ಸಾರಾಂಶ
ಲೋಕಾಪುರ: ಘಟಪ್ರಭಾ ನದಿಗೆ ಒಳ ಹರಿವು ಹೆಚ್ಚಿದ ಪರಿಣಾಮ ಪ್ರವಾಹ ಆತಂಕ ಎದುರಾಗಿದ್ದು, ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕಂದಾಯ, ಪೊಲೀಸ್ ಇಲಾಖೆ ಸೇರಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಘಟಪ್ರಭಾ ನದಿ ತುಂಬಿ ಹರಿಯುತ್ತಿರುವ ಪರಿಣಾಮ ಲೋಕಾಪುರ ಸಮೀಪದ ತಿಮ್ಮಾಪುರ-ಅಂತಾಪುರದ ಬಿದರಿ ಬ್ರಿಡ್ಜ್ ಕಂ ಬ್ಯಾರೇಜ್ ಮುಳುಗಡೆಯಾಗಿದೆ.

ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಮಾರ್ಕಂಡೇಯ, ಘಟಪ್ರಭಾ ಮತ್ತು ಹಿರಣ್ಯಕೇಶಿ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಹಿಡಕಲ್ ಜಲಾಶಯ, ಹಿರಣ್ಯಕೇಶಿ ನದಿ ಸೇರಿ ೩೩,೫೬೦ ಕ್ಯುಸೆಕ್ ನೀರನ್ನು ನದಿಗಳಿಗೆ ಹರಿ ಬಿಟ್ಟಿರುವ ಪರಿಣಾಮ ಚಿಕ್ಕೂರ-ಮಾಚಕನೂರ, ತಿಮ್ಮಾಪುರ-ಅಂತಾಪುರ ಬಿದರಿ ಬ್ರಿಡ್ಜ್ ಕಂ ಬ್ಯಾರೇಜ್ ಮುಳಗಡೆಯಾಗಿವೆ. ಇನ್ನೂ ಹೆಚ್ಚು ಪ್ರವಾಹ ಬರುವ ಸಂಭವವಿದೆ. ಪ್ರವಾಹ ಪಿಡಿತ ಸ್ಥಳಗಳಿಗೆ ಉಪ ತಹಸೀಲ್ದಾರ್ ಸತೀಶ ಬೇವೂರ ಕಂದಾಯ, ಪೊಲೀಸ್ ಸಿಬ್ಬಂದಿ, ನೀರಾವರಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ನದಿ ತಟದಲ್ಲಿರುವ ಸಾರ್ವಜನಿರಿಗೆ ದನ, ಕರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಿದ್ದಾರೆ.