ಜಯಂತಿಗಳು ಸರ್ವರೂ ಸೇರಿ ಆಚರಿಸುವಂತಾಗಬೇಕು

| Published : Oct 08 2025, 01:01 AM IST

ಸಾರಾಂಶ

ಮಹಾಋಷಿ ವಾಲ್ಮೀಕಿಯವರು ರಚಿಸಿದ ರಾಮಾಯಣ ಮಹಾಕಾವ್ಯ ಇಡೀ ಜಗತ್ತಿಗೆ ದಾರಿ ದೀಪದಂತಿದೆ. ರಾಮಾಯಣ ಕಾವ್ಯದಲ್ಲಿ ಬರುವ ಪಾತ್ರಗಳು ಆದರ್ಶನೀಯ ಸಂದೇಶಗಳನ್ನು ನೀಡುತ್ತದೆ. ವ್ಯಕ್ತಿಯೋರ್ವನ ಜೀವನ ಸುಧಾರಣೆಯ ಮಾರ್ಗದರ್ಶನೀಯ ವಿಚಾರಗಳನ್ನು ರಾಮಾಯಣ ತಿಳಿಸಿಕೊಡುತ್ತದೆ.

ಸಿರುಗುಪ್ಪ: ಮಹನೀಯರ ಚಿಂತನೆಗಳು, ಆದರ್ಶನೀಯ ವಿಚಾರಗಳು ಜನಸಮುದಾಯಕ್ಕೆ ತಲುಪಿಸಲು ಜಯಂತಿ ಆಚರಣೆಗಳನ್ನು ಸರ್ವರಿಗೂ ಸೇರಿ ಆಚರಿಸುವಂತಾಗಬೇಕು ಎಂದು ವಾಲ್ಮೀಕಿ ವಿದ್ಯಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಬಿ.ಎಂ. ಸತೀಶ್ ಹೇಳಿದರು.

ನಗರದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ತಾಲೂಕು ಆಡಳಿತ, ತಾಪಂ, ನಗರಸಭೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಜರುಗಿದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಮಹಾಋಷಿ ವಾಲ್ಮೀಕಿಯವರು ರಚಿಸಿದ ರಾಮಾಯಣ ಮಹಾಕಾವ್ಯ ಇಡೀ ಜಗತ್ತಿಗೆ ದಾರಿ ದೀಪದಂತಿದೆ. ರಾಮಾಯಣ ಕಾವ್ಯದಲ್ಲಿ ಬರುವ ಪಾತ್ರಗಳು ಆದರ್ಶನೀಯ ಸಂದೇಶಗಳನ್ನು ನೀಡುತ್ತದೆ. ವ್ಯಕ್ತಿಯೋರ್ವನ ಜೀವನ ಸುಧಾರಣೆಯ ಮಾರ್ಗದರ್ಶನೀಯ ವಿಚಾರಗಳನ್ನು ರಾಮಾಯಣ ತಿಳಿಸಿಕೊಡುತ್ತದೆ ಎಂದರು.

ಕನ್ನಡ ಉಪನ್ಯಾಸಕ ಡಾ. ಆಂಜನೇಯ ಉರ್ತಾಳ್ ಅವರು ಮಹರ್ಷಿ ವಾಲ್ಮೀಕಿ ಅವರ ಜೀವನ ಮತ್ತು ಸಾಧನೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ತಹಸೀಲ್ದಾರ್ ಗೌಸಿಯ ಬೇಗಂ, ತಾಪಂ ಇಒ ಪವನ್ ಕುಮಾರ್ ಎಸ್. ದಂಡಪ್ಪನವರ್, ನಗರಸಭೆ ಅಧ್ಯಕ್ಷೆ ರೇಣುಕಮ್ಮ, ಉಪಾಧ್ಯಕ್ಷೆ ಯಶೋಧಾ ಮೂರ್ತಿ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಅಧ್ಯಕ್ಷ ಟಿ.ನರಸಿಂಹ ನಾಯಕ್, ಉಪಾಧ್ಯಕ್ಷ ಎಚ್.ಬಿ. ಈರಣ್ಣ, ಖಜಾಂಚಿ ಎಸ್. ನರೇಂದ್ರ ಸಿಂಹ, ಗೌರವಾಧ್ಯಕ್ಷ ರಾರಾವಿ ಯಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಗಾದಿಲಿಂಗಪ್ಪ, ಸಂಘಟನಾ ಕಾರ್ಯದರ್ಶಿ ಟೋವಿ ಯಲ್ಲಪ್ಪ ಸೇರಿದಂತೆ ಹಲವರಿದ್ದರು.

ವಾಲ್ಮೀಕಿ ಜಯಂತಿ ಅಂಗವಾಗಿ ನಗರದಲ್ಲಿ ಭಾವಚಿತ್ರ ಮೆರವಣಿಗೆ ನಡೆಯಿತು. ತಾಲೂಕು ಮೈದಾನದಿಂದ ಆರಂಭವಾದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪ ತಲುಪಿತು.