ನಾನು ಸೈನಿಕನಾಗಿದ್ದೆ, ಒಬ್ಬ ಸೈನಿಕನಿಗೆ ರಿಲ್ಯಾಕ್ಸ್ ಮೂಡ್ ಅನ್ನೋದು ಇಲ್ಲ. ನಮ್ಮ ಕೆಲಸವೇ ನಮಗೆ ದೊಡ್ಡ ರಿಲ್ಯಾಕ್ಸ್ ಎಂದು ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್‌ ಚೌಟ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ. ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್‌ ಬ್ರಿಜೇಶ್ ಚೌಟ ಅವರು ಮತದಾನದ ಮರುದಿನ ಶನಿವಾರ ದಿನಪೂರ್ತಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.

ಬೆಳಗ್ಗೆ ಮನೆಯಲ್ಲಿ ಪೂಜೆ ನೆರವೇರಿಸಿದ ಬಳಿಕ ಶರವು ಶ್ರೀಮಹಾಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿದರು. ನಂತರ ಪಕ್ಷದ ಮುಖಂಡರನ್ನು ಭೇಟಿ ಮಾಡಿದರು. ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ತಂಗಿದ್ದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರನ್ನು ಜತೆ ಸುಮಾರು ಒಂದು ಗಂಟೆ ಕಾಲ ಮಾತುಕತೆ ನಡೆಸಿದರು. ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದರು.

ಕೊಂಚಾಡಿಯಲ್ಲಿ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಇತ್ತೀಚೆಗೆ ನಿಧನರಾದ ಟ್ರಾವೆಲ್‌ ಉದ್ಯಮಿ ನಿರ್ಮಲಾ ಕಾಮತ್‌ ಮನೆಗೆ ಭೇಟಿ ನೀಡಿದರು. ಮರಕಡದಲ್ಲಿ ಮೃತಪಟ್ಟ ಬಿಜೆಪಿ ಕಾರ್ಯಕರ್ತನ ಮನೆಗೆ ಭೇಟಿ ನೀಡಿದರು. ನಂತರ ಸ್ಥಳೀಯ ಶಾಸಕರು, ಪಕ್ಷದ ಮುಖಂಡರ ಭೇಟಿ ಮಾಡಿದರು.

ಕೆಲಸವೇ ದೊಡ್ಡ ರಿಲ್ಯಾಕ್ಸ್‌: ಕ್ಯಾ.ಬ್ರಿಜೇಶ್‌ ಚೌಟ

ನಾನು ಸೈನಿಕನಾಗಿದ್ದೆ, ಒಬ್ಬ ಸೈನಿಕನಿಗೆ ರಿಲ್ಯಾಕ್ಸ್ ಮೂಡ್ ಅನ್ನೋದು ಇಲ್ಲ. ನಮ್ಮ ಕೆಲಸವೇ ನಮಗೆ ದೊಡ್ಡ ರಿಲ್ಯಾಕ್ಸ್ ಎಂದು ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್‌ ಚೌಟ ಹೇಳಿದ್ದಾರೆ.ರಾಜ್ಯದಲ್ಲಿ ನಡೆಯಲಿರುವ ಎರಡನೇ ಹಂತದ ಚುನಾವಣೆಯ ಪ್ರಚಾರ ಕಾರ್ಯದಲ್ಲೂ ಭಾಗಿಯಾಗುತ್ತೇನೆ. ನಮಗೆ ರಾಷ್ಟ್ರೀಯ ಕೆಲಸ ಮಾಡುವುದೇ ಸಂತೃಪ್ತಿ ಕೊಡುವ ಭಾವನೆ. ಗೆದ್ದು ಬಂದಲ್ಲಿ ನವಯುಗ, ನವ ಪಥ ಅನ್ನೋ ಯೋಜನೆಯನ್ನು ಸಾಕಾರಗೊಳಿಸುತ್ತೇನೆ. ಉದ್ಯಮ, ಪ್ರವಾಸೋದ್ಯಮ, ಉದ್ಯೋಗ, ಅಭಿವೃದ್ಧಿ, ಶಿಕ್ಷಣ ಸೇರಿದಂತೆ ವಿವಿಧ ವಿಚಾರಗಳಿಗೆ ಆದ್ಯತೆ ನೀಡಲಾಗುವುದು ಎಂದರು.