ನಂದಿಕ್ರಾಸ್ ಬಳಿ ಸರ್ವಿಸ್ ರಸ್ತೆಯಲ್ಲಿ ಜನರನ್ನು ಇಳಿಸಿ ರಾಷ್ಟ್ರೀಯ ಹೆದ್ದಾರಿ 44 ನ್ನು ಸೇರಲು ಬರುವಾಗ ಮುಂದೆ ರಸ್ತೆ ಬದಿ ನಿಲ್ಲಿಸಿದ್ದ ಟಿಪ್ಪರ್ ಲಾರಿಗೆ ಗುದ್ದಿದೆ.
ನಿಂತಿದ್ದ ಟಿಪ್ಪರ್‌ಗೆ ಬಸ್ ಡಿಕ್ಕಿ । ಬಸ್ಸಿನಲ್ಲಿದ್ದ 9 ಜನರಿಗೆ ಗಂಭೀರ ಗಾಯ । ನಂದಿ ಕ್ರಾಸ್ ಬಳಿ ಎನ್‌ಎಚ್ 44ರಲ್ಲಿ ಘಟನೆ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರರಸ್ತೆ ಬಳಿ ನಿಂತಿದ್ದ ಟಿಪ್ಪರ್ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿಯಾಗಿ, ಟಿಪ್ಪರ್ ಮತ್ತು ಬಸ್ ನಡುವೆ ಸಿಲುಕಿ ಕೊಂಡ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿ ಬಸ್ಸಿನಲ್ಲಿದ್ದ 9 ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ತಾಲೂಕಿನ ನಂದಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಮಂಗಳವಾರ ಸಂಜೆ ನಡೆದಿದೆ.
ಮೃತ ದ್ವಿಚಕ್ರ ಸವಾರನನ್ನು ತಾಲೂಕಿನ ಚದಲಪುರದ ವಾಸಿ ವಾಟರ್‌ಮೆನ್ ಗಂಗಪ್ಪ(52) ಎಂದು ಗುರ್ತಿಸಲಾಗಿದೆ.ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದ ಖಾಸಗಿ ಬಸ್ ನಂದಿಕ್ರಾಸ್ ಬಳಿ ಸರ್ವಿಸ್ ರಸ್ತೆಯಲ್ಲಿ ಜನರನ್ನು ಇಳಿಸಿ ರಾಷ್ಟ್ರೀಯ ಹೆದ್ದಾರಿ 44 ನ್ನು ಸೇರಲು ಬರುವಾಗ ಮುಂದೆ ರಸ್ತೆ ಬದಿ ನಿಲ್ಲಿಸಿದ್ದ ಟಿಪ್ಪರ್ ಲಾರಿಗೆ ಗುದ್ದಿದೆ. ಟಿಪ್ಪರ್ ಲಾರಿಯ ಹಿಂದೆ ರಸ್ತೆ ಕ್ರಾಸ್ ಮಾಡಿ ಹೆದ್ದಾರಿಗೆ ತೆರಳಲು ಟಿವಿಎಸ್ ಎಕ್ಸ್‌ಎಲ್ ದ್ವಿಚಕ್ರ ವಾಹನ ಸವಾರ ವಾಟರ್‌ಮೆನ್ ಗಂಗಪ್ಪ ತನ್ನ ದ್ವಿಚಕ್ರ ವಾಹನದಲ್ಲಿ ನಿಂತಿದ್ದು ಆತನಿಗೆ ಬಸ್ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಟಿಪ್ಪರ್ ಮತ್ತು ಬಸ್ ನಡುವೆ ಸಿಲುಕಿ ಸ್ಥಳದಲ್ಲೇ ಮೃತನಾಗಿದ್ದಾನೆ.
ಅಪಘಾತದಲ್ಲಿ ಬಸ್‌ನಲ್ಲಿದ್ದ 9 ಮಂದಿಗೆ ಗಂಭೀರ ಗಾಯಗಳಾಗಿದ್ದು, ಉಳಿದ ಹತ್ತಾರು ಮಂದಿಗೆ ಸಣ್ಣ-ಪುಟ್ಟ ಗಾಯಗಳಾದರೆ ಬಸ್ ಚಾಲಕನಿಗೆ ಯಾವುದೇ ಗಾಯಗಳಾಗದೆ ಪವಾಡ ಸದೃಶ್ಯವಾಗಿ ಪಾರಾಗಿದ್ದಾನೆ. ಗಾಯಾಳುಗಳಿಗೆ ಜಿಲ್ಲಾಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಅಪಘಾತದ ಸುದ್ದಿ ತಿಳಿದ ಕೂಡಲೆ ನಂದಿಗಿರಿಧಾಮ ಪೋಲಿಸ್ ಠಾಣೆಯ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಸಾಗಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸಿಕೆಬಿ-5 ಮೃತ ಗಂಗಪ್ಪಸಿಕೆಬಿ-6 ಅಪಘಾತ ಸ್ಥಳದಲ್ಲಿ ಬಸ್ ನಿಂದಲ್ಲಿ ಗಾಯಗೊಂಡವರನ್ನು ಕೆಲಕ್ಕೆ ಇಳಿಸುತ್ತಿರುವುದು.