ಸಾರಾಂಶ
47 ಹುದ್ದೆಗಳು ಖಾಲಿ। ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬ । ಜಿಲ್ಲಾಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಬಗೆಹರಿಸಲಿ.
ಬೀರೂರು ಎನ್ .ಗಿರೀಶ್.ಕನ್ನಡಪ್ರಭ ವಾರ್ತೆ, ಬೀರೂರು:ಪಟ್ಟಣದ ಬೀರೂರು ಪುರಸಭೆಯಲ್ಲಿ ಸಿಬ್ಬಂದಿ ಕೊರತೆಯಿಂದ ಕೆಲಸ ಕಾರ್ಯ ವಿಳಂಬವಾಗಿರುವುದು ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿದೆ. ಜಿಲ್ಲೆಯ ಪ್ರಮುಖ ಹೋಬಳಿ ಕೇಂದ್ರವಾದ ಈ ಭಾಗಕ್ಕೆ ನೂರಾರು ಹಳ್ಳಿಗಳ ರೈತಾಪಿ ವರ್ಗಕ್ಕೆ ನೆರವಾಗುವ ಪ್ರಮುಖ ಸರ್ಕಾರಿ ಕಚೇರಿಗಳಲ್ಲಿ ಇನ್ನೂ ಹಲವು ದಶಕಗಳ ಹಿಂದಿನ ಪದ್ಧತಿಯಲ್ಲೆ ಕಾರ್ಯನಿರ್ವಹಿಸುತ್ತಿರುವುದು ಸೋಜಿಗ.23 ವಾರ್ಡ್ಗಗಳನ್ನು ಹೊಂದಿರುವ ಪುರಸಭೆ ಪಟ್ಟಣದ 27ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಗೆ ಸೌಲಭ್ಯ ಕಲ್ಪಿಸಬೇಕಿದ್ದು, ಸಿಬ್ಬಂದಿ ಕೊರತೆಯಿಂದ ನಲುಗಿ ವಾಡ್ ಗಳ ಸ್ವಚ್ಛತೆ, ಇತರೆ ಕೆಲಸ ಕಾರ್ಯಕ್ಕೆ ಬರುವ ಪಟ್ಟಣದ ನಾಗರಿಕರು ಹಗಲೆಲ್ಲಾ ಕೆಲಸ ಕಾರ್ಯ ಬಿಟ್ಟು ಪುರಸಭೆಗೆ ಅಲೆಯುವ ಪರಿಸ್ಥಿತಿ ಇದೆ.ಸದ್ಯ ಪುರಸಭೆಗೆ ಪೌರಾಡಳಿತ 94 ಹುದ್ದೆಗಳನ್ನು ನೀಡಿದ್ದರೂ ಪ್ರಥಮ, ದ್ವಿತೀಯ ದರ್ಜೆ ಸಹಾಯಕರು, ಡಿಗ್ರೂಪ್ ಹಾಗೂ 27 ಜನ ಸರ್ಕಾರಿ ನೌಕರರು ಸೇರಿ ಒಟ್ಟು ಕೇವಲ 47ಜನ ಕಾರ್ಯನಿರ್ವಹಿಸುತ್ತಿದ್ದಾರೆ.
ಉಳಿದ ಹುದ್ದೆಗಳು ಖಾಲಿ ಇದ್ದು ಅದರಲ್ಲೂ ಕಚೇರಿ ಕೆಲಸಕ್ಕೆ ಅಗತ್ಯವಾಗಿ ಬೇಕಿರುವ ಕಡೆ 27ಮಂದಿ ಸಿಬ್ಬಂದಿ ಮಾತ್ರ ಇದ್ದಾರೆ. 20 ಮಂದಿ ಪೌರಕಾರ್ಮಿಕರನ್ನು ಮಾತ್ರ ಗುತ್ತಿಗೆ ಆಧಾರದಲ್ಲಿ ತೆಗೆದುಕೊಂಡಿದ್ದಾರೆ. ಪ್ರಮುಖವಾಗಿ ಮುಖ್ಯಾಧಿಕಾರಿಯೇ ಇಲ್ಲದ ಪರಿಣಾಮ ವ್ಯವಸ್ಥಾಪಕರೇ ಪ್ರಭಾರಿ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಂದಾಯ ಅಧಿಕಾರಿ ಅಜ್ಜಂಪುರದ ಪಟ್ಟಣ ಪಂಚಾಯ್ತಿಯಲ್ಲಿ ನಿಯೋಜನೆ ಪಡೆದಿದ್ದಾರೆ. ಇನ್ನು ಕಿರಿಯ ಆರೋಗ್ಯ ನಿರೀಕ್ಷಕರಿಲ್ಲದ ಪರಿಣಾಮ ಹಿರಿಯ ಆರೋಗ್ಯ ನೀರೀಕ್ಷಕರ ಮೇಲೆ ಸ್ವಚ್ಛತೆ ಅವಲಂಬಿತ ವಾಗಿದೆ. ಉಳಿದಂತೆ 3 ಎಸ್.ಡಿ.ಎ ಹುದ್ದೆಗಳಿದ್ದು ಇತ್ತೀಚೆಗೆ ವಿಶ್ವನಾಥ್ ಎನ್ನುವವರ ರಾಜಿನಾಮೆ ನೀಡಿರುವುದರಿಂದ 2 ಹುದ್ದೆಗಳು ಖಾಲಿ ಇವೆ. ಇರುವ ಒಬ್ಬರೇ ಕೆಲಸ ನಿಭಾಯಿಸುವಂತಹ ಸ್ಥಿತಿ ಇದೆ.ಉಳಿದಂತೆ 47ಜನ ಪೌರಕಾರ್ಮಿಕರ ಹುದ್ದೆಗೆ 27 ಜನ ಸಿಬ್ಬಂದಿ ಇದ್ದು, ಇನ್ನು 20 ಖಾಲಿ ಇವೆ. 23 ವಾರ್ಡಗಳಿಗೆ 6 ಜನ ನೀರು ಗಂಟಿಗಳ ಹುದ್ದೆ ಗಳಿದ್ದು ,ಅದರಲ್ಲಿ 3ಜನ ಅಂದರೆ ಟಪಾಲು , ರೆಕಾರ್ಡ ಕೊಠಡಿ, ಮತ್ತಿತರ ಹುದ್ದೆಗಳಿಗೆ ನೀರುಗಂಟಿಗಳೇ ಕೆಲಸ ಮಾಡುವ ಪರಿಸ್ಥಿತಿ ಇದೆ. ಹುದ್ದೆಗಳೆಲ್ಲಾ ಖಾಲಿ ಇದ್ದು ಅಭಿವೃದ್ಧಿ ಹಾಗೂ ಸಮಸ್ಯೆಗಳ ಪರಿಹಾರ ಮರೀಚಿಕೆಯಾಗಿದೆ.
ಕಮ್ಯೂನಿಟಿ ಆಫೀಸರ್ , ಲೆಕ್ಕಿಗ, ಕಿರಿಯ ಅಭಿಯಂತರ, ಪ್ರಥಮ, ದ್ವಿತೀಯ ದರ್ಜೆ ಸಹಾಯಕ, ಶೀಘ್ರ ಲಿಪಿಗಾರ, ನೀರು ಘಂಟಿ , ಬಿಲ್ ಕಲೆಕ್ಟರ್, ಸೇರಿದಂತೆ ಖಾಲಿ ಹುದ್ದೆಗಳ ಪಟ್ಟಿ ಬೆಳೆದಿದ್ದು ನಾಗರಿಕರಿಗೆ ಪುರಸಭೆ ಸಮರ್ಪಕ ಸೌಲಭ್ಯ ಕಲ್ಪಿಸುವಲ್ಲಿ ತೋಡಕುಂಟಾಗಿದೆ. ಪೌರಾಡಳಿತ ನಿರ್ದೇಶನಾಲಯ ಮತ್ತು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ. ಇದು ಆಡಳಿತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು ಸಿಬ್ಬಂದಿ ಕೊರತೆಯಿಂದ ಶೀಘ್ರವಾಗಿ ಜನರಿಗೆ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳಲಾಗುತ್ತಿಲ್ಲ. ಈ ಸಮಸ್ಯೆಗೆ ಗುತ್ತಿಗೆ ಆಧಾರದಲ್ಲಿ ಕೆಲವು ನೌಕರರನ್ನು ನೇಮಿಸಿಕೊಂಡು ಆದಷ್ಟು ಶೀಘ್ರ ಕಡತ ವಿಲೆವಾರಿ ಮಾಡಲು ಕ್ರಮಕೈಗೊಂಡಿದ್ದೇವೆ, ಸ್ವಚ್ಛತೆಗೂ ಕೆಲವರನ್ನು ನೇಮಿಸಿಕೊಂಡಿದ್ದೇವೆ ಎಂದು ತಿಳಿಸಿ ಪುರಸಭೆಗೆ ನೇಮಕಾತಿ ನಡೆದಲ್ಲಿ ಸಮಸ್ಯೆಗೆ ಪರಿಹಾರ ದೊರಕಲಿದೆ ಎಂದು ಪ್ರಭಾರ ಮುಖ್ಯಾಧಿಕಾರಿ ಜಿ.ಪ್ರಕಾಶ್ ಹೇಳಿದ್ದಾರೆ.ನಾಗರಿಕ ಜಯಣ್ಣ ಪತ್ರಿಕೆಯೊಂದಿಗೆ ಮಾತನಾಡಿ, ತಮ್ಮ ಸಣ್ಣ ಕಾರ್ಯಗಳಿಗೂ ಇಲ್ಲಿಗೆ ಹಲವಾರು ಬಾರಿ ಬಂದು ಎಡತಾಕಬೇಕಿದೆ. ಹೀಗಾಗಿ ಪುರ ಸಭೆಯಲ್ಲಿ ಅಲೆಯುವುದೆ ಕೆಲಸವಾಗಿದೆ. ಇನ್ನಾದರೂ ಪುರಸಭೆ ಮುಖ್ಯಾಧಿಕಾರಿ ಹಾಗೂ ಸದಸ್ಯರು ನಮ್ಮ ಕೆಲಸಗಳು ತ್ವರಿತಗತಿಯಲ್ಲಿ ಮಾಡಿಕೊಡಲು ಹೆಚ್ಚು ಕಾಳಜಿ ವಹಿಸಬೇಕೆಂದು ತಿಳಿಸಿದರು. ಸ್ಥಳೀಯ ಪ್ರಸಾದ್ ಮಾತನಾಡಿ, ಪುರಸಭೆಗೆ ಇಸ್ವತ್ತು ನೀಡುವಂತೆ ಕಳೆದ ಒಂದು ವರ್ಷದಿಂದ ಅಲೆದಾಡುತ್ತಿದ್ದೇನೆ. ಎಲ್ಲಾ ದಾಖಲೆ ನೀಡಿದರು ಸಹ ಅಧಿಕಾರಿಗಳು ಇಲ್ಲಸಲ್ಲದ ಸಬೂಬು ಹೇಳಿ ಇನ್ನು ಖಾತೆಯಾಗಿಲ್ಲ. ಈ ಸಂಬಂದ ಪುರಸಭೆ ಪಿಡಿಯವರ ಗಮನಕ್ಕೆ ತಂದರೂ ಸಹ ಕ್ಯಾರೆ ಎನ್ನುತ್ತಿಲ್ಲ ಎನ್ನುತ್ತಾರೆ. ಸರ್ಕಾರ ಸ್ಥಳೀಯ ಆಡಳಿತ ಪಂಚಾಯತ್ ರಾಜ್ ವ್ಯವಸ್ಥೆ ಬಲಪಡಿಸುವಲ್ಲಿ ಹೆಚ್ಚು ಕಾಳಜಿ ವಹಿಸದಿದ್ದರೇ ಗ್ರಾಮೀಣ ಆಡಳಿತದ ಸರ್ಕಾರದ ಕನಸಿಗೆ ಯಾವುದೇ ಅರ್ಥವಿಲ್ಲ. ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ಸರ್ಕಾರ ಕ್ರಮಕೈಗೊಳ್ಳಲಿ, ಸಿಬ್ಬಂದಿ ಕೊರತೆ ನೀಗಿಸಲಿ. ಜೊತೆಗೆ ಜಿಲ್ಲಾಧಿಕಾರಿಗಳು ಸಂಬಂದಪಟ್ಟ ಇಲಾಖೆ ಅಧಿಕಾರಿ ಖುದ್ದು ಭೇಟಿ ನೀಡಿ ಸಮಸ್ಯೆ ಬಗೆಹರಿಸಲಿ ಎಂಬುದು ಸಾರ್ವಜನಿಕರ ಆಶಯ. ಕಳಪೆ ಕಾಮಗಾರಿಗೆ ಮೇಲ್ಚಾವಣಿ ಕುಸಿತ:ಕಳೆದ 2 ವರ್ಷಗಳ ಹಿಂದೆ 3ಲಕ್ಷ ರು. ವ್ಯಯಿಸಿ ಪುರಸಭೆ ಅಂದ ಚೆಂದ ಹೆಚ್ಚಾಗಲು ಪುರಸಭೆ ಕಚೇರಿಗೆ ಫಾಲ್ಸ್ ಸೀಲಿಂಗ್ ಅಳವಡಿಕೆ ಮಾಡ ಲಾಗಿತ್ತು, ಆದರೆ ಹೆಂಚುಗಳು ಬಿರುಕು ಬಿಟ್ಟು ಕೆಲವು ಭಾಗದ ಸೀಲಿಂಗ ಬಿದ್ದು ಹೋಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.17 ಬೀರೂರು 1ಬೀರೂರು ಪುರಸಭೆ17 ಬೀರೂರು 2ಬೀರೂರು ಪುರಸಭೆಗೆ ಕಳೆದ 2ವರ್ಷದಿಂದಷ್ಟೆ ಅಳವಡಿಸಿದ್ದ ಪಾಲ್ಸ್ ಸೀಲಿಂಗ್ ಬಿದ್ದು ಹೋಗಿರುವುದು.