ಪುರಸಭೆಯಲ್ಲಿ ಮುಖ್ಯಾಧಿಕಾರಿ ಜಿ.ಪ್ರಕಾಶ್ ಅಧ್ಯಕ್ಷತೆ
ಕನ್ನಡಪ್ರಭ ವಾರ್ತೆ, ಬೀರೂರುಪುರಸಭೆಯ ವಿವಿಧ ವಾರ್ಷಿಕ ಬಾಬ್ತು ಗಳ 3ನೇ ಬಹಿರಂಗ ಹರಾಜು ಶುಕ್ರವಾರ ಪುರಸಭೆ ಸಭಾಂಗಣದಲ್ಲಿ ಮುಖ್ಯಾಧಿಕಾರಿ ಜಿ.ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆಯಿತು.ವಾರದ ಸಂತೆಯಲ್ಲಿ ಸುಂಕ ವಸೂಲಿ ಮಾಡುವ ಹರಾಜಿನಲ್ಲಿ ಕಡೂರಿನ ನಾಗರಾಜ್ ₹2.60 ಲಕ್ಷಕ್ಕೆ ಬಿಡ್ ಕೂಗಿದರು. ನಂತರ ಸಂತೆ ಮೈದಾನದ 3 ಮಾಂಸದ ಮಳಿಗೆಗಳಲ್ಲಿ ಮಾಂಸ ಮಾರಾಟದ ಹರಾಜಿನಲ್ಲಿ ಜಿಯಾವುಲ್ಲಾ ಮತ್ತು ಸುಬೀರ್ ಅಹಮ್ಮದ್ ಪಾಲ್ಗೊಂಡು ಜಿಯಾವುಲ್ಲಾ ₹2.51ಲಕ್ಷಕ್ಕೆ ಬಿಡ್ ಕೂಗಿದರು. ಪುರಸಭಾ ಖಾಸಗಿ ಬಸ್ ನಿಲ್ದಾಣದಲ್ಲಿ ದಿನವಹಿ ನೆಲ ಬಾಡಿಗೆ ವಸೂಲಿ ಹರಾಜಿನಲ್ಲಿ ಶಶಿಧರ್ ಮತ್ತು ವರದರಾಜ್ ಪಾಲ್ಗೊಂಡು ಶಶಿಧರ್ ₹44 ಸಾವಿರಕ್ಕೆ ಬಿಡ್ ಕೂಗಿದರು.ಉಪ ವಿಭಾಗಾಧಿಕಾರಿಗೆ ಬಿಟ್ಟದ್ದು: ಹರಾಜು ಪ್ರಕ್ರಿಯೆಯಲ್ಲಿ ಬಿಡ್ ದಾರರು ತಮ್ಮ ನೋವು ತಮಗಾದ ನಷ್ಟದ ಬಗ್ಗೆ ಹೇಳಿ ಕಡಿಮೆ ಬೆಲೆಗೆ ಬಿಡ್ ಕೂಗಿದ್ದಾರೆ. ಆದರೆ ಈ ವಿಷಯ ಪುರಸಭೆ ಆಡಳಿತಾಧಿಕಾರಿಗಳ ಗಮನಕ್ಕೆ ತಂದು ಅವರ ಅನಿಸಿಕೆ ಪಡೆದು ಫೈನಲ್ ಮಾಡಲಾ ಗುವುದು ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್ ತಿಳಿಸಿದರು.ಹರಾಜಿನಲ್ಲಿ ಪಾಲ್ಗೊಂಡಿದ್ದ ಕಡೂರಿನ ನಾಗರಾಜ್ ಮಾತನಾಡಿ, ಈ ಹಿಂದೆ ನಾನೇ ಸಂತೆ ಸುಂಕ ವಸೂಲಾತಿ₹3.80ಲಕ್ಷಕ್ಕೆ ಪಡೆದಿದ್ದೆ, ಆದರೆ ಇಂದು ಪ್ರತಿ ಮನೆ ಬಾಗಿಲಿಗೆ ತರಕಾರಿ ಮತ್ತಿತರ ಸಾಮಾನುಗಳು ಹೋಗುವುದರಿಂದ ಸಂತೆ ನಡೆಸುವವರೇ ಕಡಿಮೆ. ಇದರಿಂದ ನನಗೆ ನಷ್ಠವಾಯಿತು. ಪುರಸಭೆ ಇದರ ಜೊತೆ ಜಿಎಸ್ಟಿ ಸೇರಿಸುತ್ತಾರೆ ಹಾಗಾಗಿ ಹರಾಜು ದುಬಾರಿಯಾಗುತ್ತಿದೆ. ಪುರಸಭೆ ಆಡಳಿತಾಧಿಕಾರಿ ಇದನ್ನು ಮನಗಂಡು ಇದೇ ನಂಬಿ ಜೀವನ ಸಾಗಿಸುವವರ ಕಡೆಗೂ ಗಮನ ಹರಿಸಬೇಕು ಎಂದರು.ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ವೈ.ಎಂ.ಲಕ್ಷ್ಮಣ್, ಪರಿಸರ ಅಭಿಯಂತರ ನೂರುದ್ದೀನ್, ಪ್ರದೀಪ್, ಲಿಂಗರಾಜು, ಗಿರಿರಾಜ್, ಆಶ್ರಯ ಕಮಿಟಿ ಸದಸ್ಯರಾದ ಬಿ.ಟಿ.ಚಂದ್ರಶೇಖರ್, ಮುಬಾರಕ್ ಮತ್ತಿತರರು ಇದ್ದರು.27 ಬೀರೂರು 3ಬೀರೂರಿನ ಪುರಸಭೆ ಸಭಾಂಗಣದಲ್ಲಿ ಪುರಸಭೆ ವಿವಿಧ ವಾರ್ಷಿಕ ಬಾಬ್ತುಗಳ 3ನೇ ಬಹಿರಂಗ ಹರಾಜು ಶುಕ್ರವಾರ ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆಯಿತು.