ನವಲಗುಂದ:
ತಾಲೂಕಿನ ಯಮನೂರ ಗ್ರಾಮದ ಹತ್ತಿರವಿರುವ ಬೆಣ್ಣಿಹಳ್ಳಕ್ಕೆ ₹11.50 ಕೋಟಿ ವೆಚ್ಚದಲ್ಲಿ ಮೆಟ್ಟಿಲು ನಿರ್ಮಾಣ (ಸ್ನಾನಘಟ್ಟ- ಯಮನೂರು ಆರತಿ) ಕಾಮಗಾರಿಗೆ ಶಾಸಕ ಎನ್.ಎಚ್. ಕೋನರಡ್ಡಿ ಶನಿವಾರ ಭೂಮಿಪೂಜೆ ನೆರವೇರಿಸಿದರು.ಈ ವೇಳೆ ಮಾತನಾಡಿದ ಅವರು, ಉತ್ತರ ಕರ್ನಾಟಕದಲ್ಲಿಯೇ ಹಿಂದೂ-ಮುಸ್ಲಿಂ ಭಾವೈಕೈತೆಯಿಂದ ನಡೆಯುವ ಚಾಂಗದೇವ ಮಹಾರಾಜರ ಜಾತ್ರೆ ಇದಾಗಿದ್ದು, ರಾಜ್ಯ, ಹೊರರಾಜ್ಯಗಳಿಂದ ಈ ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಸ್ನಾನ ಮಾಡಿ ದೇವರ ದರ್ಶನ ಪಡೆಯಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಮೆಟ್ಟಿಲು ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆದಷ್ಟು ಬೇಗನೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ತಹಸೀಲ್ದಾರ್ ಸುಧೀರ್ ಸಾಹುಕಾರ್, ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ರಾಘವೇಂದ್ರ ಜಾಲಗಾರ, ಶಶಿಧರ ಇಳಕಲ್ಲ, ವಿ.ಬಿ. ಮೊನಿಪಾಟೀಲ, ಸಿಪಿಐ ರವಿಕುಮಾರ ಕಪ್ಪತ್ತನವರ, ಪಿಎಸ್‌ಐ ಜನಾರ್ಧನ ಬಟ್ರಳ್ಳಿ, ತಾಪಂ ಇಒ ಪಿ.ಆರ್. ಬಡೇಖಾನನವರ, ಪಿಡಿಒ ಗಂಗಾಧರ ಮಲ್ಲಾಪುರ, ಮುಖಂಡರಾದ ಪ್ರಭಾಕರ ಮೊಹಿತೆ, ದತ್ತಾಜಿರಾವ್ ಭರ್ಗೆ, ವಿನೋದರಾವ್ ಭರ್ಗೆ, ಸಂತೋಚ ಚುಳಕಿ, ಮಹಮ್ಮದ ಯಲಿಗಾರ, ರಸೂಲ್ ಸವಟಗೇರಿ ಸೇರಿದಂತೆ ಹಲವರಿದ್ದರು.