ಸಾರಾಂಶ
ತಾಲೂಕಿನ ಎಲ್ಲಾ ಕಚೇರಿಗಳಲ್ಲೂ ಭ್ರಷ್ಟಾಚಾರ ಹೆಚ್ಚಾಗಿದೆ. ಇದಕ್ಕೆ ಮೂಲ ಕಾರಣಕರ್ತರಾದ ಶಾಸಕರೇ ನೇರವಾಗಿ ತಾಲೂಕಿನಲ್ಲಿ ಅಪಾರ ಆಸ್ತಿ ಮಾಡಬೇಕೆಂಬ ಉದ್ದೇಶವನ್ನು ಇಟ್ಟುಕೊಂಡು ತಾಲೂಕಿನ ಎಲ್ಲಾ ಕಚೇರಿಗಳಲ್ಲೂ ಕೂಡ ಸಾರ್ವಜನಿಕರ ಕೆಲಸ ಮಾಡಲು ಭ್ರಷ್ಚಾಚಾರದ ಹಣದ ಹೊಳೆಯೇ ಹರಿಯುತ್ತಿದೆ. ಇದನ್ನು ಪ್ರಶ್ನಿಸಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಇದಕ್ಕೆ ಮೂಲ ಕಾರಣ ಸ್ಥಳೀಯ ಶಾಸಕ ಸಿ. ಎನ್. ಬಾಲಕೃಷ್ಣ ಎಂದು ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಕುಮಾರ್ ಆರೋಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ಎಲ್ಲಾ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಇದಕ್ಕೆ ಮೂಲ ಕಾರಣ ಸ್ಥಳೀಯ ಶಾಸಕ ಸಿ. ಎನ್. ಬಾಲಕೃಷ್ಣ ಎಂದು ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಕುಮಾರ್ ಆರೋಪಿಸಿದ್ದಾರೆ.ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾಲೂಕಿನ ಎಲ್ಲಾ ಕಚೇರಿಗಳಲ್ಲೂ ಭ್ರಷ್ಟಾಚಾರ ಹೆಚ್ಚಾಗಿದೆ. ಇದಕ್ಕೆ ಮೂಲ ಕಾರಣಕರ್ತರಾದ ಶಾಸಕರೇ ನೇರವಾಗಿ ತಾಲೂಕಿನಲ್ಲಿ ಅಪಾರ ಆಸ್ತಿ ಮಾಡಬೇಕೆಂಬ ಉದ್ದೇಶವನ್ನು ಇಟ್ಟುಕೊಂಡು ತಾಲೂಕಿನ ಎಲ್ಲಾ ಕಚೇರಿಗಳಲ್ಲೂ ಕೂಡ ಸಾರ್ವಜನಿಕರ ಕೆಲಸ ಮಾಡಲು ಭ್ರಷ್ಚಾಚಾರದ ಹಣದ ಹೊಳೆಯೇ ಹರಿಯುತ್ತಿದೆ. ಇದನ್ನು ಪ್ರಶ್ನಿಸಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಪ್ರಶ್ನೆ ಮಾಡಲು ಹೋದಂತಹ ವ್ಯಕ್ತಿಗಳು ಶಾಸಕರ ಕೆಂಗಣ್ಣಿಗೆ ಗುರಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಇದ್ದಂತಹ ಶ್ರೀಕಂಠಯ್ಯನವರು ಡಾ. ನಂಜಪ್ಪನವರು ಹಾಗೂ ಗಂಗಣ್ಣನವರು ಇಂತಹ ಶಾಸಕರನ್ನು ನಾವು ಎಂದಿಗೂ ಕೂಡ ಮರೆಯಬಾರದು. ಆದರೆ ಈಗಿನ ಶಾಸಕರು ಬರೀ ಹಣ ಮಾಡುವ ಉದ್ದೇಶವನ್ನು ಇಟ್ಟುಕೊಂಡಿದ್ದಾರೆ. ತಾಲೂಕಿಗೆ ಯಾವುದೇ ಕೆಲಸ ಕಾರ್ಯಗಳು ಬಂದರೆ ಶಾಸಕರು ಮತ್ತು ರೇವಣ್ಣನವರ ಆಪ್ತ ಅಶ್ವಥ್ ಪಾತ್ರವೇ ಪ್ರಮುಖವಾಗಿದೆ.
ಇಡೀ ರಾಜ್ಯಾದ್ಯಂತ ಮನೆಮನೆಗೆ ಪೈಪುಗಳ ಮೂಲಕ ಗ್ಯಾಸ್ಲೈನ್ ನೀಡುವ ಯೋಜನೆಯನ್ನು ಕೇಂದ್ರ ಸರ್ಕಾರ ಮಾಡಿದೆ. ಆದರೆ ಸ್ಥಳೀಯ ಶಾಸಕರು ಪುರಸಭೆಯಲ್ಲಿ ಮನೆಮನೆಗೆ ಪೈಪ್‌ಲೈನ್ ಕಾಮಗಾರಿ ಬೇಕಿಲ್ಲ ಎಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಅಜೆಂಡಾವನ್ನು ಬರೆದು ಕೆಲಸದ ಸಹಿಯನ್ನು ಕೂಡ ಮಾಡಿದ್ದಾರೆ. ಏಕೆಂದರೆ ಸ್ಥಳೀಯ ಗ್ಯಾಸ್ ಏಜೆನ್ಸಿಯವರು ಮತ್ತು ಶಾಸಕರು ಇವರಿಬ್ಬರೂ ಷೇರುದಾರರಾಗಿ ಹಣ ಹೂಡಿಕೆ ಮಾಡಿರುವ ಹಿನ್ನೆಲೆ ಇಂದ ಗ್ಯಾಸ್ ಪೈಪ್‌ಲೈನ್ ಕಾಮಗಾರಿಯನ್ನು ಮಾಡಲು ಬಿಡುತ್ತಿಲ್ಲ ಎಂಬುದು ಆರೋಪವಾಗಿದೆ.ಪಟ್ಟಣದಲ್ಲಿ ಅನೇಕ ರಸ್ತೆಗಳು ಗುಂಡಿ ಬಿದ್ದಿದ್ದು ಈ ಗುಂಡಿಯನ್ನು ಮುಚ್ಚಲು ಸ್ಥಳೀಯ ಶಾಸಕರು ವಿಫಲರಾಗಿದ್ದಾರೆ. ಈ ಗುಂಡಿಯಿಂದ ಅನೇಕ ಸಾವು ನೋವುಗಳು ಹೆಚ್ಚಾಗಿದೆ. ಕೂಡಲೇ ಡಿಸೆಂಬರ್ ಒಂದರ ಒಳಗೆ ಈ ಸಮಸ್ಯೆಗಳನ್ನು ಬಗೆಹರಿಸದೆ ಹೋದಲ್ಲಿ ತಾಲೂಕು ಕಚೇರಿ ಮುಂಭಾಗದಲ್ಲಿ ಏಕಾಂಗಿ ಹೋರಾಟವನ್ನು ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.