ಗೋವುಗಳಿಗೆ ಮೇವು ಕೊಡುಗೆ ನೀಡಿ ಜನ್ಮದಿನಾಚರಣೆ

| Published : Oct 29 2024, 12:45 AM IST

ಸಾರಾಂಶ

ಕೋಟದಲ್ಲಿ ನಾಗೇಂದ್ರ ಪುತ್ರನ್ ನೇತೃತ್ವದಲ್ಲಿ ‘ಗೋವಿಗಾಗಿ ನಾವು’ ಇದರ 6ನೇ ಸರಣಿ ಕಾರ್ಯಕ್ರಮದಲ್ಲಿ ಕೋಟದ ಭರತ್ ಗಾಣಿಗ ಅವರ ಹುಟ್ಟುಹಬ್ಬದ ಅಂಗವಾಗಿ ಸ್ಥಳೀಯ ಗೋಶಾಲೆಗಳಿಗೆ ಮೇವು ಹಸ್ತಾಂತರಿಸುವ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಕೋಟ

ಗೋವಿನ ಮಹತ್ವ ಅರಿತು ಅವುಗಳಿಗೆ ಮೇವು ಒದಗಿಸುವ ‘ಗೋವಿಗಾಗಿ ನಾವು’ ತಂಡದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಮೊಳಹಳ್ಳಿ ದಿನೇಶ್ ಹೆಗ್ಡೆ ಹೇಳಿದರು.ಕೋಟದಲ್ಲಿ ನಾಗೇಂದ್ರ ಪುತ್ರನ್ ನೇತೃತ್ವದಲ್ಲಿ ‘ಗೋವಿಗಾಗಿ ನಾವು’ ಇದರ 6ನೇ ಸರಣಿ ಕಾರ್ಯಕ್ರಮದಲ್ಲಿ ಕೋಟದ ಭರತ್ ಗಾಣಿಗ ಅವರ ಹುಟ್ಟುಹಬ್ಬದ ಅಂಗವಾಗಿ ಸ್ಥಳೀಯ ಗೋಶಾಲೆಗಳಿಗೆ ಮೇವು ಹಸ್ತಾಂತರಿಸುವ ಸಭೆಯಲ್ಲಿ ಮಾತನಾಡಿದರು.ಗೋ ಆರಾಧನೆ ಶ್ರೇಷ್ಠವಾದ ಕಾರ್ಯಕ್ರಮ, ಇಂತಹ ಕೈಂಕರ್ಯಗಳನ್ನು ರಾಜಕೀಯ ರಹಿತವಾಗಿ ಹಮ್ಮಿಕೊಂಡಿರುವುದು ಅತ್ಯಂತ ಪ್ರಶಂಸನೀಯ ಎಂದರು.ಇದೇ ವೇಳೆ ಮೇವು ವಾಹನಕ್ಕೆ ಹಾಕುವ ಮೂಲಕ ಮುಖಂಡರಾದ ಮೊಳಹಳ್ಳಿ ದಿನೇಶ್ ಹೆಗ್ಡೆ, ಗೋವಿಗಾಗಿ ನಾವು ತಂಡದ ಸದಸ್ಯ ಭರತ್ ಗಾಣಿಗರಿಗೆ ಜನುಮದಿನದ ಶುಭಾಶಗಳನ್ನು ಕೋರಿ ಸಿಹಿ ಹಂಚಿ ಗೌರವಿಸಿದರು.

ಈ ಸಂದರ್ಭ ಗೋವಿಗಾಗಿ ನಾವು ತಂಡದ ಮುಖ್ಯಸ್ಥ ನಾಗೇಂದ್ರ ಪುತ್ರನ್, ಕೋಟ ಅಮೃತೇಶ್ವರಿ ದೇಗುಲದ ಟ್ರಸ್ಟಿ ಸುಭಾಷ್ ಶೆಟ್ಟಿ ಗಿಳಿಯಾರು, ಪ್ರಗತಿಪರ ಕೃಷಿಕರಾದ ರವೀಂದ್ರ ಐತಾಳ್ ಪಾರಂಪಳ್ಳಿ, ಕಾಂಗ್ರೆಸ್ ಮುಖಂಡರಾದ ಗೋಪಾಲ್ ಬಂಗೇರ, ಗೋವಿಗಾಗಿ ನಾವು ತಂಡದ ವಸಂತ ಸುವರ್ಣ, ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕೋಟ ಅಮೃತೇಶ್ವರಿ ದೇಗುಲದ ಟ್ರಸ್ಟಿ ಚಂದ್ರ ಆಚಾರ್ ನಿರೂಪಿಸಿ, ವಂದಿಸಿದರು.