ಸಾರಾಂಶ
ಪೇಡ್ಂ ಸ್ಟುಡಿಯಂ ಗೋವಾದಲ್ಲಿ ನ.30 ರಿಂದ ಡಿ.2 ರವರೆಗೆ ನಡೆದ ರಾಷ್ಟ್ರಮಟ್ಟದ ರೂಪ್ ಸ್ಕಿಪ್ಪಿಂಗ್ ಸ್ಪರ್ಧೆಯಲ್ಲಿ ಪಟ್ಟಣದ ಲಿಟಲ್ ಹಾರ್ಟ್ಸ್ ಸ್ಕ್ವಾಲರ್ ಫೌಂಡೇಶನ್ ಆಂಗ್ಲ್ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಕು.ಭೂಮಿಕಾ ಫಕೀರಗೌಡ ಸಿದ್ದನಗೌಡರ ಡಬಲ್ ಡಚ್ಚ ಸ್ಪೀಡ್ ರಿಲೇ ಮತ್ತು ಡಬಲ್ ಅಂಡರ್ ಸ್ಪೀಡ್ ರಿಲೇ ಸ್ಕಿಪ್ಪಿಂಗ್ ವಿಭಾಗದಲ್ಲಿ ಸ್ಪರ್ಧಿಸಿ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು 2025ರಲ್ಲಿ ಅಮೆರಿಕಾ ದೇಶದಲ್ಲಿ ನಡೆಯುವ ಅಂತಾರಾಷ್ಟ್ರೀಯ ರೂಪ್ ಸ್ಕಿಪ್ಪಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಪೇಡಂ ಸ್ಟುಡಿಯಂ ಗೋವಾದಲ್ಲಿ ನ.30 ರಿಂದ ಡಿ.2 ರವರೆಗೆ ನಡೆದ ರಾಷ್ಟ್ರಮಟ್ಟದ ರೂಪ್ ಸ್ಕಿಪ್ಪಿಂಗ್ ಸ್ಪರ್ಧೆಯಲ್ಲಿ ಪಟ್ಟಣದ ಲಿಟಲ್ ಹಾರ್ಟ್ಸ್ ಸ್ಕ್ವಾಲರ್ ಫೌಂಡೇಶನ್ ಆಂಗ್ಲ್ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಕು.ಭೂಮಿಕಾ ಫಕೀರಗೌಡ ಸಿದ್ದನಗೌಡರ ಡಬಲ್ ಡಚ್ಚ ಸ್ಪೀಡ್ ರಿಲೇ ಮತ್ತು ಡಬಲ್ ಅಂಡರ್ ಸ್ಪೀಡ್ ರಿಲೇ ಸ್ಕಿಪ್ಪಿಂಗ್ ವಿಭಾಗದಲ್ಲಿ ಸ್ಪರ್ಧಿಸಿ ರಾಷ್ಟ್ರಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು 2025ರಲ್ಲಿ ಅಮೆರಿಕಾ ದೇಶದಲ್ಲಿ ನಡೆಯುವ ಅಂತಾರಾಷ್ಟ್ರೀಯ ರೂಪ್ ಸ್ಕಿಪ್ಪಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.ಭೂಮಿಕಾಳ ಅದ್ವೀತಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷೆ ಸಲೀನ್ ಜೈಮನ್, ಕಾರ್ಯದರ್ಶಿ ಆಕಾಶ ಜೈಮನ್, ಪ್ರಾರ್ಚಾರ್ಯೆ ಆಸ್ಮಾ ಖಾಜಿ, ಶಿಕ್ಷಕರಾದ ವೀಣಾ ಕೌಜಲಗಿ, ಪ್ರೇಮಾ ತಲ್ಲೂರ, ಕುಸುಮಾ ಕುಲಕರ್ಣಿ, ದ್ರಾಕ್ಷಾಯಣಿ ಕಬ್ಬುರ, ದೀಪಾ ಉಳೆಗಡ್ಡಿ, ಕ್ಯಾರೆನ್ ಜೈಮನ್ ಭಾರತಿ ಪತ್ತಾರ, ಚಂಪಾ, ಗೊದಾವರಿ ಹೀರೆಮಠ, ಸ್ಕಿಪ್ಪಿಂಗ್ ತರಬೇತಿದಾರ ಹಣಮಂತ ಮೇಗೆರಿ ಹಾಗೂ ಲಿಟಲ್ ಹಾರ್ಟ್ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು, ಹೊಸೂರ ಗ್ರಾಮದ ಜನತೆ ಅಭಿನಂದಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))