ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ ಮುಂಬರುವ ದಿನಗಳಲ್ಲಿ ಬರುವ ಮುಧೋಳ ತಾಲೂಕಿನ ಟಿ.ಎ.ಪಿ.ಸಿ.ಎಂ.ಎಸ್ ಹಾಗೂ ಜಿಪಂ, ತಾಪಂ ಮತ್ತು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಮಾಜಿ ಡಿಸಿಎಂ, ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಹೇಳಿದರು.
ಕನ್ನಡಪ್ರಭ ವಾರ್ತೆ ಮುಧೋಳ
ಮುಂಬರುವ ದಿನಗಳಲ್ಲಿ ಬರುವ ಮುಧೋಳ ತಾಲೂಕಿನ ಟಿ.ಎ.ಪಿ.ಸಿ.ಎಂ.ಎಸ್ ಹಾಗೂ ಜಿಪಂ, ತಾಪಂ ಮತ್ತು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಮಾಜಿ ಡಿಸಿಎಂ, ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಹೇಳಿದರು. ನಗರದ ಹೌಸಿಂಗ್ ಕಾಲೋನಿಯಲ್ಲಿರುವ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಬಿಜೆಪಿ ಮುಖಂಡರ ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಬರುವ ಸಾಧ್ಯತೆಗಳಿವೆ. ನೀವೆಲ್ಲರೂ 30 ವರ್ಷಗಳಿಂದ ನನ್ನ ಜೊತೆ ಸೇರಿ ಪಕ್ಷ ಸಂಘಟನೆ ಮಾಡಿ ಈ ಕ್ಷೇತ್ರದಿಂದ ನನ್ನನ್ನು ಶಾಸಕನಾದಿ ಆಯ್ಕೆ ಮಾಡಿ ರಾಜ್ಯದ ವಿವಿಧ ಇಲಾಖೆಗಳ ಸಚಿವರಾಗುವಂತೆ, ಉಪಮುಖ್ಯಮಂತ್ರಿ ಆಗುವಂತೆ ಬೆಳೆಸಿದ್ದಿರಿ. ಕಳೆದ ವಿಧಾನಸಭೆಯಲ್ಲಿ ನಮಗೆ ಸೋಲಾಗಿರಬಹುದು. ಆದರೆ, ಸ್ಥಳೀಯ ಸಂಸ್ಥೆಗಳು, ಸಹಕಾರ ಕ್ಷೇತ್ರದ ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸೇರಿದಂತೆ ಇತರೆ ಎಲ್ಲ ಚುನಾವಣೆಗಳಲ್ಲಿ ಒಗ್ಗಟ್ಟಾಗಿ ನಾವೆಲ್ಲರೂ ಕೆಲಸ ಮಾಡಬೇಕಾಗಿದೆ ಎಂದು ಕೋರಿದರು.ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಸಂಗನಗೌಡ ಕಾತರಕಿ, ನಗರ ಮಂಡಲ ಅಧ್ಯಕ್ಷ ಕೆ.ಎಸ್.ಹಿರೇಮಠ, ಮುಖಂಡರಾದ ಕೆ.ಆರ್.ಮಾಚಪ್ಪನವರ, ಹನುಮಂತ ತುಳಸಿಗೇರಿ, ಕಲ್ಲಪ್ಪ ಸಬರದ, ರಾಜು ಯಡಹಳ್ಳಿ, ಪ್ರಕಾಶ ವಸ್ತ್ರದ, ಗುರುಪಾದ ಕುಳಲಿ, ರವಿ ನಂದಗಾಂವ, ರಾಜುಗೌಡ ಪಾಟೀಲ, ಬಸವರಾಜ ಮಳಲಿ, ಶ್ರೀಶೈಲ ಚಿನ್ನಣ್ಣವರ, ಸದಾಶಿವ ತೇಲಿ, ಶ್ರೀಕಾಂತ್ ಗುಜ್ಜನ್ನವರ, ನಾಗಪ್ಪ ಅಂಬಿ, ಸದಾಶಿವ ಇಟಕನ್ನವರ, ಮಾರುತಿ ಕರೆನ್ನವರ, ಧರೆಪ್ಪ ಸಾಂಗಲಿಕರ, ಲೋಕಣ್ಣ ಕತ್ತಿ ಸೇರಿದಂತೆ ಅನೇಕರು ಇದ್ದರು.