ಪಾರಂಪರಿಕ ದೇಶಗತಿ ಘರಾಣೆಯ ಭುಜಬಲಿ ದೇಸಾಯಿ ನಿಧನ

| Published : Nov 28 2024, 12:31 AM IST

ಸಾರಾಂಶ

ಭುಜಬಲಿ ದೇಸಾಯಿ ಅವರ ಅಜ್ಜ ದಿ. ಪಂಪಾಪತಿ ದೇಸಾಯಿ ಬ್ರಿಟಿಷ್ ಆಡಳಿತದ ಸಂದರ್ಭದಲ್ಲಿ ವಿಶೇಷಾಧಿಕಾರ ಹೊಂದಿದ್ದು, ಬ್ರಿಟಿಷ್ ಸರ್ಕಾರದಿಂದ ರಾವ್ ಬಹೂದ್ದೂರ ಪದವಿ ಪಡೆದಿದ್ದರು.

ಧಾರವಾಡ:

ಅಮ್ಮಿನಬಾವಿ ಪಾರಂಪರಿಕ ದೇಶಗತಿ ಘರಾಣೆಯ ಯಜಮಾನರು ಮತ್ತು ದಿಗಂಬರ ಜೈನ್ ಸಮಾಜದ ಮುಖಂಡ ಭುಜಬಲಿ ಬಲ್ಲಾಳರಾವ ದೇಸಾಯಿ (95) ಬುಧವಾರ ನಿಧನರಾದರು.

ಭುಜಬಲಿ ದೇಸಾಯಿ ಅವರ ಅಜ್ಜ ದಿ. ಪಂಪಾಪತಿ ದೇಸಾಯಿ ಬ್ರಿಟಿಷ್ ಆಡಳಿತದ ಸಂದರ್ಭದಲ್ಲಿ ವಿಶೇಷಾಧಿಕಾರ ಹೊಂದಿದ್ದು, ಬ್ರಿಟಿಷ್ ಸರ್ಕಾರದಿಂದ ‘ರಾವ್ ಬಹೂದ್ದೂರ'''''''' ಪದವಿ ಪಡೆದಿದ್ದರು. ಅಮ್ಮಿನಬಾವಿಯ ಉತ್ಖನನದಲ್ಲಿ ದೊರೆತಿದ್ದ ಜೈನ್ ಧರ್ಮದ 24 ತೀರ್ಥಂಕರರ ಅತೀ ಸುಂದರ ವಿರಳವಾದ ಶಿಲಾವಿಗ್ರಹವನ್ನು ಲಂಡನ್ ಮ್ಯೂಸಿಯಂಗೆ ರವಾನಿಸಲು ಬ್ರಿಟಿಷ್ ಸರ್ಕಾರ ಸಿದ್ಧತೆ ಮಾಡಿಕೊಂಡಾಗ ಅದನ್ನು ಮುಂಬೈ ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ವಿಗ್ರಹವು ಮರಳಿ ಅಮ್ಮಿನಬಾವಿ ಗ್ರಾಮಕ್ಕೆ ಬರುವಂತೆ ಮಾಡಿದ್ದ ದಿ. ಪಂಪಾಪತಿ ದೇಸಾಯಿ ಮನೆತನದ ಸೇವೆಯನ್ನು ಇಲ್ಲಿ ಸ್ಮರಿಸಬಹುದು.

ಮೃತರಾದ ಭುಜಬಲಿ ಅವರಿಗೆ ಪತ್ನಿ, ಐವರು ಪುತ್ರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಗಳು ಇದ್ದಾರೆ. ಬುಧವಾರ ಗ್ರಾಮದಲ್ಲಿ ಗ್ರಾಮ ಪರಂಪರೆಯ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು. ಅಮ್ಮಿನಬಾವಿ ಪಂಚಗೃಹ ಹಿರೇಮಠದ ಹಿರಿಯ ಹಾಗೂ ಕಿರಿಯ ಶ್ರೀಗಳು, , ವರೂರು ನವಗ್ರಹ ತೀರ್ಥದ ಶ್ರೀಧರ್ಮಸೇನ ಭಟ್ಟಾರಕ ಪಟ್ಟದಾರ್ಯ ಸ್ವಾಮೀಜಿ ಹಾಗೂ ಗಣ್ಯರು ಸಂತಾಪ ಕೋರಿದ್ದಾರೆ.