ಗೂಡುಗದ್ದೆ: ಕಾವೇರಿ ನದಿ ದಂಡೆ ತಡೆಗೋಡೆ ನಿರ್ಮಾಣ ಭೂಮಿಪೂಜೆ

| Published : Mar 29 2025, 12:33 AM IST

ಸಾರಾಂಶ

ಗೂಡುಗದ್ದೆಯಲ್ಲಿ ರಸ್ತೆ ಹಾನಿ ಮತ್ತು ಭೂ ಕುಸಿತ ತಡೆಯಲು ಕಾವೇರಿ ನದಿ ದಂಡೆಯಲ್ಲಿ 2 ಕೋಟಿ ರು. ವೆಚ್ಚದ ತಡೆಗೋಡೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿತು.

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಗುಹ್ಯ ಗ್ರಾಮದ ಗೂಡುಗದ್ದೆಯಲ್ಲಿ ರಸ್ತೆ ಹಾನಿ ಮತ್ತು ಭೂ ಕುಸಿತ ತಡೆಯಲು ಕಾವೇರಿ ನದಿ ದಂಡೆಯಲ್ಲಿ 2 ಕೋಟಿ ರು. ವೆಚ್ಚದ ತಡೆಗೋಡೆ ನಿರ್ಮಾಣಕ್ಕೆ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಭೂಮಿಪೂಜೆ ನೆರವೇರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರಾವರಿ ನಿಗಮದ ಸಣ್ಣ ನೀರಾವರಿ ಇಲಾಖೆಯಿಂದ ಹಲವಾರು ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಅದರ ಭಾಗವಾಗಿ ಗೂಡುಗದ್ದೆಯ ಕಾವೇರಿ ನದಿಯ ದಂಡೆಯಲ್ಲಿ ಭೂ ಕುಸಿತದ ಭೀತಿಯಿರುವ ಪ್ರದೇಶದಲ್ಲಿ 2 ಕೋಟಿ ರು. ವೆಚ್ಚದಲ್ಲಿ ತಡೆಗೋಡೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಆದಷ್ಟು ಶೀಘ್ರದಲ್ಲಿ ಗುಣಮಟ್ಟದ ಕಾಮಗಾರಿ ಮುಗಿಸಲಾಗುವುದು ಎಂದರು.

ಮುಖ್ಯಮಂತ್ರಿ ಮಾರು 132 ಕೋಟಿ ರು.ಗಳಷ್ಟು ಹಣವನ್ನು ಕೊಡಗಿನ ರಸ್ತೆಗಳ ಅಭಿವೃದ್ಧಿಗೆ ನೀಡಿದ್ದು, ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ರಸ್ತೆಗಳನ್ನು ಹಂತಹಂತವಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ ಗೋಪಾಲ್, ಉಪಾಧ್ಯಕ್ಷ ಪಳನಿಸ್ವಾಮಿ, ಪಂಚಾಯಿತಿ ಸದಸ್ಯರು ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖರಾದ ರಂಜಿ ಪೂಣಚ್ಚ, ಎಸ್.ಬಿ. ಪ್ರತೀಶ್, ಎಂ.ಬಿಜೋಯ್ ಇತರರು ಇದ್ದರು.