ಹಣ್ಣು ಹಂಪಲು ವಿತರಸಿ ಮಾಜಿ ಸಚಿವ ಕೋಟೆ ಶಿವಣ್ಣ ಹುಟ್ಟುಹಬ್ಬ ಆಚರಣೆ

| Published : May 09 2024, 01:10 AM IST

ಹಣ್ಣು ಹಂಪಲು ವಿತರಸಿ ಮಾಜಿ ಸಚಿವ ಕೋಟೆ ಶಿವಣ್ಣ ಹುಟ್ಟುಹಬ್ಬ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿ ಬಳಗದಿಂದ ತಾಲೂಕಿನ ಉತ್ತುವಳ್ಳಿಯ ಆಶ್ರಯ ಸೇವಾ ಚಾರಿಟಬಲ್ ಟ್ರಸ್ಟ್‌ ನ ವೃದ್ಧ ಮತ್ತು ಅನಾಥಶ್ರಮದ ವೃದ್ದರಿಗೆ ಹಣ್ಣು -ಹಂಪಲು ವಿತರಿಸಲಾಯಿತು. ಅಭಿಮಾನಿ ಬಳಗದ ಮುಖಂಡ, ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಬಸವನಪುರ ರಾಜಶೇಖರ ಅವರ ನೇತೃತ್ವದಲ್ಲಿ ಹಣ್ಣು- ಹಂಪಲು ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಹುಟ್ಟು ಹಬ್ಬದ ಅಂಗವಾಗಿ ಅಭಿಮಾನಿ ಬಳಗದಿಂದ ತಾಲೂಕಿನ ಉತ್ತುವಳ್ಳಿಯ ಆಶ್ರಯ ಸೇವಾ ಚಾರಿಟಬಲ್ ಟ್ರಸ್ಟ್‌ ನ ವೃದ್ದ ಮತ್ತು ಅನಾಥಶ್ರಮದ ವೃದ್ದರಿಗೆ ಹಣ್ಣು -ಹಂಪಲು ವಿತರಿಸಲಾಯಿತು. ಅಭಿಮಾನಿ ಬಳಗದ ಮುಖಂಡ, ಜಿಲ್ಲಾ ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಬಸವನಪುರ ರಾಜಶೇಖರ ಅವರ ನೇತೃತ್ವದಲ್ಲಿ ಹಣ್ಣು- ಹಂಪಲು ವಿತರಿಸಲಾಯಿತು.

ಈ ವೇಳೆ ಬಸವನಪುರ ರಾಜಶೇಖರ ಮಾತನಾಡಿ, ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಅವರು ದಕ್ಷ, ಪ್ರಾಮಾಣಿಕ ರಾಜಕಾರಣಿಯಾಗಿ ಸುಮಾರು 40ಗಳಿಂದ ಸೇವೆ ಮಾಡಿಕೊಂಡು ಬಂದಿದ್ದಾರೆ ಅವರಿಗೆ ಶ್ರೀಮಹದೇಶ್ವರ, ಶ್ರೀಮಂಟೇಸ್ವಾಮಿ, ಸಿದ್ದಪ್ಪಾಜಿ, ಬಿಳಿಗಿರಂಗಸ್ವಾಮಿ, ಶ್ರೀಚಾಮರಾಜೇಶ್ವರಸ್ವಾಮಿ ಮುಂದಿನ ದಿನಗಳಲ್ಲಿ ಹೆಚ್ಚಿನ ಆಯಸ್ಸು, ಆರೋಗ್ಯ ಹಾಗೂ ಉನ್ನತ ರಾಜಕೀಯ ಸ್ಥಾನಮಾನ ಕರಣಿಸಲಿ ಎಂದು ಆಶಿಸಿದರು.ವೃದ್ದರೊಡನೆ ಕೋಟೆ ಎಂ.ಶಿವಣ್ಣ ಅವರ ಹುಟ್ಟುಹಬ್ಬ ಆಚರಣೆ ಮಾಡುವುದು ಒಂದು ವಿಶೇಷ, ಅರ್ಥ ಪೂರ್ಣ ವಾಗಿದೆ ಎಂದರು. ಈ ವೇಳೆ ಯರಗಂಬಳ್ಳಿ ಪರಶಿವಮೂರ್ತಿ, ಸಂತೇಮರಹಳ್ಳಿ ರಾಜು, ಮಾದಿಗ ಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಶಿವಕುಮಾರ್, ಕೆಸ್ತೂರುಮರಪ್ಪ, ವೀರಶೈವ ಮುಖಂಡ ರಾಜು, ಟ್ರಸ್ಟ್ ಅಧ್ಯಕ್ಷ ರಮೇಶ್ ಪ್ರಭು ಹಾಜರಿದ್ದರು.