ಕನಕಪುರ: ತಾಲೂಕಿನ ಕಸಬಾ ಹೋಬಳಿ ಬರಡನಹಳ್ಳಿ ಬಳಿ ನಿರ್ಮಾಣಗೊಂಡಿರುವ ನವೋದಯ ಶಾಲೆಗೆ ಸಂಪರ್ಕ ಮಾಡಲು 6 ಕಿಮೀ ದೂರದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬಮೂಲ್‌ ಅಧ್ಯಕ್ಷ ಡಿ.ಕೆ.ಸುರೇಶ್ ಶಂಕುಸ್ಥಾಪನೆ ನೆರವೇರಿಸಿದರು

ಕನಕಪುರ: ತಾಲೂಕಿನ ಕಸಬಾ ಹೋಬಳಿ ಬರಡನಹಳ್ಳಿ ಬಳಿ ನಿರ್ಮಾಣಗೊಂಡಿರುವ ನವೋದಯ ಶಾಲೆಗೆ ಸಂಪರ್ಕ ಮಾಡಲು 6 ಕಿಮೀ ದೂರದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬಮೂಲ್‌ ಅಧ್ಯಕ್ಷ ಡಿ.ಕೆ.ಸುರೇಶ್ ಶಂಕುಸ್ಥಾಪನೆ ನೆರವೇರಿಸಿದರು.

ತಾಲೂಕಿನ ಉಪ್ಪುಕೆರೆ ದೊಡ್ಡಿಯಿಂದ ನವೋದಯ ಶಾಲೆ ಸಂಪರ್ಕ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸರ್ಕಾರದ ವಿವಿಧ ಅನುದಾನಗಳಿಂದ 6 ಕೋಟಿ ರು. ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗಲಿದೆ. ಉಪ್ಪುಕೆರೆ ದೊಡ್ಡಿಯಿಂದ ನವೋದಯ ಶಾಲೆ, ಚಾಕನಹಳ್ಳಿ ಮುಖ್ಯ ರಸ್ತೆಯ ಆಸ್ಪತ್ರೆ ಬಳಿಯಿಂದ ನವೋದಯ ಶಾಲೆ, ದೇಗುಲ ಮಠದಿಂದ ಬೃಹತ್ ಸೇತುವೆ ದಾಟಿ ಬರಡನಹಳ್ಳಿಯವರೆಗೆ ರಸ್ತೆ ನಿರ್ಮಾಣವಾಗಲಿದೆ. ನವೋದಯ ಶಾಲೆಗೆ ತಲುಪಲು ಈ ಎರಡು ಮೂರು ಭಾಗಗಳಿಂದ ನೇರ ಸಂಪರ್ಕಕ್ಕಾಗಿ ಸುಸಜ್ಜಿತ ರಸ್ತೆ ನಿರ್ಮಾಣವಾಗಲಿದೆ. ಮುಂದೆ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗದಂತೆ ಸಂಚಾರಯುಕ್ತ ರಸ್ತೆ ನಿರ್ಮಾಣದ ಅಭಿವೃದ್ಧಿ ಇದಾಗಿದೆ. ಸ್ಥಳೀಯ ಸಂಪರ್ಕ ಮತ್ತು ಸಾರಿಗೆ ವ್ಯವಸೆ ಯನ್ನು ಸುಧಾರಿಸುವ ಗುರಿಯನ್ನು ಹೊಂದಲಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ರವಿ, ಹಿರಿಯ ಮುಖಂಡ ನಾರಾಯಣಗೌಡ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಎನ್.ದಿಲೀಪ್, ಗ್ರಾಪಂ ಮಾಜಿ ಅಧ್ಯಕ್ಷ ವೆಂಕಟೇಗೌಡ, ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುತ್ತುರಾಜು, ಶೇಖರ್, ಸುಮಂತ್ ಸೇರಿದಂತೆ ಬರಡನಹಳ್ಳಿ, ಜವನಮ್ಮನದೊಡ್ಡಿ, ಕೆರಳಾಳುಸಂದ್ರದ ಮುಖಂಡರು ಭಾಗವಹಿಸಿದ್ದರು.

ಕೆಕೆಪಿ ಸುದ್ದಿ 01:

ಕನಕಪುರ ತಾಲೂಕು ಬರಡನಹಳ್ಳಿ ಸಮೀಪದ ಉಪ್ಪುಕೆರೆ ದೊಡ್ಡಯಿಂದ ನವೋದಯ ಶಾಲೆ ರಸ್ತೆ ಸಂಪರ್ಕ ಕಾಮಗಾರಿಗೆ ಬಮೂಲ್‌ ಅಧ್ಯಕ್ಷ ಡಿ.ಕೆ.ಸುರೇಶ್ ಶಂಕುಸ್ಥಾಪನೆ ನೆರವೇರಿಸಿದರು.