ಹಂಚನಾಳದಲ್ಲಿ ಸಚಿವ ಎಂ.ಬಿ.ಪಾ ಜನ್ಮದಿನ ಆಚರಣೆ

| Published : Oct 11 2024, 11:49 PM IST

ಹಂಚನಾಳದಲ್ಲಿ ಸಚಿವ ಎಂ.ಬಿ.ಪಾ ಜನ್ಮದಿನ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ವಿಜಯಪುರ ತಾಲೂಕಿನ ಹಂಚನಾಳ ಪಿ.ಎಚ್-೧ರಲ್ಲಿ ಬೃಹತ್ ಮತ್ತು ಮದ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರ ೬೦ನೇ ಜನ್ಮದಿನವನ್ನು ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಆಚರಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ತಾಲೂಕಿನ ಹಂಚನಾಳ ಪಿ.ಎಚ್-೧ರಲ್ಲಿ ಬೃಹತ್ ಮತ್ತು ಮದ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರ ೬೦ನೇ ಜನ್ಮದಿನವನ್ನು ಗ್ರಾಮಸ್ಥರು ಹಾಗೂ ಕಾರ್ಯಕರ್ತರು ಆಚರಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಸಚಿವ ಎಂ.ಬಿ.ಪಾಟೀಲ ಅವರಿಗೆ ದೇವರು ಇನ್ನಷ್ಟು ಆಯಷ್ಯ, ಆರೋಗ್ಯ ಮತ್ತು ಅಧಿಕಾರವನ್ನು ನೀಡಲೆಂದು ಹಾರೈಸಿದರು. ಸಚಿವರಾದ ಎಂ.ಬಿ.ಪಾಟೀಲರು ನೀರಾವರಿ ಸಚಿವರಾದ ಸಮಯದಲ್ಲಿ ವಿಜಯಪುರ ಜಿಲ್ಲೆಗೆ ಪ್ರತಿಯೊಬ್ಬ ರೈತರ ಜಮೀನುಗಳಿಗೆ ಕಾಲುವೆ ತರುವ ಮೂಲಕ ಆಧುನಿಕ ಭಗೀರಥ ಎನಿಸಿಕೊಂಡವರು. ಅವರ ಅಧಿಕಾರಾವಧಿಯಲ್ಲಿ ಹಲವಾರು ಜನಪರ ಕೆಲಸಗಳಾಗಿದ್ದು, ಇವರು ಯಾವುದೇ ಜಾತಿ-ಮತ-ಪಂಥ ಎನ್ನದೇ ಎಲ್ಲರಿಗೂ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಹಗಲಿರುಳು ಸೇವೆಯನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ನಾಯಕರಾಗಿದ್ದಾರೆ ಎಂದರು.ಡಿ.ಕೆ.ಟ್ರಸ್ಟ್ ನಿರ್ದೇಶಕ ಅಶೋಕ ಹಂಚನಾಳ, ಚಂದು ರಾಠೋಡ, ಹರಿಸಿಂಗ್‌ ರಾಠೋಡ, ಸಕಾರಾಮ ರಾಠೋಡ, ರಾಮದಾಸ ಪೂಜಾರಿ, ಮಂಗಲ ರಾಠೋಡ, ಮೋಹನ ರಾಠೋಡ, ಭರತ ರಾಠೋಡ, ರಾಮಸಿಂಗ ರಾಠೋಡ, ಶೇಖ ಚವ್ಹಾಣ, ಬಾಬು ರಾಠೋಡ, ರಾಜಶೇಖರ ಕಾಸಬಾಗ ಮುಂತಾದವರು ಉಪಸ್ಥಿತರಿದ್ದರು.