ಸಾರಾಂಶ
ಕನ್ನಡಪ್ರಭ ವಾರ್ತೆ ರಾಮನಗರ
ನಗರದ ಮಹಬೂಬ್ ನಗರದಲ್ಲಿನ ರಸ್ತೆ ಅಭಿವೃದ್ಧಿಗೆ 1.70 ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡಿಸಿದ್ದಾರೆ ಎಂದು ನಗರಸಭೆ ಸದಸ್ಯ ಮೊಹಮ್ಮದ್ ಆರೀಫ್ ಹೇಳಿದರು.ನಗರದ ಮಹಬೂಬ್ ನಗರ ಬಡಾವಣೆಯಲ್ಲಿ ಬಾಲಗೇರಿಯ ಹಳ್ಳಿಮರದಿಂದ ಈಜುಕೊಳದವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಸಿಸಿ ರಸ್ತೆ ಕಾಮಗಾರಿಗಾಗಿ 1 ಕೋಟಿ 70 ಲಕ್ಷ ರುಪಾಯಿಗಳನ್ನು ಶಾಸಕರು ಬಿಡುಗಡೆ ಮಾಡಿಸಿದ್ದಾರೆ ಎಂದರು.
ಮಹಬೂಬ್ ನಗರದ ಮುಖ್ಯರಸ್ತೆ ಕಳೆದ 10 ವರ್ಷಗಳಿಂದಲೂ ಹದಗೆಟ್ಟಿತ್ತು. ಹಿಂದಿದ್ದ ಶಾಸಕರು ಇದರತ್ತ ಗಮನವನ್ನೇ ಹರಿಸಿರಲಿಲ್ಲ. ರಸ್ತೆ ಮಾತ್ರವಲ್ಲದೆ ಕುಡಿಯುವ ನೀರು, ಚರಂಡಿ, ಬೀದಿ ದೀಪ ಸೇರಿದಂತೆ ಮೂಲಸೌಕರ್ಯಗಳಿಂದ ವಾರ್ಡಿನ ಜನರು ವಂಚಿತರಾಗಿದ್ದರು. ಇಕ್ಬಾಲ್ ಹುಸೇನ್ ರವರು ಶಾಸಕರಾದ ಮೇಲೆ ಹಂತ ಹಂತವಾಗಿ ಆ ಎಲ್ಲ ಸಮಸ್ಯೆಗಳು ಬಗೆಹರಿಯುತ್ತಿವೆ ಎಂದು ಹೇಳಿದರು.ಅಲ್ಪಸಂಖ್ಯಾತರು ಹೆಚ್ಚಿರುವ ವಾರ್ಡುಗಳಲ್ಲಿ ರಸ್ತೆ ಅಭಿವೃದ್ಧಿಗಾಗಿ ಶಾಸಕರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಸುಮಾರು 12 ಕೋಟಿ ರು. ಅನುದಾನ ತಂದಿದ್ದಾರೆ. ಅದರಲ್ಲಿ ಮಹಬೂಬ್ ನಗರದ ಮುಖ್ಯ ರಸ್ತೆಯ ಅಭಿವೃದ್ಧಿಗಾಗಿ 1 ಕೋಟಿ 70 ಲಕ್ಷ ರು. ಬಿಡುಗಡೆ ಮಾಡಿದ್ದಾರೆ. ಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಶಾಸಕರು ವಾರ್ಡಿಗೆ ಭೇಟಿ ನೀಡಿದಾಗ ಮೂಲಸೌಕರ್ಯಗಳ ಕೊರತೆ ಬಗ್ಗೆ ಜನರು ಗಮನ ಸೆಳೆದಿದ್ದರು. ಇದಕ್ಕೆ ಕೂಡಲೇ ಸ್ಪಂದಿಸಿ ರಸ್ತೆ ಕಾಮಗಾರಿಗೆ ಅನುದಾನ ನೀಡಿದರು. ರಂಜಾನ್ ಸಮಯದಲ್ಲಿ ರಸ್ತೆ ಕಾಮಗಾರಿ ಕೈಗೆತ್ತಿಕೊಂಡರೆ ಜನರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ತಡವಾಗಿ ಚಾಲನೆ ನೀಲಾಗಿದೆ. ಇದಲ್ಲದೆ, ಬೇರೆ ಅನುದಾನಗಳಲ್ಲಿ ಯುಜಿಡಿ, ಚರಂಡಿ ಸೇರಿದಂತೆ ಇತರೆ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಮೊಹಮ್ಮದ್ ಆರೀಫ್ ಹೇಳಿದರು.ಈ ಸಂದರ್ಭದಲ್ಲಿ ಮುಖಂಡರಾದ ಜಮಾಲಿ ಇಲಿಯಾಜ್, ಮುಸ್ತಾಕ್, ಜೋಹರ್, ಆಶ್ರಫ್, ಮುನ್ಶೀರ್, ರಿಯಾಜ್, ಆಜಾಮ್, ಕೌಸರ್, ಚಾನ್, ಶಫಿ, ಬಾಬು, ನಯಾಜ್ ಇತರರು ಹಾಜರಿದ್ದರು.
ಇಕ್ಬಾಲ್-ಶಶಿ ಜೋಡೆತ್ತು:ಶಾಸಕ ಇಕ್ಬಾಲ್ ಹುಸೇನ್ ರಾಮನಗರ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಹೆಚ್ಚಿನ ಆದ್ಯತೆ ನೀಡಿದ್ದು, ಜಿಲ್ಲಾ ಕೇಂದ್ರದಲ್ಲಿನ ಎಲ್ಲ ವಾರ್ಡುಗಳಲ್ಲಿ ರಸ್ತೆ, ಚರಂಡಿ, ಯುಜಿಡಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ ಎಂದುರಾಮನಗರ ಟೌನ್ ಅನ್ನು ಮಾದರಿಯನ್ನಾಗಿ ಮಾಡಲು ಪಣತೊಟ್ಟಿರುವ ಶಾಸಕ ಇಕ್ಬಾಲ್ ಹುಸೇನ್ ಮತ್ತು ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ ಜೋಡೆತ್ತಿನಂತೆ ಹಗಲಿರಳು ಶ್ರಮಿಸುತ್ತಿದ್ದಾರೆ ಎಂದು ನಗರಸಭೆ ಸದಸ್ಯ ಮೊಹಮ್ಮದ್ ಆರೀಫ್ ತಿಳಿಸಿದರು.