ಬಿಜೆಪಿ ಮೈತ್ರಿಕೂಟದ ನಾಯಕತ್ವಕ್ಕೆ ಮನ್ನಣೆ: ಸಂಭ್ರಮಾಚರಣೆ

| Published : Nov 15 2025, 02:15 AM IST

ಬಿಜೆಪಿ ಮೈತ್ರಿಕೂಟದ ನಾಯಕತ್ವಕ್ಕೆ ಮನ್ನಣೆ: ಸಂಭ್ರಮಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಯಲ್ಲಾಪುರ ಮಂಡಳದಲ್ಲಿ ಪಟಾಕಿ ಸಿಡಿಸಿ, ಸಂಭ್ರಮಿಸಲಾಯಿತು.

ಯಲ್ಲಾಪುರ: ಬಿಜೆಪಿ ಮೈತ್ರಿಕೂಟದ ಸಮರ್ಥ ನಾಯಕತ್ವಕ್ಕೆ ಮನ್ನಣೆ ನೀಡಿದ ಮತದಾರ, ಇದೊಂದು ಅಭೂತಪೂರ್ವ ಜನಾದೇಶ. ಆ ನಿಟ್ಟಿನಲ್ಲಿ ಯಲ್ಲಾಪುರ ಮಂಡಳದಲ್ಲಿ ಪಟಾಕಿ ಸಿಡಿಸಿ, ಸಂಭ್ರಮಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ವಕ್ತಾರ ಹರಿಪ್ರಕಾಶ ಕೋಣೆಮನೆ, ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ, ಪ್ರಧಾನ ಕಾರ್ಯದರ್ಶಿ ರವಿ ಕೈಟ್ಕರ, ನಿಕಟಪೂರ್ವ ಅಧ್ಯಕ್ಷ ಜಿ.ಎನ್. ಗಾಂವ್ಕರ, ಜಿಲ್ಲಾ ಪಧಾಧಿಕಾರಿಗಳಾದ ರಾಮುನಾಯ್ಕ, ಬಾಬು ಬಾಂದೇಕರ, ಯುವಮೋರ್ಚಾ ಅಧ್ಯಕ್ಷ ರಜತ ಬದ್ದಿ, ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ವಿನೋದ ತಳೇಕರ, ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ರವಿ ದೇವಡಿಗ, ಪಕ್ಷದ ಪದಾಧಿಕಾರಿಗಳಾದ ಗಜಾನನ ನಾಯ್ಕ, ಶ್ರೀನಿವಾಸ ಗಾಂವ್ಕರ, ಜಗದೀಶ್ ಪೂಜಾರಿ , ತುಳಸಿದಾಸ ನಾಯ್ಕ, ಪ್ರಭಾಕರ ನಾಯ್ಕ, ನಾರಾಯಣ ನಾಯ್ಕ, ಮಂಜು ಅಂಬಿಗ, ಅಮೃತ ಬದ್ದಿ, ಕೇಶವ ಗಾಂವ್ಕರ, ವಿಶ್ವನಾಥ ಭಟ್ಟ ಮತ್ತು ಪ್ರಮುಖರು ಉಪಸ್ಥಿತರಿದ್ದರು.

ಬಿಹಾರ ಫಲಿತಾಂಶ ರಾಷ್ಟ್ರ ರಾಜಕಾರಣದ ದಿಕ್ಸೂಚಿ: ಕೋಣೆಮನೆ

ಬಿಹಾರ ಚುನಾವಣೆ ಫಲಿತಾಂಶ ಕೇವಲ ಒಂದು ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶವಲ್ಲ, ಅದು ರಾಷ್ಟ್ರ ರಾಜಕಾರಣದ ದಿಕ್ಸೂಚಿಯಾಗಿದೆ ರಾಜ್ಯ ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೆಮನೆ ಅಭಿಪ್ರಾಯಪಟ್ಟಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು, ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಾಗ ಮೌನ ವಹಿಸುವ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಸೋತಾಗ ಮತಯಂತ್ರದ ಮೇಲೆ ಆರೋಪ ಮಾಡುತ್ತಿದ್ದರು. ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಬಿಹಾರ ವೋಟ್ ಚೋರಿ ಎಂಬ ಹೊಸ ನಾಟಕ ಮಾಡಿ ಬಿಹಾರದ ಮತದಾರರ ದಿಕ್ಕು ತಪ್ಪಿಸುವ ಕುತಂತ್ರ ಮಾಡಿದ್ದರು. ಬಿಹಾರದ ಮತದಾರರು ಅಂತಿಮಾವಾಗಿ ಟೂಲ್ ಕಿಟ್ ನಿರ್ದೇಶಿತ ವೋಟ್ ಚೋರಿ ಅಪವಾದವನ್ನು ತಿರಸ್ಕರಿಸಿದ್ದಾರೆ. ಎಂದಿನಂತೆ ಸಮಾಜ ಮತ್ತು ದೇಶ ಒಡೆಯುವ ಕಾಂಗ್ರೆಸ್ ತಂತ್ರದ ಭಾಗವಾಗಿ ಬಿಹಾರದಲ್ಲಿ ಮುಸ್ಲಿಂ-ಯಾದವ ಭಾಯಿ ಭಾಯಿ ಎಂಬ ಕೀಳುಮಟ್ಟದ ಘೋಷಣೆಯನ್ನು ರಾಹುಲ್ ಮೊಳಗಿಸಿದ್ದರು. ಅಂತಿಮವಾಗಿ ರಾಹುಲ್ ಒಡೆದು ಆಳುವ ನೀತಿಗೆ ತಿಲಾಂಜಲಿ ಇಟ್ಟ ಬಿಹಾರದ ಮತದಾರ, ಪ್ರಧಾನಿ ಮೋದಿ ಅವರ ಯುವ, ಮಹಿಳಾ ಒಗ್ಗಟ್ಟಿನ ಘೋಷಣೆಗೆ ಪುರಸ್ಕಾರ ನೀಡಿದ್ದಾರೆ ಎಂದು ಹೇಳಿದ್ದಾರೆ.ಬಿಹಾರ ಚುನಾವಣೆಯಲ್ಲಿ ಜಾತಿ ಮತ್ತು ಓಲೈಕೆ ರಾಜಕಾರಣದ ಮತ್ತು ಅಭಿವೃದ್ಧಿ ಆಧಾರಿತ ರಾಷ್ಟ್ರೀಯತೆ ಆಧಾರಿತ ರಾಜಕಾರಣದ ನೇರ ಹಣಾಹಣಿ ಆಗಿತ್ತು. ಅಂತಿಮವಾಗಿ ರಾಷ್ಟ್ರೀಯತೆ ಆಧಾರಿತ ಅಭಿವೃದ್ಧಿ ರಾಜಕಾರಣಕ್ಕೆ ಬಿಹಾರ ಮತದಾರ ಜೈಕಾರ ಹಾಕಿದ್ದಾನೆ ಎಂದು ಹೇಳಿದ್ದಾರೆ.