ಸಾರಾಂಶ
ಬೈಲಹೊಂಗಲ : ರಾಜ್ಯ ಜೈವಿಕ ಇಂಧನ ನೀತಿ ಇಡೀ ರಾಷ್ಟ್ರಕ್ಕೆ ಮಾದರಿ ಎನಿಸಿದ್ದು, ಪ್ರಸ್ತುತ ಸುವರ್ಣ ಭೂಮಿ ಯೋಜನೆಯಡಿ ಜೈವಿಕ ಇಂಧನ ಕಾರ್ಯಕ್ರಮ ಗ್ರಾಮೀಣ ಭಾಗದ ಪ್ರತಿ ಕುಟುಂಬಕ್ಕೂ ಜಾಗೃತಿ ಮೂಡಿಸುವುದಾಗಿದೆ ಎಂದು ತಾಪಂ ಯೋಜನಾಧಿಕಾರಿ ರಾಜಶೇಖರ ಕಡೆಮನಿ ಹೇಳಿದರು.
ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ ಅಂಗವಾಗಿ ತಾಪಂ ಆವರಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಚಾಲನೆ ನೀಡಿ ಮಾತನಾಡಿ, ಜನಸಾಮಾನ್ಯರಲ್ಲಿ ಇದರ ಕುರಿತು ಜನಜಾಗೃತಿ ಮೂಡಿಸಲು ಗ್ರಾಮೀಣ ಮಟ್ಟದಲ್ಲಿ ವ್ಯಾಪಕವಾದ ಪ್ರಚಾರದೊಂದಿಗೆ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜೈವಿಕ ಇಂಧನ ಬಳಕೆಯ ಕುರಿತು ತಾಪಂನಿಂದ ಅರಿವು ಮೂಡಿಸಲಾಗುವುದು ಎಂದರು.
ತಾಪಂ ಲೆಕ್ಕಸಾಹಯಕ ಪ್ರಶಾಂತ ಹಿರೇಮಠ, ವ್ಯವಸ್ಥಾಪಕ ಎ.ಎನ್. ಮಿರ್ಜಿ, ಪ್ರಗತಿ ಸಹಾಯಕ ಬಸವರಾಜ್ ಮುನವಳ್ಳಿ, ಅಭಿವೃದ್ಧಿ ಅಧಿಕಾರಿ ಶಿವಲೀಲಾ ಯರಗಟ್ಟಿ, ನಿವೇದಿತಾ ಮಡಿವಾಳ, ದ್ವೀತಿಯ ದರ್ಜೆ ಸಹಾಯಕ ರಮೇಶ ಮನ್ನೆನ್ನಿ, ತಾಪಂ ಐಇಸಿ ಸಂಯೋಜಕ ಎಸ್ ವ್ಹಿ ಹಿರೇಮಠ, ತಾಲೂಕಾ ಕಜಾಪ ವಕ್ತಾರ ಮಹಾಂತೇಶ ರಾಜಗೋಳಿ ಇದ್ದರು.