ಮಹಾಲಿಂಗಪುರ: ಸ್ಥಳೀಯ ಕೆಎಲ್‌ಇ ಸಂಸ್ಥೆಯ ಬಿಸಿಎ ಕಾಲೇಜಿನ ೨ನೇ ಬ್ಯಾಚ್ ವಿದ್ಯಾರ್ಥಿಗಳು ಟಾಟಾ ಕಂಪನಿಗೆ ಸಾಫ್ಟ್ವೇರ್ ಟ್ರೇನಿ ಆಗಿ ಆಯ್ಕೆಯಾಗಿದ್ದಾರೆ. ಸಂದರ್ಶನದಲ್ಲಿ ಪಾಲ್ಗೊಂಡ ೫೧ ವಿದ್ಯಾರ್ಥಿಗಳ ಪೈಕಿ ೬ ವಿದ್ಯಾರ್ಥಿಗಳಿಗೆ ನೌಕರಿ ಆದೇಶ ಪತ್ರ ಬಂದಿದ್ದು, ೪೬ ವಿದ್ಯಾರ್ಥಿಗಳು ಫೈನಲ್ ರೌಂಡ್‌ನಲ್ಲಿದ್ದು ನೌಕರಿ ಖಾತ್ರಿಯಲ್ಲಿದ್ದಾರೆ. ಆಯ್ಕೆಯಾದ ೬ ವಿದ್ಯಾರ್ಥಿಗಳು ೨.೩೦ ಲಕ್ಷ ಪ್ಯಾಕೇಜ್ ವೇತನಕ್ಕೆ ಅರ್ಹರಾಗಿದ್ದಾರೆ.

ಗ್ರಾಮೀಣ ಭಾಗದಲ್ಲೂ ಈ ಕಾಲೇಜಿನ ಮೊದಲ ಬ್ಯಾಚ್‌ನ ಎಲ್ಲಾ ೩೪ ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗುವ ಮೂಲಕ ಶೇ.೧೦೦ ಉದ್ಯೋಗವಕಾಶ ಪಡೆದಿದ್ದರು. ಇದೀಗ ೨ನೇ ಬ್ಯಾಚ್‌ನ ವೈಷ್ಣವಿ ಉಳ್ಳಾಗಡ್ಡಿ, ಲಕ್ಷ್ಮೀ ಹಿಟ್ಟಿನಮಠ, ಐಶ್ವರ್ಯ ಅಳ್ಳಿಚಂಡಿ, ಶಾಂಭವಿ ಯಾದವಾಡ, ವಿಶಾಖಾ ಬದಿ, ವಿಜಯಲಕ್ಷ್ಮೀ ಬುರುಡ ಟಾಟಾ ಕಂಪನಿಗೆ ಆಯ್ಕೆಯಾಗಿದ್ದು, ಉಳಿದ ೪೬ ವಿದ್ಯಾರ್ಥಿಗಳು ಫೈನಲ್ ರೌಂಡ್‌ನಲ್ಲಿ ಆಯ್ಕೆಯಾದರೆ ಮತ್ತೆ ಶೇ.೧೦೦ ಉದ್ಯೋಗವಕಾಶ ಪಡೆದ ಹೆಮ್ಮೆ ನಮ್ಮದಾಗುತ್ತದೆ ಎಂದು ಮಹಾಲಿಂಗಪುರ ಕೆಎಲ್‌ಇ ಬಿಸಿಎ ಕಾಲೇಜಿನ ಸಂಯೋಜಕ ಎಸ್.ಐ.ಪಾಟೀಲ ಹರ್ಷ ವ್ಯಕ್ತಪಡಿಸಿದ್ದಾರೆ.