ಬೈಕ್‌ಗಳ ಮುಖಾಮುಖಿ ಡಿಕ್ಕಿ: ವ್ಯಕ್ತಿ ಸಾವು

| Published : Oct 27 2023, 12:30 AM IST

ಸಾರಾಂಶ

ಸಂಡೂರು ತಾಲೂಕಿನ ತುಮಟಿ ಗ್ರಾಮದ ರೇವಣಸಿದ್ದಪ್ಪ(27) ಮೃತಪಟ್ಟ ವ್ಯಕ್ತಿ.
ಕುರುಗೋಡು: ತಾಲೂಕಿನ ದಮ್ಮೂರು ಗ್ರಾಮದ ಬಳಿ ಎರಡು ಬೈಕ್‌ಗಳ ಮಧ್ಯೆ ಜರುಗಿದ ಡಿಕ್ಕಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಗುರುವಾರ ಜರುಗಿದೆ. ಸಂಡೂರು ತಾಲೂಕಿನ ತುಮಟಿ ಗ್ರಾಮದ ರೇವಣಸಿದ್ದಪ್ಪ(27) ಮೃತಪಟ್ಟ ವ್ಯಕ್ತಿ. ದಮ್ಮೂರು ಗ್ರಾಮದಲ್ಲಿರುವ ಹೆಂಡತಿ ಮನೆಗೆ ಬಂದಿದ್ದ ರೇವಣಸಿದ್ದಪ್ಪ ಗ್ರಾಮದಿಂದ ಕೋಳೂರು ಕ್ರಾಸ್‌ ಕಡೆಗೆ ಬೈಕ್‌ನಲ್ಲಿ ಬರುವ ಸಂದರ್ಭದಲ್ಲಿ ಸಿರುಗುಪ್ಪ ಕಡೆಯಿಂದ ಬಳ್ಳಾರಿ ಕಡೆಗೆ ತೆರಳುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಾಯಗೊಂಡಿದ್ದ ರೇವಣಸಿದ್ದಪ್ಪ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮೃತಪಟ್ಟರು. ಈ ಕುರಿತು ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.