ಕನ್ನಡಪ್ರಭ ವಾರ್ತೆ ಗೋಕಾಕ
ಅಂತಾರಾಜ್ಯ ಬೈಕ್ ಕಳ್ಳನನ್ನು ಬಂಧಿಸಿರುವ ಗೋಕಾಕ ಶಹರ ಠಾಣೆ ಪೊಲೀಸರು, ₹ 3.84 ಲಕ್ಷ ಮೌಲ್ಯದ 7 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.ಕೊಲ್ಹಾಪೂರ ಜಿಲ್ಲೆಯ ಗಡಹಿಂಗ್ಲಜ ಮೂಲದ ರಾಮದುರ್ಗ ತಾಲೂಕಿನ ಕಡಕೋಳ ಗ್ರಾಮದ ವಾಸಿ ರಮೇಶ ಮನೋಹರ ಸುತಾರ(36) ಬಂಧಿತ ಬೈಕ್ ಕಳ್ಳ. ಮಾ.30ರಂದು ನಗರದ ಬಸ್ ನಿಲ್ದಾಣದಲ್ಲಿ ಬೈಕ್ ಕಳ್ಳತನವಾಗಿತ್ತು. ಈ ಕುರಿತು ಗೋಕಾಕ ನಗರದ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ಹಿನ್ನಲೆಯಲ್ಲಿ ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಿದ್ದ ಪೊಲೀಸರು, ರಮೇಶ ಮನೋಹರ ಸುತಾರ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ. ಗೋಕಾಕ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2, ಬೆಳಗಾವಿ ಸಾಂಬ್ರಾ, ಸಂಕೇಶ್ವರ, ಗಡಹಿಂಗ್ಲಜ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳುವು ಮಾಡಿದ್ದ 5 ಸೇರಿದಂತೆ ಒಟ್ಟು 7 ಬೈಕ್ ಗಳನ್ನು ಜಪ್ತಿ ಮಾಡಿದ್ದಾರೆ.ಗೋಕಾಕ ಸಿಪಿಐ ವೃಸುರೇಶಬಾಬು ಮಾರ್ಗದರ್ಶನದಲ್ಲಿ ಪಿಎಸ್‌ಐ ಕಿರಣ ಮೋಹಿತೆ, ಪಿಎಸ್ಐ ಗೌರಿಶಂಕರ, ಸಿಬ್ಬಂದಿ ಆರ್.ಬಿ.ಹಡಪದ, ಕೆ.ಎನ್.ಇಳಿಗೇರ, ಬಿ.ಎಸ್.ಸಿದ್ನಾಳ, ಎಂ.ಆರ್.ಅಂಬಿ, ಪಿ.ಎಮ್ ಘಸ್ತಿ, ಜೆ.ಎಚ್.ಗುಡ್ಲಿ, ಎಸ್.ಎಲ್.ಮಂಗಿ, ಮಂಜು ಹುಚ್ಚಗೌಡರ, ಐ.ವಿ.ಘಂಟಿ, ಮಂಜುನಾಥ್ ನಾಯಿಕ, ಬೆಳಗಾವಿಯ ಟೆಕ್ನಿಕಲ್ ಸೆಲ್‌ನ ಸಚೀನ ಪಾಟೀಲ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ತಂಡದ ಕಾರ್ಯಕ್ಕೆ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಶ್ಲಾಘಿಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.