ಸಾರಾಂಶ
ಜಿಎಂ ವಿಶ್ವ ವಿದ್ಯಾನಿಲಯದಲ್ಲಿ ಭಾರತೀಯ ಮಾನಕ ಬ್ಯೂರೋ ಸಹಯೋಗದಲ್ಲಿ ಸ್ಥಾಪಿತ ಸ್ಟ್ಯಾಂಡರ್ಡ್‌ಗಳ ಕ್ಲಬ್‌ಗಳ ಉದ್ಘಾಟನೆ ಹಾಗೂ ಪ್ರಾಜೆಕ್ಟ್‌ಗಳ ಪ್ರದರ್ಶನ ಮೇ 22ರಂದು ನಗರದ ಜಿಎಂಐಟಿ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ ಎಂದು ವಿಭಾಗದ ಸಂಶೋಧನಾ ಡೀನ್ ಡಾ. ಕೆ.ಎನ್. ಭರತ್ ಹೇಳಿದ್ದಾರೆ.
ದಾವಣಗೆರೆ: ಜಿಎಂ ವಿಶ್ವ ವಿದ್ಯಾನಿಲಯದಲ್ಲಿ ಭಾರತೀಯ ಮಾನಕ ಬ್ಯೂರೋ ಸಹಯೋಗದಲ್ಲಿ ಸ್ಥಾಪಿತ ಸ್ಟ್ಯಾಂಡರ್ಡ್‌ಗಳ ಕ್ಲಬ್‌ಗಳ ಉದ್ಘಾಟನೆ ಹಾಗೂ ಪ್ರಾಜೆಕ್ಟ್‌ಗಳ ಪ್ರದರ್ಶನ ಮೇ 22ರಂದು ನಗರದ ಜಿಎಂಐಟಿ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ ಎಂದು ವಿಭಾಗದ ಸಂಶೋಧನಾ ಡೀನ್ ಡಾ. ಕೆ.ಎನ್. ಭರತ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 10.30ಕ್ಕೆ ಸಮಾರಂಭ ಉದ್ಘಾಟನೆಗೊಳ್ಳಲಿದೆ. ಜಿಎಂ ವಿವಿ ಕುಲಪತಿ ಡಾ. ಎಸ್.ಆರ್. ಶಂಕಪಾಲ ಅಧ್ಯಕ್ಷತೆಯಲ್ಲಿ ಭಾರತೀಯ ಮಾನಕ ಬ್ಯೂರೋದ ವಿಜ್ಞಾನಿ ಹಾಗೂ ಉಪ ನಿರ್ದೇಶಕ ಅಶುತೋಷ ಅಗರವಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದರು.ಜಿಎಂಐಟಿ ಕಾಲೇಜು ಪ್ರಾಚಾರ್ಯ ಡಾ.ಎಂ.ಬಿ.ಸಂಜಯ ಪಾಂಡೆ, ಸಂಶೋಧನಾ ಡೀನ್ ಡಾ.ಕೆ.ಎನ್.ಭರತ್, ಬಿಐಎಸ್ ಕ್ಲಬ್‌ಗಳ ಮುಖ್ಯ ಸಂಯೋಜಕ ಡಾ.ಎಂ.ಜೆ. ಪ್ರದೀಪ ಭಾಗವಹಿಸುವರು. ಕಾಲೇಜಿನ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪ್ರಾಜೆಕ್ಟ್‌ಗಳನ್ನು ಪ್ರದರ್ಶಿಸಲಿದ್ದಾರೆ. ಬಿಐಎಸ್ ಕ್ಲಬ್‌ಗಳಡಿ ವಿದ್ಯಾರ್ಥಿಗಳಿಗೆ ಭಾರತೀಯ ಮಾನದಂಡಗಳ ಕುರಿತು ಅರಿವು ಮೂಡಿಸಲಾಗುವುದು ಎಂದು ಹೇಳಿದರು.
ಕಾಲೇಜಿನ ವೃತ್ತಿ ಸಲಹೆ ಮತ್ತು ಉದ್ಯೋಗ ವಿಭಾಗದ ನಿರ್ದೇಶಕ ತೇಜಸ್ವಿ ಕಟ್ಟಿಮನಿ, ಡಾ. ಎಂ.ಜೆ.ಪ್ರದೀಪ, ಡಾ.ಸ್ವರೂಪ್ ಇತರರು ಇದ್ದರು.- - -
-21ಕೆಡಿವಿಜಿ7: