ಸಾರಾಂಶ
ಶ್ರೀನಿವಾಸಪ್ರಸಾದ್ ಅವರು ರಾಜ್ಯ ಕಂಡ ಒಬ್ಬ ದಿಟ್ಟ, ನೇರ ನಡೆ-ನುಡಿಯ ಸಜ್ಜನ, ಸ್ವಾಭಿಮಾನಿ ರಾಜಕೀಯ ಮುತ್ಸದ್ಧಿಗಳಾಗಿದ್ದವರು.
ಕನ್ನಡಪ್ರಭ ವಾರ್ತೆ ಮೈಸೂರು
ಒಡನಾಡಿ ಸಂಸ್ಥೆಯಲ್ಲಿ ವಿಚಾರ ಮಂಥನ ಮೂಲಕ ವಿ. ಶ್ರೀನಿವಾಸಪ್ರಸಾದ್ ಅವರ ಜನ್ಮ ದಿನವನ್ನು ಮಂಗಳವಾರ ಆಚರಿಸಲಾಯಿತು.ಒಡನಾಡಿಯ ಸ್ಟ್ಯಾನ್ಲಿ- ಪರಶುರಾಮ್ ಮಾತನಾಡಿ, ಶ್ರೀನಿವಾಸಪ್ರಸಾದ್ ಅವರು ರಾಜ್ಯ ಕಂಡ ಒಬ್ಬ ದಿಟ್ಟ, ನೇರ ನಡೆ-ನುಡಿಯ ಸಜ್ಜನ, ಸ್ವಾಭಿಮಾನಿ ರಾಜಕೀಯ ಮುತ್ಸದ್ಧಿಗಳಾಗಿದ್ದವರು. ಇಡೀ ರಾಜಕೀಯ ವ್ಯವಸ್ಥೆಯೇ ಹಾಳಾಗಿರುವ ಇಂದಿನ ದಿನಗಳಲ್ಲಿ ಅವರ ರಾಜಕೀಯ ಜೀವನ ಆದರ್ಶ ಮತ್ತು ಪ್ರೇರಣೆ ಎಂದು ಹೇಳಿದರು.
ಇಂದು ಅವರಿಲ್ಲ ಎಂಬುವುದನ್ನು ನೆನೆಸಿಕೊಳ್ಳಲು ಅಸಾಧ್ಯ. ಅವರ ಆದರ್ಶಗಳು ಹಾಗೂ ಅವರು ತೋರಿಸದ ಮಾಗದರ್ಶನದ ದಾರಿಯಲ್ಲೇ ನಾವು ಒಡನಾಡಿಯನ್ನು ನಡೆಸಿಕೊಂಡು ಹೋಗುತ್ತೇವೆ ಎಂದರು.ಇದೇ ವೇಳೆ ಶ್ರೀನಿವಾಸಪ್ರಸಾದ್ ಅವರನ್ನು ನೆನದು ಧರ್ಮಪತ್ನಿ ಭಾಗಲಕ್ಷ್ಮಿ ಅವರು ಭಾವುಕರಾದರು. ನಂತರದಲ್ಲಿ ಮಕ್ಕಳಿಗೆ ಹಣ್ಣು ಹಾಗೂ ಸಿಹಿ ವಿತರಿಸಲಾಯಿತು.
ಪ್ರಸಾದ್ ಪುತ್ರಿ ಪೂರ್ಣಿಮಾ ಪ್ರಸಾದ್, ಪಿ. ನಂದಕುಮಾರ್, ಡಾ. ನೀಲಗಿರಿ ತಳವಾರ, ಡಾ. ಮುಳ್ಳೂರು ನಂಜುಂಡಸ್ವಾಮಿ, ಕುಲಪತಿಗಳಾದ ಚಾಮರಾಜನಗರ ವಿವಿಯ ಪ್ರೊ.ಎಂ.ಆರ್. ಗಂಗಾಧರ್, ಕಾನೂನು ವಿವಿಯ ಪ್ರೊ.ಸಿ. ಬಸವರಾಜು ಮೊದಲಾದವರು ಇದ್ದರು.