ಸಾರಾಂಶ
ಭಟ್ಕಳ: ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳ ಈಜು ಸ್ಪರ್ಧೆಯಲ್ಲಿ ಮುರುಡೇಶ್ವರದ ಬೀನಾ ವೈದ್ಯ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳಾದ ತನೋಜ್ ಎಸ್ ಪೂಜಾರಿ ೧೦೦ ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಪ್ರಥಮ, ೫೦ ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಪ್ರಥಮ, ೫೦ ಮೀ ಪ್ರಥಮ, ೪x೧೦೦ ಮೀ. ರೀಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಯಶವಂತ್ ಖಾರ್ವಿ ೪೦೦ ಮೀ. ಫ್ರೀಸ್ಟೈಲ್‌ನಲ್ಲಿ ಪ್ರಥಮ ೪x೧೦೦ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಸಂಕೇತ್ ಎಸ್. ಪೂಜಾರಿ ೫೦ ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ದ್ವಿತೀಯ, ೪x೧೦೦ ಮೀ. ರಿಲೇ ಪ್ರಥಮ ಸ್ಥಾನ ಗಳಿಸಿದ್ದಾರೆ.ಕೌಶಿಕ್ ಮೊಗೇರ ೨೦೦ ಮೀ. ಬ್ಯಾಕ್‌ಸ್ಟ್ರೋಕ್ ದ್ವಿತೀಯ, ೪x೧೦೦ ಮೀ. ರಿಲೇ ಪ್ರಥಮ ಸ್ಥಾನ ಪಡೆದಿದ್ದಾರೆ. ಶ್ರೀಷಾ ನಾಯ್ಕ ೨೦೦ ಮೀ. ಬಟರ್‌ಪ್ಲೈನಲ್ಲಿ ದ್ವಿತೀಯ, ಇಫಾಮ್ ೨೦೦ ಮೀ ಫ್ರಿಸ್ಟೈಲ್‌ನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವರು ಮಂಕಾಳ ಎಸ್. ವೈದ್ಯ, ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಟ್ರಸ್ಟಿ, ಆಡಳಿತ ನಿರ್ದೇಶಕಿ ಪುಷ್ಪಲತಾ ಮಂಕಾಳ ವೈದ್ಯ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ನಯೀಮ್ ಗೊರಿಯ, ದೈಹಿಕ ಶಿಕ್ಷಣ ಶಿಕ್ಷಕ ಲೋಹಿತ್ ಗೌಡ, ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ. ವೈಟಿಎಸ್ಎಸ್ ಪ್ರೌಢಶಾಲೆಗೆ ಸಮಗ್ರ ವೀರಾಗ್ರಣಿ
ಯಲ್ಲಾಪುರ: ಇತ್ತೀಚೆಗೆ ನಡೆದ ಕಿರವತ್ತಿ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಪಟ್ಟಣದ ವೈಟಿಎಸ್ಎಸ್ ಕನ್ನಡ ಮಾಧ್ಯಮ ಪ್ರೌಢಶಾಲಾ ವಿದ್ಯಾರ್ಥಿಗಳು ೨೨೮ ಅಂಕಗಳೊಂದಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.ವಿಶ್ವ ಆಚಾರಿ ೪೦೦ ಮೀ. ಓಟದಲ್ಲಿ, ಕಾರ್ತಿಕ ವರಕ ೮೦೦ ಓಟದಲ್ಲಿ, ವಾಜಿ ಶಿಂದೆ ೧೫೦೦ ಮೀ. ಓಟದಲ್ಲಿ, ಮಂಜುನಾಥ್ ಸಿಂಧೆ ಈಟಿ ಎಸೆತದಲ್ಲಿ, ನಂದನ್ ಗೇರ್‌ಗೆದ್ದೆ ಚೆಸ್‌ನಲ್ಲಿ ಪ್ರಥಮ ಹಾಗೂ ಬಾಲಕರ ವಿಭಾಗದ ಖೋಖೋದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.ಬಾಲಕಿಯರ ವಿಭಾಗದ ೧೦೦ ಮೀ. ಓಟ ಹಾಗೂ ೧೧೦ ಮೀ ಹರ್ಡಲ್ಸ್‌ನಲ್ಲಿ ಛಾಯಾ ಸಿದ್ಧಿ, ೨೦೦ ಮೀ. ಓಟದಲ್ಲಿ ಗೀತಾ ಸಿದ್ದಿ, ೪೦೦ ಮತ್ತು ೮೦೦ ಮೀ ಓಟದಲ್ಲಿ ಜಯಶ್ರೀ ಮೈಲಾರ್, ೧೫೦೦ ಮೀ. ಓಟದಲ್ಲಿ ರಕ್ಷಿತಾ ಮರಾಠಿ, ೪೦೦ ಮೀ. ಹರ್ಡಲ್ಸ್‌ನಲ್ಲಿ ರಕ್ಷಿತಾ ಎಸ್. ಮರಾಠಿ, ೩೦೦೦ ಮೀ. ನಡಿಗೆ ಸ್ಪರ್ಧೆಯಲ್ಲಿ ಕೃಪಾ ಮರಾಠಿ, ೩೦೦೦ ಮೀ. ಓಟದಲ್ಲಿ ಕವಿತಾ ಮರಾಠಿ, ಈಟಿ ಎಸೆತ ಮತ್ತು ಚಕ್ರ ಎಸೆತದಲ್ಲಿ ಸಂಧ್ಯಾ ಗೌಡ, ಉದ್ದ ಜಿಗಿತ ರೇಷ್ಮಾ ಚೌಕೇಳೆಕರ್, ತ್ರಿವಿಧ ಜಿಗಿತದಲ್ಲಿ ಪ್ರಿಯಾಂಕ ಸಿದ್ದಿ ಪ್ರಥಮ ಸ್ಥಾನ ಗಳಿಸಿದ್ದು, ೧೦೦x ೪೦೦ ರಿಲೇ ಗೀತಾ ಸಿದ್ದಿ ತಂಡ, ೪೦೦x೪೦೦ ರಿಲೇ ಸ್ಪರ್ಧೆಯಲ್ಲಿ ರಕ್ಷಿತಾ ಎಸ್., ಬಾಲಕಿಯರ ಖೋಖೋ, ಕಬಡ್ಡಿ, ಥ್ರೋಬಾಲ್ ಸ್ಪರ್ಧೆಗಳಲ್ಲಿ ಪ್ರಥಮಸ್ಥಾನ ಗಳಿಸಿ ಸಮಗ್ರ ವೀರಾಗ್ರಣಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ರವಿಕುಮಾರ ಶಾನಭಾಗ, ಕಾರ್ಯದರ್ಶಿ ರಾಜೇಂದ್ರಪ್ರಸಾದ ಭಟ್ಟ, ಪದಾಧಿಕಾರಿಗಳು ಹಾಗೂ ಸದಸ್ಯರು, ಮುಖ್ಯಾಧ್ಯಾಪಕ ಎನ್.ಎಸ್. ಭಟ್ಟ, ಕಾಲೇಜು ಪ್ರಾಂಶುಪಾಲ ಆನಂದ ಹೆಗಡೆ ಮತ್ತು ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.