 7ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಗಾಗಿ ಆದ್ಯತೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅನುದಾನಗಳನ್ನು ತಂದು ಚನ್ನರಾಯಪಟ್ಟಣ ನಗರವನ್ನು ಮಾದರಿ ನಗರವಾಗಿ ಮಾಡಲು ಶ್ರಮಿಸಲಾಗುವುದು. ವಾರ್ಡ್‌ ನಂ ೧ ಮತ್ತು ೨೦ರಲ್ಲಿ ಕುಡಿಯುವ ನೀರು ಸರಾಗವಾಗಿ ಹೋಗದೆ ತೊಂದರೆಯಾಗಿದ್ದು ಪ್ರತ್ಯೇಕವಾಗಿ ನೀರಿನ ಮಾರ್ಗವನ್ನು ಮಾಡಿ ಮನೆಗಳಿಗೆ ಸಿಹಿ ನೀರನ್ನು ನೀಡಲು ಮುಂದಾಗುತ್ತೇವೆ, ವಿವಿಧ ವಾರ್ಡ್‌ಗಳಲ್ಲಿ ಇರುವ ಪಾರ್ಕ್‌ಗಳ ಅಭಿವೃದ್ಧಿಗೆ ಮುಂದಾಗಿದ್ದೇವೆ ಎಂದರು. ಇದೇ ವೇಳೆ ಪುರಸಭಾ ಮುಖ್ಯಾಧಿಕಾರಿ ಹೇಮಂತ್‌ಕುಮಾರ್, ಸದಸ್ಯರಾದ ಸುಜಾತ, ಸುರೇಶ್, ಯೋಗೇಶ್, ಬ್ರೆಡ್‌ರಾಜಣ್ಣ, ಪುರಸಭೆ ಮುಖ್ಯಾಧಿಕಾರಿ ಹೇಮಂತ್, ಪರಿಸರ ಇಂಜಿನಿಯರ್ ರಾಜು, ಮ್ಯಾನೇಜರ್ ಜಯಪ್ರಕಾಶ್, ಇಂಜಿನಿಯರ್ ಬಸವರಾಜು, ಶಾರದ, ಸೇರಿದಂತೆ ಇತರರು ಹಾಜರಿದ್ದರು.