ಅಧಿಕಾರಶಾಹಿ ವಿರುದ್ಧ ಹೋರಾಡಿದ ನಾಯಕ ಬಿರ್ಸಾ ಮುಂಡಾ

| Published : Nov 17 2024, 01:19 AM IST

ಸಾರಾಂಶ

ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಪಕ್ಷದ ಎಸ್‌ಟಿ ಮೋರ್ಚಾ ವತಿಯಿಂದ ಭಗವಾನ ಬಿರ್ಸಾ ಮುಂಡಾ ಅವರ ೧೫೦ನೇ ಜಯಂತಿಯನ್ನು ಆಚರಿಸಲಾಯಿತು.

ಹಾವೇರಿ: ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಪಕ್ಷದ ಎಸ್‌ಟಿ ಮೋರ್ಚಾ ವತಿಯಿಂದ ಭಗವಾನ ಬಿರ್ಸಾ ಮುಂಡಾ ಅವರ ೧೫೦ನೇ ಜಯಂತಿಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂಜುಂಡೇಶ ಕಳ್ಳೇರ ಮಾತನಾಡಿ, ಭಗವಾನ ಬಿರ್ಸಾ ಮುಂಡಾರವರು ಜಾರ್ಖಂಡನ ಬುಡಕಟ್ಟಿ ಜನಾಂಗದ ನಾಯಕರು. ಕೇವಲ ೨೫ ವರ್ಷಗಳ ಅಲ್ಪ ಜೀವಿತಾವಧಿಯಲ್ಲಿ ಇಂದಿನ ಜಾರ್ಖಂಡನ ಉಲಿಹಾತುವಿನ ಬಾಲಕನಾಗಿದ್ದಾಗಲೇ ವಸಾಹತುಶಾಹಿ ಶೋಷಣೆ ವಿರುದ್ಧ ಸಿಡಿದೆದ್ದರು. ಜನರ ಪ್ರತಿರೋಧದ ನಾಯಕನಾಗಿ ಹೊರಹೊಮ್ಮಿದ್ದ ಬ್ರಿಟಿಷ್ ಅಧಿಕಾರಿಗಳು ಮತ್ತು ಸ್ಥಳಿಯ ಜಮೀನುದಾರರು ಬುಡಕಟ್ಟು ಸಮುದಾಯಗಳನ್ನು ಶೋಷಿಸುತ್ತಿದ್ದಾಗ, ಅವರು ಭೂಮಿಯನ್ನು ಕಸಿದುಕೊಂಡು ದೌರ್ಜನ್ಯ ಎಸಗುತ್ತಿದ್ದಾಗ ಬಿರ್ಸಾ ಈ ಸಾಮಾಜಿಕ ಮತ್ತು ಆರ್ಥಿಕ ಅನ್ಯಾಯದ ವಿರುದ್ಧ ಸಿಡಿದೆದ್ದರು. ಅವರು ತಮ್ಮ ಹಕ್ಕುಗಳಿಗಾಗಿ ಹೋರಾಡಲು ನಾಯಕತ್ವ ವಹಿಸಿದರು. ಧರ್ತಿ ಆಬಾ (ಭೊಮಿಯ ಪಿತಾಮಹ) ಎಂದು ಕರೆಯಲಾಗುವ ಬಿರ್ಸಾ ೧೮೯೦ರ ದಶಕದ ಉತ್ತರಾರ್ಧದಲ್ಲಿ ಬ್ರಿಟಿಷ್ ದಬ್ಬಾಳಿಕೆಯ ವಿರುದ್ಧ ಉಲ್ಗುಲಾನ್ ಅಥವಾ ಮುಂಡಾ ದಂಗೆಯನ್ನು ಸಂಘಟಿಸಿದರು ಎಂದು ಹೇಳಿದರು.ಜಿಲ್ಲಾ ಎಸ್.ಟಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಮೇಶ ಮಾಗಳ ಮಾತನಾಡಿ, ಬ್ರಿಟಿಷರ ವಸಾಹತುಶಾಹಿ ಶೋಷಣೆ ವಿರುದ್ಧ ಜನರ ಪ್ರತಿರೋಧನ ನಾಯಕನಾಗಿ ಹೊರಹೊಮ್ಮಿದ ಭಗವಾನ ಬಿರ್ಸಾ ಮುಂಡಾ, ಜನರ ಹಕ್ಕುಗಳ ಹೋರಾಟಕ್ಕೆ ಚಿಕ್ಕ ವಯಸ್ಸಿನಲ್ಲೇ ನಾಯಕತ್ವ ವಹಿಸಿದವರು. ಅವರ ಸಾಹಸಗಾಥೆಗಳು ಈಗಲೂ ಜಾರ್ಖಂಡ್‌ನಲ್ಲಿ ದಂತಕಥೆಗಳಾಗಿವೆ. ಅವರ ಆಕಾಂಕ್ಷೆಗಳು - ಸ್ವಾತಂತ್ರ್ಯ, ನ್ಯಾಯ, ಆಸ್ಮಿತೆ ಮತ್ತು ಘನತೆ - ನಮ್ಮ ದೇಶದ ಯುವಕರಿಗೆ ಸದಾ ಕಾಲ ಪ್ರೇರಣೆ ಎಂದು ಹೇಳಿದರು. ಪಕ್ಷದ ಪ್ರಮುಖರು, ಕಾರ್ಯಕರ್ತರು ಇದ್ದರು.