ಸಾರಾಂಶ
ಖತರ್‌ನಾಕ್ ಕಳ್ಳ ಮಾತ್ರ ಸಿಸಿ ಕ್ಯಾಮೆರಾದ ಕಣ್ಗಾವಲನ್ನು ಲೆಕ್ಕಿಸದೆ ಸಲೀಸಾಗಿ ಬೈಕ್ ಕದ್ದು ಸಾಗಿಸಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಂಕೋಲಾ: ಇಲ್ಲಿಯ ಬಸ್ ನಿಲ್ದಾಣದಲ್ಲಿ ಬೈಕ್ ಕಳ್ಳರ ಕರಾಮತ್ತು ಮುತ್ತೆ ಮುಂದುವರಿದಿದೆ. ಪಾರ್ಕಿಂಗ್ ಸ್ಥಳದಲ್ಲಿ ಇಟ್ಟಿದ್ದ ಬೈಕ್‌ನ್ನು ಕದ್ದೊಯ್ದಲಾಗಿದ್ದು, ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಲಗೇರಿಯ ಕದಂಬ ವಾಟರ್ ಪ್ಯೂರಿಪಾಯರ್‌ನಲ್ಲಿ ಕೆಲಸ ಮಾಡುವ ಅಕ್ಷಯ ಆನಂದು ಆಚಾರಿ ಹನುಮಟ್ಟಾ ಅವರ ಹಿರೋ ಹೊಂಡಾ ಪ್ಲಸ್ ಬೈಕ್ ಕಳ್ಳತನವಾಗಿದೆ. ಶುಕ್ರವಾರ ಬೆಳಗ್ಗೆ ೭-೩೦ ಗಂಟೆಯಿಂದ ಮಧ್ಯಾಹ್ನ ೨-೪೫ರ ವೇಳೆಯ ನಡುವೆ ಬೈಕ್ ಕಳ್ಳತನವಾಗಿರುವ ಬಗ್ಗೆ ದೂರು ನೀಡಿದ್ದಾರೆ. ಪಿಎಸ್‌ಐ ಜಯಶ್ರೀ ಪ್ರಭಾಕರ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.ಸಿಟಿ ಕ್ಯಾಮೆರಾದಲ್ಲಿ ಸೆರೆ:
ಕಳೆದ ೧೫ ದಿನದ ಹಿಂದಷ್ಟೇ ಇಲ್ಲಿಯ ಬಸ್ ನಿಲ್ದಾಣದಲ್ಲಿ ಸುರಕ್ಷತೆಯ ದೃಷ್ಠಿಯಿಂದ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿತ್ತು. ಸಿಸಿ ಕ್ಯಾಮೆರಾ ಅಳವಡಿಸಿದ ಮೇಲೆ ಇಲ್ಲಿ ನಡೆಯುವ ಕಳ್ಳತನಕ್ಕೆ ಕಡಿವಾಣ ಬೀಳಬಹುದು ಎಂಬ ಲೆಕ್ಕಾಚಾರ ಪೊಲೀಸ್ ಹಾಗೂ ನಾಗರಿಕರದ್ದಾಗಿತ್ತು.ಆದರೆ ಖತರ್‌ನಾಕ್ ಕಳ್ಳ ಮಾತ್ರ ಸಿಸಿ ಕ್ಯಾಮೆರಾದ ಕಣ್ಗಾವಲನ್ನು ಲೆಕ್ಕಿಸದೆ ಸಲೀಸಾಗಿ ಬೈಕ್ ಕದ್ದು ಸಾಗಿಸಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಸ್ ಡಿಕ್ಕಿ: ಇಬ್ಬರು ಪೊಲೀಸರಿಗೆ ಗಾಯ
ಭಟ್ಕಳ: ಕರ್ತವ್ಯ ಮುಗಿಸಿ ಮನೆಗೆ ಹೋಗುತ್ತಿದ್ದ ಮೂವರು ಪೊಲೀಸರ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಬಸ್ ಹಾಯಿಸಿದ ಪರಿಣಾಮ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿರುವ ಕುರಿತು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.ಜೂ. ೨೧ರ ರಾತ್ರಿ ೮.೪೦ರ ಸುಮಾರಿಗೆ ಪೊಲೀಸ್ ಸಿಬ್ಬಂದಿ ಕೃಷ್ಣ ಎನ್.ಜಿ. ಅವರು ತಮ್ಮ ಮೋಟಾರ್ ಸೈಕಲ್ ಮೇಲೆ ನಗರ ಠಾಣೆಯಿಂದ ಸಾಗರ ರಸ್ತೆಯ ಬಳಿಯಲ್ಲಿನ ಪೊಲೀಸ್ ಕ್ವಾಟ್ರರ್ಸ್‌ಗೆ ಹೋಗುತ್ತಿರುವಾಗ ಹಿಂದುಗಡೆಯಿಂದ ಸಾರಿಗೆ ಬಸ್ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಚ್ಚಾರಸ್ತೆಯಲ್ಲಿ ತನ್ನ ಮೋಟಾರ ಸೈಕಲ್ ನಿಲ್ಲಿಸಿಕೊಂಡು ಮಾತನಾಡುತ್ತಿರುವ ಸಮಯ ಪೊಲೀಸ್ ಸಿಬ್ಬಂದಿಗಳಾದ ಕಿರಣಕುಮಾರ ಜಿ.ನಾಯ್ಕ, ಸುರೇಶ ನಾರಾಯಣ ಪಟಗಾರ ಅವರಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಅಪಘಾತದಿಂದ ಕಿರಣಕುಮಾರ ಹಾಗೂ ನಾರಾಯಣ ಪಟಗಾರ ಅವರಿಗೆ ಕಾಲು, ಹೊಟ್ಟೆಯ ಭಾಗಕ್ಕೆ ಮತ್ತು ಹಣೆಯ ಭಾಗಕ್ಕೆ ಗಾಯಗಳಾಗಿದೆ ಎಂದು ಕೃಷ್ಣ ಎನ್.ಜಿ. ಅವರು ದೂರು ನೀಡಿದ್ದಾರೆ.