ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಜನ್ಮದಿನ ಆಚರಣೆ

| Published : Nov 27 2024, 01:02 AM IST

ಸಾರಾಂಶ

ಅನ್ನದಾತರಾದ ವೀರೇಂದ್ರ ಹೆಗ್ಡೆಯವರಿಗೆ ದೇವರು ಆರೋಗ್ಯ, ಆಯಸ್ಸು ಕೊಟ್ಟು ಕಾಪಾಡಲಿ ಹಾಗೂ ಯೋಜನೆ ಕಾರ್ಯಕರ್ತರಿಗೆ ಹಾಗೂ ಸಿಬ್ಬಂದಿಗೆ ಧರ್ಮಸ್ಥಳ ಸಂಘದ ಎಲ್ಲಾ ಸದಸ್ಯರಿಗೂ ದೇವರು ಆರೋಗ್ಯ ಆಯಸ್ಸನ್ನು ಕೊಟ್ಟು ಕಾಪಾಡಲಿ. ಹೀಗೆ ಸಮಾಜದಲ್ಲಿ ಒಳ್ಳೆಯ ರೀತಿಯ ಅಭಿವೃದ್ಧಿ ಕಾರ್ಯ ಮಾಡುವಂತಾಗಲಿ.

ಕನ್ನಡಪ್ರಭ ವಾರ್ತೆ ಹಲಗೂರು

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಪ್ರಯುಕ್ತ ಮತ್ತು ಕಡೇ ಕಾರ್ತಿಕ ಸೋಮವಾರದ ಪ್ರಯುಕ್ತ ಹಲಗೂರಿನ ಶ್ರೀರಾಮ ಮಂದಿರ ಮತ್ತು ಎಲ್ಲಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ತೊರೆಕಾಡನಹಳ್ಳಿ ವಲಯದ ಹಲಗೂರು ಗ್ರಾಮದಲ್ಲಿ ಧರ್ಮಸ್ಥಳ ಸಂಘದ ಶ್ರೀಅಣ್ಣಪ್ಪಸ್ವಾಮಿ ಒಕ್ಕೂಟದ ಅಧ್ಯಕ್ಷರಾದ ಶೋಭಾ ಅವರ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ದೀಪಗಳನ್ನು ಬೆಳಗಿಸಿ ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಲಾಯಿತು. ಅನ್ನದಾತರಾದ ವೀರೇಂದ್ರ ಹೆಗ್ಡೆಯವರಿಗೆ ದೇವರು ಆರೋಗ್ಯ, ಆಯಸ್ಸು ಕೊಟ್ಟು ಕಾಪಾಡಲಿ ಹಾಗೂ ಯೋಜನೆ ಕಾರ್ಯಕರ್ತರಿಗೆ ಹಾಗೂ ಸಿಬ್ಬಂದಿಗೆ ಧರ್ಮಸ್ಥಳ ಸಂಘದ ಎಲ್ಲಾ ಸದಸ್ಯರಿಗೂ ದೇವರು ಆರೋಗ್ಯ ಆಯಸ್ಸನ್ನು ಕೊಟ್ಟು ಕಾಪಾಡಲಿ. ಹೀಗೆ ಸಮಾಜದಲ್ಲಿ ಒಳ್ಳೆಯ ರೀತಿಯ ಅಭಿವೃದ್ಧಿ ಕಾರ್ಯ ಮಾಡುವಂತಾಗಲಿ ಎಂದು ಹಾರೈಸುತ್ತಾ ಭಗವಂತನಲ್ಲಿ ಪ್ರಾರ್ಥಿಸಿದರು.

ಈ ವೇಳೆ ಧರ್ಮಸ್ಥಳ ಸಂಘದ ಸದಸ್ಯೆ ಸುಶೀಲಮ್ಮ ಮಾತನಾಡಿ, ಡಾ.ವೀರೇಂದ್ರ ಹೆಗಡೆಯವರ ಜನ್ಮದಿನವನ್ನು ಇಂದು ನಾವು ಆಚರಿಸುತ್ತಿರುವುದು ತುಂಬಾ ಸಂತೋಷ ತಂದಿದೆ. ನಮ್ಮ ಮಹಿಳೆಯರ ಸಬಲೀಕರಣಕ್ಕಾಗಿ ಇನ್ನೂ ಹೆಚ್ಚಿನ ಯೋಜನೆಗಳನ್ನು ಜಾರಿಗೆ ತರಲಿ ಎಂದರು.

ನಮ್ಮ ಪೂಜ್ಯ ಗುರುಗಳಾದ ವೀರೇಂದ್ರಹೆಗ್ಗಡೆಯವರಿಗೆ ಹೆಚ್ಚಿನ ಆರೋಗ್ಯ ಮತ್ತು ಆಯಸ್ಸು ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಈ ವೇಳೆ ತೊರೆಕಾಡನಹಳ್ಳಿ ಮತ್ತು ವಳಗೆರೆದೊಡ್ಡಿ ಧರ್ಮಸ್ಥಳ ಸಂಸ್ಥೆ ಸಂಘಗಳು ಹಾಗೂ ಒಕ್ಕೂಟದ ಅಧ್ಯಕ್ಷೆ ಶೋಭಾ ಮತ್ತು ಮೋದಿ ರವಿ ಸೇರಿದಂತೆ ಧರ್ಮಸ್ಥಳ ಸಂಘ ಸದಸ್ಯರು ಇದ್ದರು.