ಕನ್ನಡಪ್ರಭ ವಾರ್ತೆ ರಬಕವಿ ಬನಹಟ್ಟಿ

ಗ್ರಾಮೀಣ ಪ್ರದೇಶಗಳಲ್ಲಿ ಅಪರೂಪಕ್ಕೆ ಕಾಣಸಿಗುವ ವಿಚಿತ್ರ ಘಟನೆಯೊಂದು ನಾವಲಗಿ ಗ್ರಾಮದಲ್ಲಿ ನಡೆದಿದ್ದು, ರೈತರೊಬ್ಬರ ಆಕಳು ಹೆತ್ತ ಕರು ತೀವ್ರ ಅಂಗವೈಕಲ್ಯದೊಂದಿಗೆ ಮಂಗಳವಾರ ಜನಿಸಿದ್ದು, ಸ್ಥಳೀಯರಲ್ಲಿ ಅಚ್ಚರಿಗೆ ಕಾರಣವಾಗಿದೆ.

ಹುಟ್ಟಿದ ತಕ್ಷಣವೇ ಕರು ಮೃತಪಟ್ಟಿದೆ. ಕರುವಿನ ದೇಹದ ಕೆಲವು ಅಂಗಗಳು ಸಹಜವಾಗಿ ಬೆಳವಣಿಗೆ ಹೊಂದಿರದೆ ಜನಿಸಿದ್ದು. ಕರುವಿನ ಕಾಲು ವಿಚಿತ್ರ ರೂಪದಲ್ಲಿ ಕಂಡಿದೆ. ಕರು ಜನಿಸಿದಾಗ ದೇಹದ ಬೆಳವಣಿಗೆಯಲ್ಲಿ ಅಸಹಜತೆ ಕಂಡು ಬಂದಿದೆ. ಕೆಲವು ಅಂಗಗಳು ಬೆಳವಣಿಗೆ ಹೊಂದಿರದ ಕಾರಣ ವಿಚಿತ್ರ ರೂಪದಲ್ಲಿ ಕರು ಜನನವಾಗಿದೆ.