ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಕರಾಳ ಶಾಸನವಾಗಿರುವ ವಕ್ಫ್ ಮಾಡುತ್ತಿರುವ ಷಡ್ಯಂತ್ರ ಹಾಗೂ ಇದರ ಹಿಂದಿನ ಕುತಂತ್ರ ಸಾಮಾನ್ಯವಲ್ಲ. 2047ಕ್ಕೆ ಭಾರತವನ್ನು ಪಾಕಿಸ್ತಾನ ಮಾಡಲು ದೊಡ್ಡ ಪ್ಲಾನ್ ನಡೆದಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ವಕ್ಫ್ ವಿರುದ್ಧ ನಡೆದ ಧರಣಿಯಲ್ಲಿ ಮಾತನಾಡಿದ ಅವರು, ನಮ್ಮ ನಮ್ಮಲ್ಲೇ (ಹಿಂದೂಗಳಲ್ಲಿ) ಒಡೆದು ಹೀಗೆ ಮಾಡಿದ್ದಾರೆ. ನಾವು ಹಿಂದೂಗಳೆಲ್ಲ ಒಂದೇ ಎಂದು ಭಾವನೆ ಬರಬೇಕು. ಸುಮ್ಮನೆ ಬ್ರಾಹ್ಮಣರು, ಲಿಂಗಾಯತರು, ದಲಿತರು ಎಂಬ ಬೇಧಭಾವ ಕಿತ್ತೊಗೆದು ನಾವು ಹಿಂದೂಗಳು ಒಗ್ಗಟ್ಟಾಗಬೇಕು. ರಾವಣ ಬ್ರಾಹ್ಮಣ ಇದ್ದ, ರಾಮ ಕ್ಷತ್ರೀಯ, ಕೃಷ್ಣ ಗೊಲ್ಲನಿದ್ದ. ಆದರೆ ಅವರನ್ನು ಪೂಜೆ ಮಾಡುವವರು ಬ್ರಾಹ್ಮಣರು. ನಮ್ಮ ನಮ್ಮಲ್ಲಿ ಜಾತಿಗಳು ಇರಬಾರದು ಎಂದು ಹೇಳಿದರು.ಈ ಹೋರಾಟ ಇಷ್ಟಕ್ಕೆ ನಿಲ್ಲುವುದಿಲ್ಲ, ಇದು ಈಗಷ್ಟೆ ಆರಂಭವಾಗಿದೆ. ಕಾಂಗ್ರೆಸ್ ಸಂಸದರ ಮನೆಗೆ ಹೋಗಿ ಕೇಳಬೇಕು. ಯಾಕಪಾ? ನಾವು ಓಟ್ ಹಾಕಿಲ್ಲವಾ? ಯಾಕೆ ಹೀಗೆ ಹಿಂದೂಗಳ ಮೇಲೆ ಕುತಂತ್ರ ಮಾಡುತ್ತಿದ್ದೀರಿ ಎಂದು ಕೇಳಬೇಕು ಎಂದರು. ಸಚಿವ ಜಮೀರ್ ಅಹಮ್ಮದನಿಂದ ಈಗ ಅವರಲ್ಲೇ (ಕಾಂಗ್ರೆಸ್‌ನಲ್ಲಿ) ಹೇಗೆ ಬೆಂಕಿ ಹೊತ್ತಿದೆ ನೋಡಿ, ಅವರಲ್ಲೇ 30 ಶಾಸಕರು ಅವನ ವಿರುದ್ಧ ನಿಯೋಗ ಹೊರಟಿದ್ದಾರೆ ಎಂದು ತಿಳಿಸಿದರು.ನಾನು ಅಶ್ವಮೇಧ ಕಟ್ಟಿಹಾಕಿದೆ
ಹಿಂದೆಲ್ಲ ರಾಜರು ಯುದ್ಧ ಸಾರುವ ಮೊದಲು ತಮ್ಮ ಅಶ್ವಮೇಧ ಕುದುರೆ ಬಿಡುತ್ತಿದ್ದರು. ಅದು ಎಲ್ಲೆಡೆ ಹೋಗುತ್ತಿತ್ತು, ಹಾಗೆ ಬಂದ ಅಶ್ವಮೇಧವನ್ನು ಯಾರು ಕಟ್ಟಿಹಾಕುತ್ತಾರೋ ಅವರ ಜೊತೆ ಯುದ್ಧ ಎಂಬ ನಿಯಮವಿತ್ತು. ಹಾಗೇ ಈ ರಾಜಕೀಯದ ಕುದುರೆ ಈ (ಜಮೀರ್ ಅಹಮ್ಮದ ಖಾನ್) ಬೀದರ, ಕಲಬುರಗಿಗೆ ಹೋಗಿ ವಕ್ಫ್ ಆಸ್ತಿ ಕೊಳ್ಳೆ ಹೊಡೆಯಲು ಸೂಚಿಸಿತ್ತು. ಆ ಸಮಯದಲ್ಲಿ ಅಲ್ಲಿಯವರು ಅದನ್ನು ಕಟ್ಟಿ ಹಾಕಿರಲಿಲ್ಲ. ಆದರೆ ವಿಜಯಪುರಕ್ಕೆ ಬಂದ ತಕ್ಷಣ ನಾವು ಮುಂದೆ ಬಿಡದೆ ಅದನ್ನು ಕಟ್ಟಿ ಹಾಕಿದ್ದೀವಿ ಎಂದರು.ಪಾಕಿಸ್ತಾನದಲ್ಲಿ ಹಿಂದೂಗಳ ಗರ್ಭಗುಡಿಯಲ್ಲಿ ದನ ಕಡಿಯುತ್ತಾರೆ. ಹಾಗೆಯೇ ಭಾರತವೂ ಸಹ ಪಾಕಿಸ್ತಾನ ಆಗಿದೆ. ಪಾಕಿಸ್ತಾನದಂತೆ ಭಾರತದಲ್ಲಿಯೂ ಸಹ ವಕ್ಫ್‌ಬೋರ್ಡ್ ಆಸ್ತಿ 9.5 ಲಕ್ಷ ಚದರ್ ಕಿಲೊಮೀಟರ್ ಎಂದು ಮಾಡಿಕೊಂಡಿದ್ದಾರೆ. ಸ್ವಾತಂತ್ರ್ಯ ಬಂದಮೇಲೆ ವಕ್ಫ್‌ಬೋರ್ಡ್ ಆಸ್ತಿ 3500 ಎಕರೆ ಇತ್ತು, ಅದೇ 2019 ರಲ್ಲಿ 5.81 ಲಕ್ಷ ಎಕರೆ ಆಯಿತು. ಇಂದು ದೇಶದಲ್ಲಿ 9.5 ಲಕ್ಷ ಎಕರೆ ಆಗಿದೆ. ಇದೆಲ್ಲ ಹೇಗೆ ಆಯಿತು? ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಹೊಸ ವಕ್ಫ್ ಕಾಯ್ದೆ ಪಾಸ್ ಮಾಡಲು ಸಿದ್ಧವಾಗಿದ್ದಕ್ಕೆ ಕೂಡಲೇ ರಾಜ್ಯದಲ್ಲಿನ ಕಾಂಗ್ರೆಸ್ ಕುತಂತ್ರ ಮಾಡಿದೆ. ಕೇಂದ್ರ ಕಾಯ್ದೆಗೆ ತಿದ್ದುಪಡಿ ತರುವಷ್ಟರಲ್ಲಿಯೇ ಎಲ್ಲಾ ಆಸ್ತಿ ಗುಳುಂ ಮಾಡೋಣ ಎಂದು ವಕ್ಫ್ ಸಚಿವ ಜಮೀರ್ ಅಹಮ್ಮದ ರೈತರು, ದೇವಸ್ಥಾನಗಳು ಸೇರಿದಂತೆ ಎಲ್ಲರ ಪಹಣಿಗಳಲ್ಲಿ ವಕ್ಫ್‌ಬೋರ್ಡ್ ಎಂದು ಎಂಟ್ರಿ ಮಾಡಿಸುತ್ತಿದ್ದಾರೆ ಎಂದರು. ದೇಶಾಭಿಮಾನದಿಂದ ಆಗಮನವಕ್ಫ್ ವಿರುದ್ಧದ ಹೋರಾಟಕ್ಕೆ ಕೇಂದ್ರ ಮಂತ್ರಿ ಶೋಭಾ ಕರಂದ್ಲಾಜೆ ಬಂದು ಧರಣಿ ಕೂಡುತ್ತಾರೆ ಎಂದರೆ ಅದು ಸಾಮಾನ್ಯ ಅಲ್ಲ. ಅವರಂತೆ ಸಂಸದರಾದ ರಮೇಶ ಜಿಗಜಿಣಗಿ, ಪಿ.ಸಿ.ಗದ್ದಿಗೌಡರ, ಶಾಸಕರಾದ ರಮೇಶ ಜಾರಕಿಹೊಳಿ, ಹರೀಶ ಪಾಟೀಲ ಸೇರಿದಂತೆ ಎಲ್ಲರು ಬಂದರು. ದೇಶಾಭಿಮಾನ ಇದ್ದವರು ಎಲ್ಲರೂ ಈ ಹೋರಾಟಕ್ಕೆ ಬರುತ್ತಾರೆ, ಇಲ್ಲದಿದ್ದವರು ಬರುವುದಿಲ್ಲ ಎಂದರು.ಬಾಕ್ಸ್‌ಸಿಎಂ ವಿರುದ್ಧ ಏಕವಚನದಲ್ಲೇ ವಾಗ್ದಾಳಿ
ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾದಿ ಬಿಟ್ಟಿದ್ದಾರೆ. ಮುಂದಿನ ಜನ್ಮ ಅಂತ ಇದ್ದರೆ ನಾನು ಮುಸ್ಲಿಂ ಆಗಿ ಹುಟ್ಟುತ್ತೇನೆ ಎಂದು ಹೇಳುತ್ತಾನೆ. ಅದಕ್ಕಾಗಿಯೇ ಇದೇ ಜನ್ಮದಲ್ಲಿ ಎಲ್ಲ ಪ್ರಾಪರ್ಟಿಗಳನ್ನು ಅವರ ಹೆಸರಿಗೆ ಹಚ್ಚುತ್ತಿದ್ದಾನೆ. ಹಿಂದೂ ದೇವರುಗಳ ಮೇಲೆ ಭಕ್ತಿ ಇಲ್ಲದ ಸಿದ್ಧರಾಮಯ್ಯ ಮೊದಲು ಕುಂಕುಮ ಹಚ್ಚಿಸಿಕೊಳ್ಳುತ್ತಿರಲಿಲ್ಲ. ಕೇಸರಿ ರುಮಾಲು ಹಾಕಲು ಹೋದರೆ ತೆಗೆದು ಒಗೆಯುತ್ತಿದ್ದ. ಆದರೆ ಈಗ ಎಲ್ಲಾಕಡೆ ದೇವಸ್ಥಾನಗಳಿಗೆ ಹೋಗುತ್ತಿದ್ದಾನೆ ಎಂದು ಏಕವಚನದಲ್ಲಿಯೇ ಯತ್ನಾಳ ವಾಗ್ದಾಳಿ ನಡೆಸಿದರು.ಈ ಹಿಂದೆ ಸಿಎಂ ಸಿದ್ಧರಾಮಯ್ಯ ತಾಲೂಕಿನ ದ್ಯಾಬೇರಿಯ ವಾಗ್ದೇವಿಗೆ ಹೋಗಿ ಗರ್ಭಗುಡಿಗೆ ಹೋಗದೆ ವಾಪಸ್ಸು ಹೋಗಿದ್ದ. ಆ ದೇವತೆ ಖಡಕ್ ಆಗಿರುವುದರಿಂದ ವಾಗ್ದೇವಿ ದೇವಸ್ಥಾನದ ಗರ್ಭಗುಡಿಯಲ್ಲಿ ಹೋಗುದಿರುವುದರಿಂದಲೇ ಆತ ಮುಡಾದಲ್ಲಿ ಸಿಕ್ಕಾಕಿಕೊಂಡ ಎಂದರು.ಕೋಟ್ಒಂದಲ್ಲ ಒಂದಿನ ಧರ್ಮಯುದ್ಧ ಆಗುವುದು ಖಚಿತ. ಧರ್ಮವು ಉಳಿಯಬೇಕಾದರೆ ಯುದ್ಧ ಆಗುವುದೇ. ಹಿಂದೂಗಳು ಉಳಿಯಬೇಕು, ನಮ್ಮ ಆಸ್ತಿಗಳು ಉಳಿಯಬೇಕು, ದೇಶ, ದೇಶದ ಸಂಸ್ಕ್ರತಿ ಉಳಿಯಬೇಕಾದರೆ ಧರ್ಮಯುದ್ಧ ನಿಶ್ಚಿತ.ಬಸನಗೌಡ ಪಾಟೀಲ, ಶಾಸಕ