ಜೂ.೪ರಂದು ನಾಲ್ವಡಿ ಜನ್ಮದಿನಾಚರಣೆ: ತಗ್ಗಹಳ್ಳಿ ವೆಂಕಟೇಶ್

| Published : May 23 2024, 01:06 AM IST

ಜೂ.೪ರಂದು ನಾಲ್ವಡಿ ಜನ್ಮದಿನಾಚರಣೆ: ತಗ್ಗಹಳ್ಳಿ ವೆಂಕಟೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಕೃಷ್ಣರಾಜ ಭೂಪ ಮನೆಮನೆಗೆ ದೀಪ ಎಂಬ ಅರ್ಥಪೂರ್ಣ ಬಿರುದು ಪಡೆದಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಸೇವೆ ಸಲ್ಲಿಸದ ಕ್ಷೇತ್ರವೇ ಇಲ್ಲ ಎನ್ನಬಹುದು. ತಮ್ಮ ಆಡಳಿತ ವ್ಯಾಪ್ತಿಯಲ್ಲಿನ ಎಲ್ಲ ಕಡೆಗಳಲ್ಲೂ ಜನಕಲ್ಯಾಣಕ್ಕೆ ಪೂರಕವಾದ ಎಲ್ಲ ಕೆಲಸಗಳನ್ನೂ ಮಾಡಿರುವ ಒಡೆಯರ್ ಅವರು ದೇಶಕ್ಕೆ ನೀಡಿರುವ ಕೊಡುಗೆ ಅಪಾರವಾದುದು. ಅರಮನೆಯ ಚಿನ್ನಾಭರಣವನ್ನು ಮಾರಿ ಕನ್ನಂಬಾಡಿ ಅಣೆಕಟ್ಟೆ ಕಟ್ಟುವ ಮೂಲಕ ಮಂಡ್ಯ ಜಿಲ್ಲೆಯನ್ನು ಶ್ರೀಮಂತಗೊಳಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯ ಅನ್ನದಾತ, ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ದಿನವಾದ ಜೂ.೪ರಂದು ೧೪೦ನೇ ಜನ್ಮ ದಿನಾಚರಣೆ ಮಂಡ್ಯ ಜಿಲ್ಲಾದ್ಯಂತ ಸಾರ್ವತ್ರಿಕವಾಗಿ ಆಚರಣೆ ಮಾಡಬೇಕೆಂದು ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಟ್ರಸ್ಟ್ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್ ಮನವಿ ಮಾಡಿದರು.

ಕೃಷ್ಣರಾಜ ಭೂಪ ಮನೆಮನೆಗೆ ದೀಪ ಎಂಬ ಅರ್ಥಪೂರ್ಣ ಬಿರುದು ಪಡೆದಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಸೇವೆ ಸಲ್ಲಿಸದ ಕ್ಷೇತ್ರವೇ ಇಲ್ಲ ಎನ್ನಬಹುದು. ತಮ್ಮ ಆಡಳಿತ ವ್ಯಾಪ್ತಿಯಲ್ಲಿನ ಎಲ್ಲ ಕಡೆಗಳಲ್ಲೂ ಜನಕಲ್ಯಾಣಕ್ಕೆ ಪೂರಕವಾದ ಎಲ್ಲ ಕೆಲಸಗಳನ್ನೂ ಮಾಡಿರುವ ಒಡೆಯರ್ ಅವರು ದೇಶಕ್ಕೆ ನೀಡಿರುವ ಕೊಡುಗೆ ಅಪಾರವಾದುದು. ಅರಮನೆಯ ಚಿನ್ನಾಭರಣವನ್ನು ಮಾರಿ ಕನ್ನಂಬಾಡಿ ಅಣೆಕಟ್ಟೆ ಕಟ್ಟುವ ಮೂಲಕ ಮಂಡ್ಯ ಜಿಲ್ಲೆಯನ್ನು ಶ್ರೀಮಂತಗೊಳಿಸಿದರು. ಅವರ ಸೇವೆ ಸಾವಿರಾರು ವರ್ಷಕಳೆದರೂ ಮರೆಯದಂತಹ ಸಾಧನೆಯೇ ಸರಿ ಎಂದು ಸುದ್ದಿಗೋಷ್ಠಿಯಲ್ಲಿ ಬಣ್ಣಿಸಿದರು.

ಇಂತಹ ರಾಜರ್ಷಿಯ ೧೪೦ನೇ ಜನ್ಮ ದಿನವನ್ನು ಎಲ್ಲಾ ಸರ್ಕಾರಿ ಕಚೇರಿಗಳು, ಖಾಸಗಿ ಸಂಘ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳು ಸೇರಿದಂತೆ ನಗರ ಗ್ರಾಮೀಣ ಪ್ರದೇಶಗಳಲ್ಲಿನ ಎಲ್ಲ ಸಂಸ್ಥೆಗಳಲ್ಲೂ ನಾಲ್ವಡಿಯವರ ಜನ್ಮ ದಿನಾಚರಣೆಯನ್ನು ಸಡಗರ ಸಂಭ್ರದಿಂದ ಆಚರಿಸುವುದು ನಮ್ಮೆಲ್ಲರ ಆದ್ಯಕರ್ತವ್ಯ ಎಂದರು.

ಮಂಡ್ಯ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳೆತ್ತರದ ಪ್ರತಿಮೆ ನಿರ್ಮಾಣ ಮಾಡುವ ಸಂಬಂಧ ಈಗಾಗಲೇ ಜಿಲ್ಲಾಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಸೂಕ್ತ ಸ್ಥಳ ಗುರುತಿಸಿ ಪ್ರತಿಮೆ ನಿರ್ಮಾಣಗೊಸುವುದಾಗಿ ಜಿಲ್ಲಾಡಳಿತ ತಿಳಿಸಿದೆ. ಆದಷ್ಟು ಶೀಘ್ರ ಪ್ರತಿಮೆ ನಿರ್ಮಾಣವಾಗಬೇಕೆಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಟ್ರಸ್ಟ್‌ನ ಪದಾಧಿಕಾರಿಗಳಾದ ಎಂ.ಸಿ.ಲಂಕೇಶ್, ಸಚಿನ್, ಮಂಜು ತಗ್ಗಹಳ್ಳಿ, ಶಿವಣ್ಣ, ಉಮೇಶ್ ಇತರರಿದ್ದರು.