ಮಲ್ಲಿಕಾರ್ಜುನ ಶಂಕರ ಶಿವಾಚಾರ್ಯರ ಜನ್ಮೋತ್ಸವ

| Published : Feb 27 2024, 01:31 AM IST

ಸಾರಾಂಶ

ರಬಕವಿ-ಬನಹಟ್ಟಿ: ಬನಹಟ್ಟಿಯಲ್ಲಿ ಕುರುಹಿನಶೆಟ್ಟಿ ಸಮಾಜದ ಜಗದ್ಗುರುಗಳಾದ ಶ್ರೀಗುರು ಮಲ್ಲಿಕಾರ್ಜುನ ಶಂಕರ ಶಿವಾಚಾರ್ಯ ಸ್ವಾಮೀಜಿ ೬೪ನೇ ಜನ್ಮೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬನಹಟ್ಟಿಯಲ್ಲಿ ಕುರುಹಿನಶೆಟ್ಟಿ ಸಮಾಜದ ಜಗದ್ಗುರುಗಳಾದ ಶ್ರೀಗುರು ಮಲ್ಲಿಕಾರ್ಜುನ ಶಂಕರ ಶಿವಾಚಾರ್ಯ ಸ್ವಾಮೀಜಿ ೬೪ನೇ ಜನ್ಮೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಬನಹಟ್ಟಿಯ ಶ್ರೀ ಗಿರಿಮಲ್ಲೇಶ್ವರ ಆಶ್ರಮದಿಂದ (ವೈಭವ ಟಾಕೀಜದಿಂದ) ರಾಮಪುರದ ಶ್ರೀ ಬೋಜು ಅಣ್ಣಾ ಹೂಗಾರ ತೋಟದವರೆಗೆ ತೊಟ್ಟಿಲದೊಂದಿಗೆ ಪಾದಯಾತ್ರೆ ಕಾರ್ಯಕ್ರಮಕ್ಕೆ ಮಹಾಲಿಂಗಪುರದ ಮಹಾಲಿಂಗೇಶ್ವರ ಗುರುಗಳು ಚಾಲನೆ ನೀಡಿದರು. ನಗರದ ಪ್ರಮುಖ ಬೀದಿಗಳಲ್ಲಿ ಹಾಯ್ದು ರಾಮಪುರದ ಬೋಜು ಹೂಗಾರ ತೋಟದವರೆಗೆ ಪಾದಯಾತ್ರೆ ನಡೆಯಿತು. ನಂತರ ಸತ್ಸಂಗ ಕಾರ್ಯಕ್ರಮ ನಡೆಯಿತು.

ದೇವಿ ಆರಾಧಕರಾದ ಬುದ್ನಿ ಗುರುಗಳು, ನೀಲಕಂಠೇಶ್ವರ ಮಠದ ಗುರುಗಳಾದ ಮಹಾಲಿಂಗಪ್ಪ ಹಾದಿಮನಿ, ಮೇಲಪ್ಪ ಅಮ್ಮಲಜೇರಿ ಹಾಗೂ ರಾಮಪುರದ ಶಂಕರಪ್ಪ ಅಮ್ಮಲಜೇರಿ, ಭೋಜು ಹೂಗಾರ, ಚಿದಾನಂದ ಚಿಂಚಖಂಡಿ ಮತ್ತು ಚನ್ನಪ್ಪ ಸಣಪೇಟಿ, ಪ್ರಭು ಬೆಳ್ಳುಬ್ಬಿ, ಈರಣ್ಣಾ ಚಿಂಚಖಂಡಿ, ಬಸವರಾಜ ಹೊಸಮನಿ ಹಾಗೂ ರಬಕವಿ-ಬನಹಟ್ವಿ ತಾಲೂಕಿನ ಎಲ್ಲ ಊರಿನ ಸಮಾಜದ ಹಿರಿಯರು, ಇತರರು ಇದ್ದರು