ರಾಜ್ಯದಲ್ಲೂ ಬಿಹಾರ ಮಾದರಿ ಗೆಲವು

| Published : Nov 15 2025, 01:30 AM IST

ಸಾರಾಂಶ

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸುಭದ್ರ ಆಡಳಿತಕ್ಕೆ ಜನಪರ ಯೋಜನೆಗಳಿಗೆ ಮತದಾರರು ಬಿಹಾರದಲ್ಲಿ ಮಣೆ ಹಾಕಿದ್ದಾರೆ. ಬಿಹಾರ ಮಾದರಿಯಲ್ಲಿ ರಾಜ್ಯದಲ್ಲಿಯೂ ಮುಂಬರುವ ತಾ.ಪಂ. ಹಾಗೂ ಜಿ.ಪಂ., ಪಟ್ಟಣ ಪಂಚಾಯಿತಿ, ನಗರ ಸಭೆ, ಚುನಾವಣೆಗಳಲ್ಲಿಯೂ ಬಿಜೆಪಿ ಜಯಭೇರಿ ಸಾಧಿಸಲಿದೆ ಎಂದು ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಭವಿಷ್ಯ ನುಡಿದಿದ್ದಾರೆ.

- ಬಿಜೆಪಿ ವಿಜಯೋತ್ಸವದಲ್ಲಿ ಮಾಜಿ ಶಾಸಕ ರಾಮಚಂದ್ರ ವಿಶ್ವಾಸ - - -

ಕನ್ನಡಪ್ರಭ ವಾರ್ತೆ ಜಗಳೂರು

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸುಭದ್ರ ಆಡಳಿತಕ್ಕೆ ಜನಪರ ಯೋಜನೆಗಳಿಗೆ ಮತದಾರರು ಬಿಹಾರದಲ್ಲಿ ಮಣೆ ಹಾಕಿದ್ದಾರೆ. ಬಿಹಾರ ಮಾದರಿಯಲ್ಲಿ ರಾಜ್ಯದಲ್ಲಿಯೂ ಮುಂಬರುವ ತಾ.ಪಂ. ಹಾಗೂ ಜಿ.ಪಂ., ಪಟ್ಟಣ ಪಂಚಾಯಿತಿ, ನಗರ ಸಭೆ, ಚುನಾವಣೆಗಳಲ್ಲಿಯೂ ಬಿಜೆಪಿ ಜಯಭೇರಿ ಸಾಧಿಸಲಿದೆ ಎಂದು ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಭವಿಷ್ಯ ನುಡಿದರು.

ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ಶುಕ್ರವಾರ ಬಿಜೆಪಿಯಿಂದ ಬಿಹಾರ ಚುನಾವಣೆ ಗೆಲುವಿನ ಹಿನ್ನೆಲೆ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿ ನಂತರ ಮಾತನಾಡಿದರು. ಬಿಹಾರದಲ್ಲಿ ಎನ್‌ಡಿಎಗೆ ಈ ಬಾರಿ ಸ್ಪಷ್ಟ ಬಹುಮತ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಅಷ್ಟೇ ಅಲ್ಲ, ದಾಖಲೆಯ ಶೇ.68.8 ವೋಟಿಂಗ್ ದಾಖಲಾಗಿತ್ತು. ಇದರ ಬೆನ್ನಲ್ಲೆ ಮತಗಟ್ಟೆ ಸಮೀಕ್ಷೆಗಳು ಎನ್‌ಡಿಎ ಅಧಿಕಾರ ಹಿಡಿಯಲಿದೆ ಎಂದು ಹೇಳಿದ್ದು ಸುಳ್ಳಾಗಿಲ್ಲ. ಇದಕ್ಕೆಲ್ಲಾ ಕಾರಣ ಕಾಂಗ್ರೆಸ್ ದೇಶದಲ್ಲಿ ಆಳ್ವಿಕೆ ನಡೆಸಿ, ಅಧೋಗತಿಗೆ ತಂದಿರುವುದು ಎಂದರು.

ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಎ.ಎಂ. ಮರುಳಾರಾಧ್ಯ, ಪ.ಪಂ. ಅಧ್ಯಕ್ಷ ನವೀನ್ ಕುಮಾರ್, ಸದಸ್ಯ ಪಾಪಲಿಂಗಪ್ಪ, ಮುಖಂಡರಾದ ಜೆ.ವಿ. ನಾಗರಾಜ್, ಓಬಳೇಶ್, ಮಂಜಣ್ಣ, ಲೋಕೇಶ್, ಲ್ಯಾಬ್ ಶಿವಕುಮಾರ್, ಧರ್ಮನಾಯ್ಕ, ಶಿವಕುಮಾರ್, ಸೂರಲಿಂಗಪ್ಪ ಮತ್ತಿತರರು ಇದ್ದರು.

- - -

-14ಜೆ.ಎಲ್.ಆರ್.ಚಿತ್ರ1ಎ:

ಜಗಳೂರು ಪಟ್ಟಣದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಬಿಜೆಪಿ ಮುಖಂಡರು ಬಿಹಾರ ಚುನಾವಣೆ ಗೆಲುವಿನ ಸಂಭ್ರಮಾಚರಣೆ ಆಚರಿಸಿದರು.